ಚಿಕನ್ ಮಸ್ತಾನಿ ಮಾಡಿ ಸವಿಯಲು ಇಲ್ಲಿದೆ ಮಾಡುವ ವಿಧಾನ

Public TV
1 Min Read
Guntur Chicken Curry

ರುಚಿಯಾದ ಆಹಾರ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಾಂಸಾಹಾರ ಅಡುಗೆಗಳು ಎಂದರೆ ಬಾಯಲ್ಲಿ ನೀರೂರಿಸುತ್ತದೆ.  ಅತಿಥಿಗಳು ಬಂದಾಗ ಅಥವಾ ನಾಲಿಗೆ ರುಚಿಯಾದ ಆಹಾರ ತಿನ್ನಲು ಬಯಸಿದಾಗ,  ನೀವೂ ಮನೆಯಲ್ಲಿ ಸುಲಭ ವಿಧಾನಗಳ ಮೂಲಕ ಚಿಕನ್ ಮಸ್ತಾನಿಯನ್ನು ತಯಾರಿಸಬಹುದಾಗಿದೆ.

ಬೇಕಾಗುವ ಸಾಮಗ್ರಿಗಳು:
* ಚಿಕನ್-1 ಕೆಜಿ
* ಅಡುಗೆ ಎಣ್ಣೆ- ಅರ್ಧ ಕಪ್
* ತುಪ್ಪ-2 ಚಮಚ,
* ಈರುಳ್ಳಿ ಪೇಸ್ಟ್- ಅರ್ಧ ಕಪ್
* ಶುಂಠಿ ಬೆಳ್ಳುಳ್ಳಿ ಪೇಸ್ಟ್-1 ಚಮಚ
* ಜೀರಿಗೆ ಪುಡಿ-1 ಚಮಚ
* ಗರಂ ಮಸಾಲ-1 ಚಮಚ
* ಮೆಣಸಿನ ಹುಡಿ-1 ಚಮಚ
* ಅರಿಶಿನ ಹುಡಿ – 1 ಚಮಚ
* ಕರಿಮೆಣಸಿನ ಹುಡಿ-1 ಚಮಚ
* ಚಾಟ್ ಮಸಾಲ-1 ಚಮಚ
* ಮೊಸರು-1 ಕಪ್
* ರುಚಿಗೆ ತಕ್ಕಷ್ಟು ಉಪ್ಪು
* ಕೊತ್ತಂಬರಿ ಸೊಪ್ಪು- ಸ್ವಲ್ಪ

ಮಾಡುವ ವಿಧಾನ:
* ಒಂದು ಬಾಣಲೆಗೆ ಅಡುಗೆ ಎಣ್ಣೆ, ಈರುಳ್ಳಿ ಪೇಸ್ಟ್, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ, ನಂತರ ಚಿಕನ್ ಹಾಕಿ ಅದಕ್ಕೆ ಒಂದೊಂದು ಚಮಚ ಜೀರಿಗೆ, ಮೆಣಸಿನ ಹುಡಿ, ಗರಂ ಮಸಾಲೆ, ಅರಿಸಿನ ಹುಡಿ, ಕಾಳುಮೆಣಸು ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಇದನ್ನೂ ಓದಿ: ಖಾರವಾದ ಮಟನ್ ಖೀಮಾ ಮಾಡಿ ಟೇಸ್ಟ್ ನೋಡಿ

Chicken Mastani Recipe 1

* ನಂತರ ಚಾಟ್ ಮಸಾಲ, ಗಟ್ಟಿ ಮೊಸರು ಸೇರಿಸಿ. ಚೆನ್ನಾಗಿ ಬೇಯಿಸಿ. ಇದನ್ನೂ ಓದಿ: ಸ್ಪೆಷಲ್ ಮಟನ್ ಬಿರಿಯಾನಿ ಮಾಡುವ ವಿಧಾನ ನಿಮಗಾಗಿ
* ನಂತರ ಇನ್ನೊಂದು ಬಾಣಲೆಯಲ್ಲಿ ಸಾಸಿವೆ, ಜೀರಿಗೆ, ಬೆಳ್ಳುಳ್ಳಿ,ಕೊತ್ತಂಬರಿ ಒಗ್ಗರಣೆ ಮಾಡಿಕೊಂಡು ಚಿಕನ್ ಪಾತ್ರಗೆ ಹಾಕಿದರೆ ರುಚಿಯಾದ ಚಿಕನ್ ಮಸ್ತಾನಿ ಸವಿಯಲು ಸಿದ್ಧವಾಗುತ್ತದೆ.

Share This Article