ಹೆಸರಾಂತ ನಟ ದಿ.ಎಂ.ಪಿ.ಶಂಕರ್ ಪತ್ನಿ ಮಂಜುಳ ವಿಧಿವಶ

Public TV
1 Min Read
FotoJet 41

ನ್ನಡ ಸಿನಿಮಾ ರಂಗದ ಖ್ಯಾತ ಪೋಷಕ ನಟ, ನಿರ್ಮಾಪಕ ದಿ.ಎಂ.ಪಿ ಶಂಕರ್ ಪತ್ನಿ ಮಂಜುಳಾ ಶಂಕರ್ ಇಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಹೃದಯ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ‌ಶ್ವಾನ ನಿಧನ

FotoJet 1 22

ಕೆಲವು ದಿನಗಳ ಹಿಂದೆಯಷ್ಟೇ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೃದಯ ಸಂಬಂಧಿ ಕಾಯಿಲೆ ಕಾರಣದಿಂದಾಗಿ ಆಂಜಿಯೋಗ್ರಾಮ್ ಕೂಡ ಮಾಡಲಾಗಿತ್ತು. ದಿಢೀರ್ ಅಂತ ಮತ್ತೆ ಹೃದಯಾಘಾತವಾಗಿ ಇಹಲೋಕ ತ್ಯಜಿಸಿದ್ದಾರೆ. ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

FotoJet 3 13

ಎಂ.ಪಿ.ಶಂಕರ್ ಅವರು ನಟನೆಯ ಜೊತೆಗೆ ನಿರ್ಮಾಣ ಕಾರ್ಯದಲ್ಲೂ ಬ್ಯುಸಿಯಾಗಿದ್ದಾಗ ಅವರಿಗೆ ಸಾಥ್ ನೀಡಿದವರು ಮಂಜುಳ. ಶೂಟಿಂಗ್ ಸ್ಪಾಟ್ ನಲ್ಲೂ ಶಂಕರ್ ಅವರ ಜತೆ ಮಂಜುಳಾ ಅವರು ಇರುತ್ತಿದ್ದರು. ಶಂಕರ್ ಸಿನಿಮಾವನ್ನು ನೋಡಿಕೊಳ್ಳುತ್ತಿದ್ದರೆ, ಕುಟುಂಬದ ಜವಾಬ್ದಾರಿಯನ್ನು ಮಂಜುಳಾ ಅವರು ಹೊತ್ತಿದ್ದರು. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

FotoJet 2 20

ಕನ್ನಡದ ಹೆಸರಾಂತ ನಟ ಶಂಕರ್ ಅವರು, ನಟನಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ವೀರಬಾಹು ಪಾತ್ರದ ಮೂಲಕ ಅಸಂಖ್ಯಾತ ಅಭಿಮಾನಿಗಳ ಹೃದಯದಲ್ಲಿದ್ದರು. ಡಾ.ರಾಜ್ ಕುಮಾರ್ ನಟನೆಯ ಗಂಧದ ಗುಡಿ ಚಿತ್ರಕ್ಕೆ ಇದೇ ಶಂಕರ್ ನಿರ್ಮಾಪಕರು ಎನ್ನುವುದು ವಿಶೇಷ.

Share This Article
Leave a Comment

Leave a Reply

Your email address will not be published. Required fields are marked *