ಸಿಕ್ಸ್ ಸಿಡಿಸಿದಕ್ಕೆ ಕೋಪ – ಕ್ರೀಡಾ ಸ್ಫೂರ್ತಿ ಮರೆತ ಹರ್ಷಲ್ ಪಟೇಲ್

Public TV
1 Min Read
HARSHAL PATEL AND RIYAN PARAG

ಪುಣೆ: ರಾಜಸ್ಥಾನ ರಾಯಲ್ಸ್ ಮತ್ತು ಆರ್​ಸಿಬಿ ನಡುವಿನ ಪಂದ್ಯದ ಬಳಿಕ ರಾಜಸ್ಥಾನ ತಂಡದ ಆಲ್‍ರೌಂಡರ್ ರಿಯಾನ್ ಪರಾಗ್‍ಗೆ ಆರ್​ಸಿಬಿ ಬೌಲರ್ ಹರ್ಷಲ್ ಪಟೇಲ್ ಶೇಕ್ ಹ್ಯಾಂಡ್ ಮಾಡದೆ ಕ್ರೀಡಾ ಸ್ಫೂರ್ತಿ ಮರೆತ ಪ್ರಸಂಗ ನಡೆದಿದೆ.

HARSHAL PATEL 1

ನಿನ್ನೆ ನಡೆದ ಆರ್​ಸಿಬಿ ಮತ್ತು ರಾಜಸ್ಥಾನ ಪಂದ್ಯದಲ್ಲಿ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ರಾಜಸ್ಥಾನ ತಂಡಕ್ಕೆ ಆಲ್‍ರೌಂಡರ್ ರಿಯಾನ್ ಪರಾಗ್ ನೆರವಾದರು. ತಂಡದ ರನ್ ಹಿಗ್ಗಿಸಲು ಕೊನೆಯ ಓವರ್‌ನಲ್ಲಿ ಸ್ಫೋಟಕ ಆಟಕ್ಕೆ ಮುಂದಾದ ಪರಾಗ್, ಹರ್ಷಲ್ ಪಟೇಲ್ ಎಸೆದ ಕೊನೆಯ ಓವರ್‌ನಲ್ಲಿ 1 ಫೋರ್ ಮತ್ತು 2 ಸಿಕ್ಸ್ ಚಚ್ಚಿದರು. ಇದರಿಂದ ಕೋಪಗೊಂಡ ಹರ್ಷಲ್ ಪಟೇಲ್ ಡಗೌಟ್ ಕಡೆಗೆ ಸಾಗುತ್ತಿದ್ದ ಪರಾಗ್‍ರನ್ನು ಕೆಣಕಿದರು. ಈ ವೇಳೆ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಇದನ್ನೂ ಓದಿ: ಕೊನೆಯಲ್ಲಿ ಪರಾಗ್ ಸ್ಫೋಟಕ ಆಟ – ಆರ್‌ಆರ್‌ಗೆ 29 ರನ್‍ಗಳ ಜಯ, ಮತ್ತೆ ಕೊಹ್ಲಿ ವಿಫಲ

HARSHAL PATEL AND RIYAN PARAG 1

ಆ ಬಳಿಕ ಹಿರಿಯ ಆಟಗಾರರ ಮಧ್ಯಪ್ರವೇಶದಿಂದ ಪರಿಸ್ಥಿತಿ ಶಾಂತಗೊಂಡಿತು. ಆ ನಂತರ ರಾಜಸ್ಥಾನ ತಂಡ ಆರ್​ಸಿಬಿ ವಿರುದ್ಧ ಗೆದ್ದ ಬಳಿಕ ಆಟಗಾರರು ಪರಸ್ಪರ ಶೇಕ್ ಹ್ಯಾಂಡ್ ಮಾಡುತ್ತಿದ್ದರು. ಪರಾಗ್, ಹರ್ಷಲ್ ಪಟೇಲ್‍ಗೆ ಶೇಕ್ ಹ್ಯಾಂಡ್ ಮಾಡಲು ಮುಂದಾದಾಗ ಪಟೇಲ್ ನಿರಾಕರಿಸಿ ಕಿರಿಯ ಆಟಗಾರನ ಮುಂದೆ ಕ್ರೀಡಾ ಸ್ಫೂರ್ತಿ ಮರೆತರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಹರ್ಷಲ್ ಪಟೇಲ್ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಇದನ್ನೂ ಓದಿ: 6 ಸಾವಿರ ರನ್‌ಗಳ ಗಡಿ ದಾಟಿ ಐಪಿಎಲ್ `ಶಿಖರ’ವೇರಿದ ಧವನ್

ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಆರ್​ಸಿಬಿ ತಂಡ ರಾಜಸ್ಥಾನ ನೀಡಿದ 145 ರನ್‍ಗಳ ಅಲ್ಪಮೊತ್ತವನ್ನು ಚೇಸ್ ಮಾಡಲಾಗದೇ 29 ರನ್‍ಗಳ ಅಂತರದಿಂದ ಸೋಲು ಕಂಡಿತು. ಇತ್ತ ರಾಜಸ್ಥಾನ ತಂಡ ಆರ್​ಸಿಬಿ ವಿರುದ್ಧದ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

Share This Article
Leave a Comment

Leave a Reply

Your email address will not be published. Required fields are marked *