ಹಾವೇರಿ: ಪತ್ನಿಯ ಸಾವಿನ ಸುದ್ದಿ ತಿಳಿದು ಪತಿ ನೇಣಿಗೆ ಶರಣಾಗಿರುವ ಘಟನೆ ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ.
ವಾಣಿಶ್ರೀ ಅಗಡಿ (50) ಮತ್ತು ಶಂಕ್ರಪ್ಪ ಅಗಡಿ (56) ಮೃತ ದುರ್ದೈವಿಗಳು. ಕಳೆದೆರಡು ದಿನಗಳ ಹಿಂದೆ ವಾಣಿಶ್ರೀ ಮತ್ತು ಆಕೆಯ ಪುತ್ರಿ ಕೀರ್ತಿ (21) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ನಿನ್ನೆ ರಾತ್ರಿ ಚಿಕಿತ್ಸೆ ಫಲಿಸದೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಪತ್ನಿ ಮೃತಪಟ್ಟಿದ್ದಾರೆ. ಪತ್ನಿಯ ಸಾವಿನ ಸುದ್ದಿ ತಿಳಿದು ತಮ್ಮ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಶಂಕ್ರಪ್ಪ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಕೈ ನಾಯಕರು, ಕಾರ್ಯಕರ್ತರ ಪಾದವನ್ನು ಮುಟ್ಟಿ ಧನ್ಯವಾದ ತಿಳಿಸುತ್ತೇನೆ: ಹೆಬ್ಬಾಳ್ಕರ್
ಸಾಲಬಾಧೆ ತಾಳಲಾರದೆ ಮೊನ್ನೆ ರಾತ್ರಿ ವಿಷ ಸೇವಿಸಿ ತಾಯಿ ಮತ್ತು ಮಗಳು ಆತ್ಮಹತ್ಯೆಗೆ ಯತ್ನಿಸಿದ್ದರು. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮಗಳು ಕೀರ್ತಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಎರಡು ವರ್ಷದ ಹಿಂದೆ ಶಂಕ್ರಪ್ಪ ಒಂದೂವರೆ ಎಕರೆ ಜಮೀನು ಮಾರಾಟ ಮಾಡಿದ್ದರು. ಈ ವರ್ಷ ಲಾವಣಿ ರೂಪದಲ್ಲಿ ಬೇರೆಯವರ 8 ಎಕರೆ ಜಮೀನು ನಡೆಸುತ್ತಿದ್ದು, ಮೂವತ್ತೈದು ಗುಂಟೆ ಮಾತ್ರ ಸ್ವಂತ ಜಮೀನು ಹೊಂದಿದ್ದರು. ಬ್ಯಾಂಕ್ ಮತ್ತು ಕೈಸಾಲ ಅಂತಾ ಆರೂವರೆ ಲಕ್ಷಕ್ಕೂ ಅಧಿಕ ಸಾಲ ಹೊಂದಿದ್ದು, ಲಾವಣಿ ರೂಪದಲ್ಲಿ ಪಡೆದಿದ್ದ ಜಮೀನಿನಲ್ಲಿ ಹತ್ತಿ ಮತ್ತು ಮೆಕ್ಕೆಜೋಳದ ಬೆಳೆ ಬೆಳೆದಿದ್ದರು. ಆದರೆ ಬೆಳೆ ಹಾಳಾಗಿದ್ದರಿಂದ ಈ ಕುಟುಂಬವು ಬೇಸತ್ತಿತ್ತು. ಇದನ್ನೂ ಓದಿ: ತಡರಾತ್ರಿಯಲ್ಲಿ ಡ್ರಾಪ್ ಕೇಳಿದ ಮಹಿಳೆಗೆ ಪೊಲೀಸರಿಂದ್ಲೇ ಕಿರುಕುಳ!
ಈ ಸಂಬಂಧ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.