ಕೆಲವೆಡೆ ಶುಲ್ಕವಿಲ್ಲದೆ ಶಿಕ್ಷಣ ಕೊಡ್ತಿರೋದು ಸಿದ್ದರಾಮಯ್ಯನವ್ರಿಗೆ ಕಾಣಿಸ್ತಿಲ್ಲ: ಸಿ.ಟಿ ರವಿ

Public TV
1 Min Read
SIDDU CT RAVI

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೃಷ್ಟಿ ದೋಷವಿದೆ. ಹೀಗಾಗಿ ಅವರಿಗೆ ಒಳ್ಳೆಯ ಕೆಲಸಗಳು ಕಾಣುತ್ತಿಲ್ಲ. ಹೀಗಾಗಿ ಅವರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಾಗ್ದಾಳಿ ನಡೆಸಿದರು.

CT Ravi RSS New Delhi 1

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, RSS ನೂರಾರು ವಿದ್ಯಾಸಂಸ್ಥೆಗಳನ್ನ ಕಟ್ಟಿದೆ. ಶುಲ್ಕವಿಲ್ಲದೆ ಕೆಲವು ಕಡೆ ಶಿಕ್ಷಣ ಕೊಡುತ್ತಿದೆ. ಸಿದ್ದರಾಮಯ್ಯ ದೃಷ್ಟಿ ಸರಿ ಇಲ್ಲ. ಹೀಗಾಗಿ ಅದು ಕಾಣುತ್ತಿಲ್ಲ. ನಿಮ್ಮ ಸುತ್ತಲೂ ಇರುವವರು ಭಯೋತ್ಪಾದಕರು ಇದ್ದಾರೆ. ನಿಮ್ಮದೇ ಶಾಸಕರ ಬೆಂಕಿ ಬಿತ್ತು. ಅವರಿಗೆ ನಿಮ್ಮ ಬೆಂಬಲಿಗರೇ ಜಾಮೀನು ಕೊಡಿಸಿದ್ದಾರೆ. ಹೀಗಾಗಿ ನಿಮಗೆ ದೃಷ್ಟಿ ದೋಷವಿದೆ. ಸಿದ್ದರಾಮಯ್ಯನವರಿಗೆ ಚಿಕಿತ್ಸೆ ಅಗತ್ಯವಿದೆ. ಸಿದ್ದರಾಮಯ್ಯ ವಯಸ್ಸಾಗುತ್ತಿದೆ ಎಂದು ಕಿಡಿಕಾರಿದರು.

rss

ಈಗಲಾದರೂ ಸುಳ್ಳನ್ನು ಹೇಳುವುದನ್ನ ಬಿಡಿ. ಆರ್ ಎಸ್‍ಎಸ್‍ಗೆ ನಿಮ್ಮ ಸರ್ಟಿಫಿಕೆಟ್ ಅವಶ್ಯಕತೆ ಇಲ್ಲ. ದೇಶದ ಜನರು ಈಗಾಗಲೇ ಒಪ್ಪಿಕೊಂಡಿದ್ದಾರೆ. ಆರ್ ಎಸ್‍ಎಸ್ ದೇಶ ಭಕ್ತ ಸಂಘಟನೆಯಾಗಿದೆ. ಮುಂದಿನ ದಿನಗಳಲ್ಲಿ ತಮ್ಮ ತಪ್ಪಿನ ಅರಿವು ಆಗುತ್ತಿದೆ. ಮುಂದೆ ಅವರನ್ನು ಪ್ರಶಂಸಿಸುವ ದಿನ ಬರುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್‍ಗೆ  ಸಿ.ಟಿ ರವಿ ತಿರುಗೇಟು ನೀಡಿದರು.

siddaramaiah

ಆರ್ ಎಸ್‍ಎಸ್‍ ಆನೆ ಇದ್ದಂತೆ. ನಾಯಿಗಳು ಬೊಗಳುತ್ತವೆ ಅಂದ್ರೆ ಆನೆ ತಿರುಗಲ್ಲ. ಅದರ ಪಾಡಿದೆ ಅದು ಹೋಗುತ್ತಾ ಇರುತ್ತೆ. ಆರ್ ಎಸ್‍ಎಸ್‍ಗೂ ನಮಗೂ ತಾಯಿ ಮಕ್ಕಳ ಸಂಬಂಧ. ಆರ್ ಎಸ್‍ಎಸ್‍ ಬಗ್ಗೆ ಮಾತನಾಡಿದ್ರೆ ನಾವು ಪ್ರತಿಕ್ರಿಯೆ ನೀಡುತ್ತೇವೆ ಎಂದರು. ಇದನ್ನೂ ಓದಿ: ಶೀಘ್ರವೇ ಮನೆ ಬಾಗಿಲಿಗೆ ಮದ್ಯ ಪೂರೈಕೆ ನಿಲ್ಲಿಸಲಾಗುತ್ತದೆ: ಅಜಿತ್ ಪವಾರ್

ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಲು ರಣತಂತ್ರ ಮಾಡಲಾಗಿದೆ. ರಣತಂತ್ರದ ರಹಸ್ಯವನ್ನು ಈಗಲೇ ಹೇಳಲು ಸಾಧ್ಯವಿಲ್ಲ. ನಮ್ಮ ಬಳಿ 32 ಹೆಚ್ಚುವರಿ ಮತಗಳಿವೆ. ಕಾಂಗ್ರೆಸ್ ಬಳಿ 19 ಹೆಚ್ಚುವರಿ ಮತಗಳಿವೆ. ಬಹಿರಂಗ ಬಂಡಾಯದ ಲಾಭವನ್ನು ನಾವು ಪಡೆದುಕೊಳ್ಳುತ್ತೇವೆಂದು ಹೇಳಿದರೆ ವಿರೋಧಿಗಳು ಸಿಟ್ಟಾಗಬಹುದು. ಫಲಿತಾಂಶವೇ ಎಲ್ಲಕ್ಕೂ ಉತ್ತರ ನೀಡಲಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *