ಕಂಠೀರವ ಸ್ಟುಡಿಯೋ ಬಳಿ ಬಿಗಿ ಪೊಲೀಸ್ ಭದ್ರತೆ

Public TV
1 Min Read
PUNEETH 10

– ಸಮಾಧಿ ದರ್ಶನ ಪಡೆದ ಅಪ್ಪು ಪತ್ನಿ

ಬೆಂಗಳೂರು: ದಿವಂಗತ ನಟ ಪುನೀತ್ ರಾಜ್ ಕುಮಾರ್ ಸಮಾಧಿ ಕಂಠೀರವ ಸ್ಟುಡಿಯೋ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

ಪುನೀತ್ ಸಮಾಧಿ ನೋಡಲು ಅಭಿಮಾನಿಗಳಿಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೆ.ಎಸ್ ಆರ್ ಪಿ ಹಾಗೂ ಆರ್ ಎಎಫ್ ತುಕಡಿ ಸೇರಿದಂತೆ 200ಕ್ಕೂ ಹೆಚ್ಚು ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ.

PUNEETH 2 1

ಆಭಿಮಾನಿಗಳು ಸರಥಿ ಸಾಲಿನಲ್ಲಿ ಹೋಗಿ ಸಮಾಧಿ ನೋಡಿಕೊಂಡು ಬರಲು ಬ್ಯಾರಿಕೇಡ್ ಅಳವಡಿಸಿ ವ್ಯವಸ್ಥೆ ಮಾಡಲಾಗಿದೆ. ಏಕಕಾಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ರೆ ಗೊಂದಲಗಳು ಹಾಗೂ ಅಹಿತಕರ ಘಟನೆಗಳಿಗೆ ಕಾರಣವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಇದನ್ನೂ ಓದಿ: ನೇತ್ರದಾನಕ್ಕೆ ಸ್ಫೂರ್ತಿಯಾದ ” ರಾಜರತ್ನ” – ಅಪ್ಪು ಬಳಿಕ ಹೆಚ್ಚಾಗ್ತಿದೆ ನೇತ್ರದಾನಿಗಳ ಸಂಖ್ಯೆ

PUNEETH 1 2

ಸಮಾಧಿ ನೋಡಲು ದೂರದ ದಾವಣಗೆರೆ, ಚನ್ನಗಿರಿ, ಕುಣಿಗಲ್, ತುಮಕೂರಿನಿಂದ ಈಗಾಗಲೇ ಅಭಿಮಾನಿಗಳು ಬಂದಿದ್ದು, ಇನ್ನೂ ಬೇರೇ ಬೇರೇ ಜಿಲ್ಲೆಗಳಿಂದ ಬರುತ್ತಲೇ ಇದ್ದಾರೆ. ಇತ್ತ ಇಂದು ಅಪ್ಪು ಪತ್ನಿ ಅಶ್ವಿನಿ ಅವರು ಪುನೀತ್ ಸಮಾಧಿಗೆ ಭೇಟಿ ನೀಡಿ ಕೈ ಮುಗಿದಿದ್ದಾರೆ. ನಂತರ ಸಮಾಧಿಗೆ ಒಂದು ರೌಂಡ್ ಹಾಕಿ ಕೈ ಮುಗಿದು ಅಲ್ಲಿಂದ ತೆರಳಿದ್ದಾರೆ. ಇದನ್ನೂ ಓದಿ: ನಾಲ್ವರ ಬಾಳಿಗೆ ಬೆಳಕಾದ ಅಪ್ಪು

PUNEETH 3 1

ಶುಕ್ರವಾರ ಬೆಳಗ್ಗೆ ಅಪ್ಪು ಆಯಾಸಗೊಂಡಿದ್ದರು. ಕೂಡಲೇ ಅವರು ಸ್ಥಳೀಯ ರಮಣಶ್ರೀ ಕ್ಲಿನಿಕ್ ಗೆ ತೆರಳಿದ್ದಾರೆ. ಅಲ್ಲಿ ಇಸಿಜಿ ಮಾಡಿಸಿಕೊಂಡು ಇನ್ನೇನು ಮನೆ ಕಡೆ ತೆರಳುವಷ್ಟರಲ್ಲಿ ಅಲ್ಲಿಯೇ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಕಾರಿನಲ್ಲಿಯೇ ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಅದು ಫಲಕಾರಿಯಾಗದೇ ನಿಧನರಾಗಿದ್ದರು. ಇದನ್ನೂ ಓದಿ: ನಿಮ್ಮ ಪಾದಕ್ಕೆ ನಮಸ್ಕಾರ ಮಾಡ್ತೀನಿ, ಪುನೀತ್‍ಗೆ ಕೆಟ್ಟ ಹೆಸ್ರು ತರಬೇಡಿ: ರಾಘವೇಂದ್ರ ರಾಜ್ ಕುಮಾರ್

Share This Article
Leave a Comment

Leave a Reply

Your email address will not be published. Required fields are marked *