ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎನ್ನಲಾಗಿರುವ ಬಗ್ಗೆ ದಿನೇ ದಿನೇ ರೋಚಕ ಸಂಗತಿ ಹೊರಬರುತ್ತಿದೆ. ಮಂಗಳವಾರ ಸಿಐಡಿ ತಂಡ ಪಿಎಸ್‌ಐ ಅಕ್ರಮಕ್ಕೆ ಸಂಬಂಧಪಟ್ಟ ಆರೋಪಿ ಎನ್ ಸುನೀಲ್ ಕುಮಾರ್‌ನನ್ನು ಬಂಧಿಸಿದ್ದಾರೆ.
ಒಟ್ಟಾರೆಯಾಗಿ ಪಿಎಸ್‌ಐ ನೇಮಕಾತಿ ಅಕ್ರಮದ ಜಾಡನ್ನು ಬೆನ್ನು ಹಿಡಿದ ಸಿಬಿಐ ತಂಡ ಇಲ್ಲಿಯವರೆಗೆ 16 ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ದಿವ್ಯಾ ಹಾಗರಗಿ ವಾರದಲ್ಲಿ ಶರಣಾಗದಿದ್ದರೆ ಆಸ್ತಿ ಮುಟ್ಟುಗೋಲು – ನ್ಯಾಯಾಲಯ ಆದೇಶ
ಕಲಬುರಗಿ ನಿವಾಸಿಯಾಗಿರುವ ಸುನೀಲ್ ಕುಮಾರ್ ಪಿಎಸ್‌ಐ ನೇಮಕಾತಿ ಪರೀಕ್ಷೆಯ ಕೇಂದ್ರ ಸ್ಥಾನವಾದ ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿಯೇ ಪರೀಕ್ಷೆ ಬರೆದಿದ್ದಾರೆ ಎಂದು ಸಿಐಡಿ ಪೊಲೀಸರು ತಿಳಿಸಿದ್ದಾರೆ.
ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ ಉಪಕರಣ ಬಳಸಿ, ಉತ್ತೀರ್ಣನಾಗಿರುವ ಆರೋಪ ಸುನೀಲ್ ಮೇಲಿದೆ. ಹಗರಣದಲ್ಲಿ ದೊಡ್ಡ ಪಾತ್ರ ವಹಿಸಿದ ರುದ್ರಗೌಡ ಡಿ ಪಾಟೀಲ್ ಮುಖಾಂತರವೇ ಸುನೀಲ್ ಕುಮಾರ್ ಅಕ್ರಮದಲ್ಲಿ ಭಾಗಿಯಾಗಿದ್ದಾನೆ ಎಂದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಪ್ರಮುಖರೊಂದಿಗೆ ಆರೋಪಿ ದಿವ್ಯಾ ಹಾಗರಗಿ ಫೋಟೋ ವೈರಲ್
ಅಕ್ರಮಕ್ಕೆ ಸಂಬಂಧಿಸಿದಂತೆ ದಾಖಲೆಗಳ ಮರು ಪರಿಶೀಲನೆಗೆ ಹಾಜರಾಗಲು ಸುನೀಲ್‌ಗೆ ಕರೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಸುನೀಲ್ ಸೋಮವಾರ ಬೆಂಗಳೂರಿನ ಸಿಐಡಿ ಕಚೇರಿಗೆ ತೆರಳಿದ್ದ. ಪರಿಶೀಲನೆ ವೇಳೆ ಅಕ್ರಮ ನಡೆದ ಸಂದೇಹ ಬಂದಿದ್ದು, ಆರೋಪಿಯನ್ನು ಅಧಿಕಾರಿಗಳು ಸ್ಥಳದಲ್ಲೇ ವಶಕ್ಕೆ ಪಡೆದರು. ಸಿಐಡಿ ಅಧಿಕಾರಿಗಳ ತಂಡ ಮಂಗಳವಾರ ಸುನೀಲ್‌ನನ್ನು ಕಲಬುರಗಿಗೆ ಕರೆತಂದರು.
ಇದೀಗ ಸುನೀಲ್ ಪಿಎಸ್‌ಐ ಅಕ್ರಮದ ಸೂತ್ರದಾರ ಆರೋಪಿ ರುದ್ರಗೌಡನಿಗೆ 40 ಲಕ್ಷ ರೂ. ನೀಡಿದ್ದ ಎಂಬ ಸಂಶಯವಿದ್ದು, ವಿಚಾರಣೆ ಮುಂದುವರಿದಿದೆ.