DistrictsKalaburagiKarnatakaLatestLeading NewsMain Post

ದಿವ್ಯಾ ಹಾಗರಗಿ ವಾರದಲ್ಲಿ ಶರಣಾಗದಿದ್ದರೆ ಆಸ್ತಿ ಮುಟ್ಟುಗೋಲು – ನ್ಯಾಯಾಲಯ ಆದೇಶ

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಸಿಐಡಿಯಿಂದ ತಲೆ ಮರೆಸಿಕೊಂಡಿರುವ ದಿವ್ಯಾ ಹಾಗರಗಿ ಸೇರಿ 6 ಜನರಿಗೆ ಕಂಟಕ ಎದುರಾಗಿದೆ. ಮುಂಬೈ ಬ್ಲಾಸ್ಟ್ ಪ್ರಕರಣದಲ್ಲಿ ದಾವುದ್ ಇಬ್ರಾಹಿಂಗೆ ನೀಡಲಾಗಿದ್ದ ಅರೆಸ್ಟ್ ವಾರೆಂಟ್ ಮಾದರಿಯಲ್ಲಿಯೇ ಈ 6 ಆರೋಪಿಗಳಿಗೆ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.

ಕರ್ನಾಟಕದ ಅಪರಾಧ ಪ್ರಕರಣಗಳಲ್ಲಿ ಇಂತಹ ಅರೆಸ್ಟ್ ವಾರೆಂಟ್ ಜಾರಿ ಆಗಿರುವುದು ಬಹು ಅಪರೂಪ. ತನಿಖಾ ಹಂತದಲ್ಲಿ ಜಾರಿ ಮಾಡಲಾಗುವ ವಾರೆಂಟ್ ಅನ್ವಯ ಆರೋಪಿಗಳು ಎಲ್ಲಿದ್ದರೂ ಬಂದು ಶರಣಾಗಲೇ ಬೇಕು. ಇಲ್ಲದಿದ್ದರೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕುವ ಸಾಧ್ಯತೆ ಇರುತ್ತದೆ. ಇದನ್ನೂ ಓದಿ: ಆರಗ ಜ್ಞಾನೇಂದ್ರ ರಾಜೀನಾಮೆ ನೀಡಬೇಕು – ರಾಜ್ಯಪಾಲರಿಗೆ ಎಎಪಿ ಮನವಿ

court order law

ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮದ ಮಾಸ್ಟರ್ ಮೈಂಡ್ ದಿವ್ಯಾ ಹಾಗರಗಿ, ಮಂಜುನಾಥ್ ಮೇಳಕುಂದಿ, ರವೀಂದ್ರ ಮೇಳಕುಂದಿ, ಅರ್ಚನಾ, ಕಾಶಿನಾಥ್, ಶಾಂತಿಬಾಯಿಗೆ ಕಲಬುರಗಿಯ 3ನೇ ಜೆಎಂಎಫ್‌ಸಿ ನ್ಯಾಯಾಲಯ ಇಂತಹದೊಂದು ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ಮುಂಬೈ ಬ್ಲಾಸ್ಟ್ ಪ್ರಕರಣದಲ್ಲಿ ದಾವುದ್ ಇಬ್ರಾಹಿಂಗೆ ನೀಡಲಾಗಿದ್ದ ಅರೆಸ್ಟ್ ವಾರೆಂಟ್ ಉಲ್ಲೇಖಿಸಿ, ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ ಕೋರಿಕೆ ಸಲ್ಲಿಸಿದ್ದರು. ಇದನ್ನೂ ಓದಿ: ಬಿಜೆಪಿ ಪ್ರಮುಖರೊಂದಿಗೆ ಆರೋಪಿ ದಿವ್ಯಾ ಹಾಗರಗಿ ಫೋಟೋ ವೈರಲ್

ಸಿಐಡಿ ಕೋರಿಕೆಯಂತೆ ತನಿಖಾ ಹಂತದ ಅರೆಸ್ಟ್ ವಾರೆಂಟ್ ಜಾರಿ ಮಾಡಿ, ನ್ಯಾಯಾಲಯ ಆದೇಶ ಹೊರಡಿಸಿದೆ. ಒಂದು ವಾರದ ಒಳಗಡೆ ಆರೋಪಿಗಳು ಶರಣಾಗದಿದ್ದರೆ, ಉದ್ಘೋಷಿತ ಅಪರಾಧಿ ಎಂದು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳವ ಎಲ್ಲಾ ಸಾಧ್ಯತೆ ಇದೆ. ಕಳೆದ 15 ದಿನಗಳಿಂದ ದಿವ್ಯಾ ಸೇರಿ 6 ಮಂದಿ ಆರೋಪಿಗಳು ಸಿಐಡಿಯಿಂದ ತಲೆ ಮರೆಸಿಕೊಂಡಿದ್ದಾರೆ. ಸಾಕಷ್ಟು ಶೋಧ ನಡೆಸಿದರೂ ಸುಳಿವು ಸಿಗದ ಹಿನ್ನೆಲೆಯಲ್ಲಿ ಇಂತಹ ಕಠಿಣ ಮಾರ್ಗಕ್ಕೆ ಸಿಐಡಿ ಇಳಿದಿದೆ.

Leave a Reply

Your email address will not be published.

Back to top button