ಶಿವಮೊಗ್ಗ: ಭದ್ರಾವತಿ (Bhadravati) ತಾಲೂಕಿನ ಕೂಡ್ಲಿಗೆರೆಯ ಅರಣ್ಯ ಪ್ರದೇಶದಲ್ಲಿ ಪೊಲೀಸರ ಕಣ್ತಪ್ಪಿಸಿ ಜೂಜಾಡುತ್ತಿದ್ದ (Gambling) ಗ್ಯಾಂಗ್ನ್ನು ಪೊಲೀಸರು (Police) ಚಾಣಾಕ್ಷತನದಿಂದ ವಶಕ್ಕೆ ಪಡೆದಿದ್ದಾರೆ. ಡ್ರೋನ್ ಬಳಸಿ ಆರೋಪಿಗಳ ಮಾಹಿತಿ ಕಲೆ ಹಾಕಿ ಅವರನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅರಣ್ಯ ಭಾಗದಲ್ಲಿ ಜೂಜುಕೋರರು ನಿರಂತರವಾಗಿ ಜೂಜಾಟದಲ್ಲಿ ತೊಡಗಿಕೊಳ್ಳುತ್ತಿದ್ದರು. ಅರಣ್ಯ ಭಾಗ ಆಗಿದ್ದರಿಂದ ಮಾಹಿತಿ ತಿಳಿದು ಪೊಲೀಸರು ಅಲ್ಲಿಗೆ ತಲುಪುವ ಮುನ್ನವೇ ಆರೋಪಿಗಳು ಪರಾರಿಯಾಗುತ್ತಿದ್ದರು. ಇದೇ ಕಾರಣಕ್ಕೆ ಪೊಲೀಸರು ಡ್ರೋನ್ ಬಳಸಿ, ಆರೋಪಿಗಳ ಚಲನವಲನವನ್ನು ಪರಿಶೀಲಿಸಿದ್ದರು. ಇದನ್ನೂ ಓದಿ: ಮತ್ತೊಂದು `ಮಹಾʼ ಲೈಂಗಿಕ ದೌರ್ಜನ್ಯ ಪ್ರಕರಣ – 350 ಅಶ್ಲೀಲ ವಿಡಿಯೋ ಪತ್ತೆ, ಕಾಮುಕ ಅಂದರ್
ಈ ಮಾಹಿತಿ ಆಧಾರದ ಮೇಲೆ ಭದ್ರಾವತಿ ಗ್ರಾಮೀಣ ಠಾಣೆ ಪೋಲೀಸರು ತಕ್ಷಣ ದಾಳಿ ನಡೆಸಿ 19 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಅಕ್ರಮ ಜೂಜು ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮುಂಬೈನಲ್ಲಿ ‘ಪಹಲ್ಗಾಮ್’ ಮಾದರಿಯ ದಾಳಿ – ಕಲ್ಮಾ ಪಠಿಸದ ಇಬ್ಬರು ಹಿಂದೂಗಳಿಗೆ ಚಾಕು ಇರಿದ ದುಷ್ಕರ್ಮಿ

