ತೆಲುಗು ಸಿನಿಮಾ ರಂಗದ ಖ್ಯಾತ ನಟ ಮೋಹನ್ ಬಾಬು ಅವರ ಪುತ್ರಿ ಲಕ್ಷ್ಮಿ ಮಂಚು ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ಕಾಸ್ಟಿಂಗ್ ಕೌಚ್ ಅನ್ನುವುದು ಸಾಮಾನ್ಯ ನಟಿಗೆ ಅಥವಾ ಹೊಸದಾಗಿ ಬರುವ ಕಲಾವಿದೆಯರಿಗೆ ಮಾತ್ರವಲ್ಲ, ಖ್ಯಾತ ನಟರ ಮಗಳಾದ ನನಗೂ ಆಗಿದೆ ಎಂದು ಹೇಳುವ ಮೂಲಕ ತೆಲುಗು ಸಿನಿಮಾ ರಂಗದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಇದನ್ನೂ ಓದಿ : ಮದ್ವೆ ಸೀರೆ ವಾಪಸ್ಸು ಕೊಟ್ರಂತೆ ಸಮಂತಾ: ಮಳೆ ನಿಂತರು ಮಳೆ ಹನಿ ನಿಲ್ಲದು
ನಟರ ಮಕ್ಕಳು ಸಿನಿಮಾ ರಂಗದಲ್ಲಿ ಸೇಫ್ ಅನ್ನುವ ಮಾತು ನನ್ನ ವಿಷಯದಲ್ಲಿ ಸುಳ್ಳಾಗಿದೆ. ನನ್ನ ತಂದೆ ಹೆಸರಾಂತ ನಟ. ಆದರೂ, ನನಗೆ ಇಂತಹ ಕಹಿ ಅನುಭವವಾಗಿದೆ. ಯಾರು, ಎಲ್ಲಿ, ಹೇಗೆ ಇರುತ್ತಾರೆ ಎನ್ನುವುದನ್ನು ಊಹಿಸಲೂ ಆಗುವುದಿಲ್ಲ. ನಮಗೆ ಸುಲಭವಾಗಿ ಅವಕಾಶ ಸಿಗುತ್ತದೆ ಎನ್ನುವ ನಂಬಿಕೆ ಹೇಗೆಲ್ಲ ಸುಳ್ಳು ಮಾಡುತ್ತದೆ ಎಂದು ಆಗಿರುವ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ : ಡಾ.ರಾಜ್ ಹುಟ್ಟಿದ ಊರಲ್ಲಿ ಫಸ್ಟ್ ಟೈಮ್ ಸಿನಿಮಾ ಮುಹೂರ್ತ
ಲಕ್ಷ್ಮೀ ಮಂಚು ಆಡಿದ ಈ ಮಾತು ಅವರು ಯಾವೆಲ್ಲ ಸಿನಿಮಾಗಳನ್ನು ಕೈ ಬಿಟ್ಟಿದ್ದಾರೆ ಎನ್ನುವುದರತ್ತ ಹೊರಳಿದ್ದು, ಯಾರು ಇವರಿಗೆ ಆ ರೀತಿ ತೊಂದರೆ ಕೊಟ್ಟಿರಬಹುದು ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಸಿನಿಮಾ ಮತ್ತು ಕಿರುತೆರೆ ಎರಡರಲ್ಲೂ ಕೆಲಸ ಮಾಡಿರುವ ಲಕ್ಷ್ಮೀ, ಯಾವ ಕ್ಷೇತ್ರದಲ್ಲಿ ತಮಗೆ ಇಂತಹ ಕಹಿ ಘಟನೆ ನಡೆದಿದೆ ಎಂದು ಹೇಳಿಕೊಂಡಿಲ್ಲ. ಹಾಗಾಗಿ ಯಾವ ಕ್ಷೇತ್ರದಲ್ಲಿ ಅವರಿಗೆ ತೊಂದರೆ ಆಗಿದೆ ಎನ್ನುವುದು ನಿಗೂಢ. ಇದನ್ನೂ ಓದಿ : ಸಿನಿಮಾ ರಂಗಕ್ಕೆ ಬಾ ಅನ್ನಲಿಲ್ಲ ಬಂದ, ರಾಜಕಾರಣಕ್ಕೆ ಅವನನ್ನೇ ಕೇಳಬೇಕು : ಪುತ್ರನ ಬಗ್ಗೆ ಸುಮಲತಾ ಮಾತು
ಈವರೆಗೂ ಇಂಗ್ಲಿಷ್, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿರುವ ಲಕ್ಷ್ಮಿ, ಹಲವು ಟಿವಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇಂಗ್ಲಿಷ್ ಸಿನಿಮಾದ ಮೂಲಕವೇ ಇವರು ಸಿನಿಮಾ ರಂಗಕ್ಕೆ ಬಂದಿರುವುದು ವಿಶೇಷ.