ಕನ್ನಡದ ಮತ್ತೋರ್ವ ಪ್ರತಿಭಾವಂತ ನಿರ್ದೇಶಕ ಪ್ರಶಾಂತ್ ರಾಜ್ ತಮಿಳು ಸಿನಿಮಾ ರಂಗಕ್ಕೆ ಹಾರಿದ್ದಾರೆ. ಈಗವರು ತಮಿಳಿನ ಸಿನಿಮಾವೊಂದಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಅಂದುಕೊಂಡಂತೆ ಆದರೆ ಇದೇ ತಿಂಗಳು ಕೊನೆಯ ವಾರದಿಂದ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ. ಇದನ್ನೂ ಓದಿ : ಸಾಯಿ ಪಲ್ಲವಿಗೆ ‘ಸಾಯಿ’ ಹೆಸರು ಬಂದಿದ್ದು ಹೇಗೆ?
ಲವ್ ಗುರು ಸೇರಿದಂತೆ ಅನೇಕ ಚಿತ್ರಗಳಿಗೆ ನಿರ್ದೇಶನ ಮಾಡಿರುವ ಪ್ರಶಾಂತ್ ರಾಜ್, ಇದೇ ಮೊದಲ ಬಾರಿಗೆ ತಮಿಳು ಚಿತ್ರ ಮಾಡುತ್ತಿದ್ದು, ತಮ್ಮದೇ ಆದ ಶೈಲಿಯ ಕಥೆಯನ್ನೇ ತಮಿಳಿನಲ್ಲೂ ಆಯ್ಕೆ ಮಾಡಿದ್ದಾರೆ. ಲವ್, ಕಲರ್ ಫುಲ್ ಮತ್ತು ಮ್ಯೂಸಿಕ್ ಈ ಮೂರು ಪ್ರಶಾಂತ್ ರಾಜ್ ಮಂತ್ರಗಳು. ಅವರ ಬಹುತೇಕ ಚಿತ್ರಗಳು ಕಲರ್ ಫುಲ್ ಆಗಿ ಮೂಡಿ ಬಂದಿವೆ. ಹೊಸ ಹೊಸ ಲೊಕೇಶನ್ ಗಳಲ್ಲಿ ಚಿತ್ರಿತವಾಗಿವೆ. ತಮಿಳು ಸಿನಿಮಾದಲ್ಲೂ ಈ ಸೂತ್ರವನ್ನೇ ಅವರು ಪಾಲಿಸಿಕೊಂಡು ಹೋಗುತ್ತಿದ್ದಾರಂತೆ. ಇದನ್ನೂ ಓದಿ : 12 ವರ್ಷಗಳ ನಂತರ ಕನ್ನಡಕ್ಕೆ ಖುಷ್ಬು : ರವಿಚಂದ್ರನ್ ಪತ್ನಿಯಾಗಿ ನಟನೆ
ಪ್ರಶಾಂತ್ ರಾಜ್ ಅವರ ತಮಿಳಿನ ಚೊಚ್ಚಲು ಚಿತ್ರಕ್ಕೆ ಸಂತಾನಂ ಹೀರೋ. ನಾಯಕಿಯ ಆಯ್ಕೆ ಇನ್ನೂ ಆಗಿಲ್ಲ. ಕನ್ನಡ ಹುಡುಗಿಯನ್ನೇ ಅಲ್ಲಿಗೆ ಕರೆದುಕೊಂಡು ಹೋಗುತ್ತಾರಂತೆ. ಈ ತಿಂಗಳು ಕೊನೆಯಲ್ಲಿ ಶೂಟಿಂಗ್ ಶುರುವಾದರೆ, ಆಗಸ್ಟ್ ನಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳುತ್ತಾರೆ ನಿರ್ದೇಶಕರು. ಇದನ್ನೂ ಓದಿ : ಎಪ್ರಿಲ್ 2ನೇ ವಾರದಲ್ಲಿ ನಟಿ ಕಾವ್ಯ ಶಾ ಮದ್ವೆ : ಮಾಧ್ಯಮ ಲೋಕದ ಹುಡುಗನ ಜತೆ ಸಪ್ತಪದಿ
ಸಾಧು ಕೋಕಿಲಾ ಸೇರಿದಂತೆ ಕೆಲ ನಟರೂ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಸುಧಾಕರ್ ಅವರ ಸಿನಿಮಾಟೋಗ್ರಫಿ ಚಿತ್ರಕ್ಕಿರಲಿದೆ. ಕನ್ನಡದ ಸಂಗೀತ ನಿರ್ದೇಶಕರೇ ಈ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ.