ನಾನು ಅತ್ತಾಗ ಕಪಿಲ್‍ದೇವ್ ಕಣ್ಣನ್ನು ಒರೆಸಿ ಎತ್ತಿಕೊಂಡಿದ್ದರು: ಸುದೀಪ್

Public TV
3 Min Read
sudeep 83 movie

ಬೆಂಗಳೂರು: ’83’ ಸಿನಿಮಾ ನಮ್ಮೊಂದಿಗೆ ಒಂದು ರೀತಿಯ ಭಾವನೆಯನ್ನು ಹೊಂದಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ

ಕನ್ನಡದಲ್ಲಿ ’83’ ಸಿನಿಮಾ ಬಿಡುಗಡೆಯಾಗುವ ಹಿನ್ನೆಲೆ ಈ ಸಿನಿಮಾವನ್ನು ಕನ್ನಡದಲ್ಲಿ ಕಿಚ್ಚ ವಿತರಸುತ್ತಿದ್ದು, ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇದನ್ನೂ ಓದಿ: ಮತ್ತೊಮ್ಮೆ ನಾವು ಕ್ಯೂಟ್ ಜೋಡಿಗಳು ಎಂದು ತೋರಿಸಿಕೊಟ್ಟ ಯಶ್, ರಾಧಿಕಾ

sudeep 83 movie 1

ಈ ವೇಳೆ ಕಪಿಲ್ ಅವರನ್ನು ನೆನೆದ ಸುದೀಪ್, ತುಂಬಾ ವರ್ಷಗಳ ಹಿಂದೆ ನಾನು ಅಂದ್ರೆ 87-88 ರಲ್ಲಿ ವೆಸ್ಟ್ ಇಂಡಿಸ್ ಜೊತೆ ಆಡುವಾಗ ಕಪಿಲ್ ಸರ್ ನೋಡೋಕೆ ಹೋಗಿದ್ದೆ. ಅಲ್ಲಿ ಅವರ ಜೊತೆ ಫೋಟೋ ಕೇಳಿದೆ. ಆದ್ರೆ ನನ್ನ ಬ್ಯಾಡ್ ಲಕ್ ಕ್ಯಾಮೆರಾ ವರ್ಕ್ ಆಗಿಲ್ಲ. ಆಗ ನಾನು ಆಳ್ತಾ ಇದೆ. ಅವಾಗ ನನ್ನ ಕಣ್ಣನ್ನು ಒರೆಸಿ ನನ್ನನ್ನು ಎತ್ತಿಕೊಂಡಿದ್ದರು. ಆದರೆ ಈಗ ಇವರ ಸಿನಿಮಾ ವಿತರಣೆ ಮಾಡುವ ಭಾಗ್ಯ ಸಿಕ್ಕಿದೆ ಎಂದು ಭಾವುಕರಾದರು.

ನನಗೆ ಕಪಿಲ್ ತುಂಬಾ ಇಷ್ಟ. ಆ ದಿನ ನನಗೆ ತುಂಬಾ ವಿಶೇಷ, ನನಗೆ ಅವರು ಹೀರೋ ಆದವರು. ತುಂಬಾ ವರ್ಷ ಅವರ ಜೊತೆ ಫೋಟೋಗಾಗಿ ತುಂಬಾ ವೇಟ್ ಮಾಡಿದ್ದೀನಿ. ನಾನು ಪ್ರೀತಿ ಮಾಡುವ ಗೇಮ್, ಆಡೋಕೆ ಸಿಕ್ಕಿರೋ ಗೇಮ್ ಕ್ರಿಕೆಟ್. ಕನ್ನಡಕ್ಕೆ 83 ಸಿನಿಮಾ ಅರ್ಪಿಸುತ್ತಿರುವುದಕ್ಕೆ ನನಗೆ ಖುಷಿಯಾಗಿದೆ ಎಂದರು.

sudeep 83 movie 2

83 ಸಿನಿಮಾದ ಟ್ರೇಲರ್ ನೋಡಿದ ಪ್ರತಿಯೊಬ್ಬರ ಮನಸ್ಸು ಬದಲಾಗುತ್ತೆ. ಬಾರಿ ಕ್ರಿಕೆಟ್ ನೋಡುವವರು ಮಾತ್ರವಲ್ಲ ಎಲ್ಲರೂ ಇದನ್ನು ಇಷ್ಟ ಪಡುತ್ತಾರೆ. ರಣವೀರ್ ನಟನೆ ಮಾತ್ರ ಅದ್ಭುತವಾಗಿ ಮೂಡಿಬಂದಿದೆ. ಅವರು ಹೇಗೆ ಇದಕ್ಕೆ ಕೆಲಸ ಮಾಡಿದ್ದಾರೆ ಎಂಬುದು ಈ ಟ್ರೇಲರ್ ನೋಡಿದರೆ ತಿಳಿಯುತ್ತೆ. ಅವರು ಇಲ್ಲಿ ಒಂದು ಡೈಲಾಗ್ ಹೇಳಿದ್ದಾರೆ ಎಂದು ರಣವೀರ್ ಅವರನ್ನು ಮತ್ತೊಮ್ಮೆ ಈ ಸಿನಿಮಾದ ಡೈಲಾಗ್ ಹೇಳಿ ಎಂದು ಕೇಳಿದರು.

ಮೊದಲು ಸಿನಿಮಾ ಎಂದರೆ ಸಿನಿಮಾ ಅಷ್ಟೇ. ಆದರೆ ಈ ಸಿನಿಮಾ ಒಂದು ರೀತಿಯ ಭಾವನೆಯನ್ನು ಹೊಂದಿದೆ. ನಾವು 83 ಅಲ್ಲಿ ಕ್ರಿಕೆಟ್ ನಡೆಯಬೇಕಾದರೆ ಚಿಕ್ಕವರಾಗಿದ್ದೆವು. ನಮಗೂ ಕ್ರಿಕೆಟ್ ಎಂದರೆ ಏನು ಎಂದು ಗೊತ್ತಿತ್ತು. ಆದರೆ ಆಗ ನಮ್ಮ ಭಾಷೆಯಲ್ಲಿ ಕ್ರಿಕೆಟ್ ಇರಲಿಲ್ಲ. ನಮಗೆ ಆ ಭಾಷೆ ಅರ್ಥವಾಗುತ್ತಿರಲಿಲ್ಲ. ಆದರೆ ಈ ಬಗ್ಗೆ ನಮಗೆ ಕಾಲೇಜಿಗೆ ಬಂದಾಗ ತಿಳಿಯಿತು ಎಂದರು. ಇದನ್ನೂ ಓದಿ: ಆಲಿಯಾ ವಿರುದ್ಧ FIR ದಾಖಲಿಸಲು ಮುಂದಾದ ಮುಂಬೈ ಪಾಲಿಕೆ

sudeep 83 movie 3

ನಮಗೆ ಆಟದ ಹಿಂದೆ ಏನಾಗಿತ್ತು ಎಂದು ಗೊತ್ತಿಲ್ಲ. ಆದರೆ ಆ ಪಂದ್ಯದಲ್ಲಿ ಭಾರತ ತಂಡ ಗೆದ್ದಿತ್ತು ಎಂದು ಅಷ್ಟೇ ಗೊತ್ತು. ಅದಕ್ಕೆ ಅವರು ಎಷ್ಟು ಕಷ್ಟ ಪಡುತ್ತಿದ್ದರು ಎಂಬುದು ನಮಗೆ ತಿಳಿದಿಲ್ಲ. ಆದರೆ ಈಗ ಇವರೆಲ್ಲರ ಕಷ್ಟದಿಂದ ನಮ್ಮ ಕ್ರಿಕೆಟ್ ತಂಡ ವರ್ಷಕ್ಕೆ ಕೋಟಿ ರೂ. ದುಡಿಯುತ್ತಾರೆ. ಅದಕ್ಕೆಲ್ಲ ಇವರ ಪ್ರತಿಫಲ, ಶ್ರಮವೇ ಕಾರಣ ಎಂದು ವೇದಿಕೆ ಮೇಲಿದ್ದ ಗಣ್ಯರನ್ನು ಅಭಿನಂದಿಸಿದರು.

ಈ ಸಿನಿಮಾ ಬಾರಿ ಒಂದು ವಲ್ಡ್ ಕಪ್ ನ ಸ್ಟೋರಿಯಲ್ಲ. ಬದಲಿಗೆ ಇಡೀ ಭಾರತದ ಕ್ರಿಕೆಟ್ ತಂಡದ ಗುರಿಯೇ ಬದಲಾದ ಒಂದು ಕಥೆಯಾಗಿದೆ. ಅದನ್ನೆಲ್ಲ ಮಾಡಿದವರು ಈ ಗಣ್ಯರು. ನಾವು ಅದನ್ನೆಲ್ಲ ನೋಡಿಲ್ಲ, ಏಕೆಂದರೆ ನಾವು ಅಲ್ಲಿ ಇರಲಿಲ್ಲ. ಇವತ್ತು ನಮ್ಮ ಕ್ರಿಕೆಟ್ ತಂಡ ಅನುಭವಿಸುತ್ತಿರುವ ಸವಲತ್ತು ಎಲ್ಲ ಇವರ ಪ್ರತಿಫಲ ಎಂದು ಪ್ರಶಂಸಿದರು.

sudeep 83 movie 4

ಈ ವೇಳೆ ರಣವೀರ್ ಬಗ್ಗೆ ಮಾತನಾಡಿದ ಅವರು, 83ರ ವಿಶ್ವಕಪ್ ಸಮಯದಲ್ಲಿ ಯಾರು ಇರಲಿಲ್ಲ. ಆದರೆ ಅದನ್ನು ಮತ್ತೆ ಈ ಸಿನಿಮಾ ಮೂಲಕ ತೋರಿಸಿದ್ದಾರೆ. ಅವರು ನಮ್ಮ ದೇಶಕ್ಕಾಗಿ ಎಷ್ಟು ಕಷ್ಟ ಪಟ್ಟರು ಎಂದು ತಿಳಿಸುವುಕ್ಕಾಗಿ ಈ ಸಿನಿಮಾವನ್ನು ತೆರೆ ಮೇಲೆ ತರಲಾಗಿದೆ. ಈ ಸಿನಿಮಾ ನಮ್ಮ ಭಾರತೀಯರು ಹೆಮ್ಮೆ ಪಡುವಂತಹ ಸಿನಿಮಾವಾಗಿದೆ ಎಂದು ಖುಷಿಪಟ್ಟರು. ಈ ಸಿನಿಮಾ ಮೂಲಕ 83 ಕ್ರಿಕೆಟ್ ಸಮಯದಲ್ಲಿ ಏನು ನಡೆದಿತ್ತು ಎಂಬುದು ನಮ್ಮ ಮುಂದೆ ಬರುತ್ತೆ. ಅದು ರಣವೀರ್ ಕ್ರಿಕೆಟರ್ ಆಗಿ ನಮ್ಮ ಮುಂದೆ ಬರುತ್ತಾರೆ. ಸಿನಿಮಾ ಮುಗಿಯುವಾಗ ರಣವೀರ್ ನಮ್ಮ ಕಣ್ಣಮುಂದೆ ಇರುತ್ತಾರೆ. ಅದಕ್ಕೆ ಇವರು ತುಂಬಾ ಶ್ರಮ ಪಟ್ಟು ಕೆಲಸ ಮಾಡಿದ್ದಾರೆಸ ಎಂದು ಅವರ ಶ್ರಮದ ಬಗ್ಗೆ ವಿವರಿಸಿದರು.

Share This Article
Leave a Comment

Leave a Reply

Your email address will not be published. Required fields are marked *