ಕಾರಲ್ಲೇ ಕೂರಿಸಿ ಯುವಕ, ಯುವತಿಯ ವೀಡಿಯೋ ರೆಕಾರ್ಡ್ – 5 ಲಕ್ಷಕ್ಕೆ ಬೇಡಿಕೆ

Public TV
3 Min Read
FotoJet 1 21

– ಯುವತಿಯ ಕೈಯನ್ನು ಹಿಡಿದು ಎಳೆದಾಡಿ ಪುಂಡರ ಅಟ್ಟಹಾಸ
– ಬೆಂಗಳೂರಿನ ಹೊರವಲಯದಲ್ಲಿ ಸುತ್ತಾಡಲು ಹೋದವರಿಗೆ ಟಾರ್ಚರ್

ಬೆಂಗಳೂರು: ಮೈಸೂರು ಗ್ಯಾಂಗ್ ರೇಪ್ ಕಹಿ ಮರೆಯುವ ಮುನ್ನವೇ ಮತ್ತೊಂದು ಕಹಿ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ಸಂಬಂಧ ಹಂದೇನಹಳ್ಳಿ ಗ್ರಾಮದ ಸಯ್ಯದ್ ಆಸಿಫ್ ಫಾಷಾ, ನವಾಜ್ ಪಾಷ, ಲಿಯಾಖತ್ ಪಾಷಾ, ಸಲ್ಮಾನ್ ಖಾನ್, ರೂಹಿದ್ ರನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?

ಯುವತಿಯೊಬ್ಬಳು ಸಂಬಂಧಿ ಯುವಕನ ಜೊತೆ ಇದೇ ತಿಂಗಳ 25 ರಂದು ಬೆಳಗ್ಗೆ 11 ಗಂಟೆಗೆ ಖಾಸಗಿ ಲೇಔಟ್ ಗೆ ತೆರಳಿದ್ದರು. ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹಂದೇನಹಳ್ಳಿ ಗ್ರಾಮದ ಖಾಸಗಿ ಲೇಔಟ್ ಗೆ ಈ ಜೋಡಿ ಹೋಗುತ್ತಿತ್ತು. ಈ ವೇಳೆ ಇವರಿಬ್ಬರು ಕಾರಿನಲ್ಲಿ ಕೂತು ಸ್ನ್ಯಾಕ್ಸ್ ಮತ್ತು ತಂಪು ಪಾನೀಯ ಸೇವಿಸ್ತಿದ್ದರು. ಆಗ 11:30ಕ್ಕೆ ದುರುಳರ ಗ್ಯಾಂಗ್ ಎಂಟ್ರಿಕೊಟ್ಟಿತ್ತು. ಇದನ್ನೂ ಓದಿ: ಮೂಕಜೀವಿಗಳ ಸಂಕಷ್ಟಕ್ಕೆ ಮಿಡಿಯುವ ಕೋಟೆನಾಡಿನ ಮಾನವೀಯತೆಯ ಹೃದಯ

ಈ ಯುವತಿ ಯುವಕನನ್ನು ನೋಡಿ ಅವರ ವೀಡಿಯೋವನ್ನು ಮಾಡಿದ್ದು, ಕಾರಿನಲ್ಲೇ ಕೂರುವಂತೆ ಹೆದರಿಸಿದ್ದಾರೆ. ಇಬ್ಬರ ಖಾಸಗಿ ಕ್ಷಣಗಳನ್ನು ಮೊಬೈಲ್ ನಲ್ಲಿ ಈ ಗ್ಯಾಂಗ್ ಹಿಂದಿನಿಂದ ಚಿತ್ರೀಕರಿಸಿದ್ದು, ಅಲ್ಲದೆ ಯುವತಿಯ ಕೈ ಹಿಡಿದು ಎಳೆದಾಡಿದ್ದಾರೆ. ಐದು ಲಕ್ಷ ಹಣ ಕೊಡಬೇಕು, ಇಲ್ಲವಾದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋವನ್ನು ಹರಿಬಿಡೋದಾಗಿ ಬೆದರಿಕೆ ಹಾಕಿದ್ದಾರೆ. ಅಷ್ಟರಲ್ಲಿ ಈ ಗ್ಯಾಂಗ್ ದೂರದಲ್ಲಿ ಜನ ಬರುತ್ತಿರುವುದು ನೋಡಿ ಅಲ್ಲಿಂದ ಪರಾರಿಯಾಗಿದ್ದಾರೆ.

ಪರಿಣಾಮ ಯುವತಿ ಆಘಾತದಿಂದ ಚೇತರಿಸಿಕೊಂಡು ಘಟನೆಯ ಬಗ್ಗೆ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಐಪಿಸಿ ಸೆಕ್ಷನ್ 354(ಎ) (ಹೆಂಗಸಿನ ಮಾನಭಂಗ ಮಾಡುವ ಉದ್ದೇಶದಿಂದ ಅವಳ ಮೇಲೆ ಹಲ್ಲೆ ಅಥವಾ ಅಪರಾಧಿಕ ಬಲಪ್ರಯೋಗ ಮಾಡುವುದು), 354(ಡಿ)(ಹಿಂಬಾಲಿಸುವುದು), 504(ಶಾಂತಿಭಂಗವನ್ನು ಮಾಡಲು ಉದ್ರೇಕಿಸುವುದಕ್ಕಾಗಿ ಉದ್ದೇಶಪೂರ್ವಕ ಅವಮಾನ), 149(ಏಕೋದ್ದೇಶವನ್ನು ಈಡೇರಿಸುವಲ್ಲಿ ಮಾಡಲಾದ ಅಪರಾಧದ), 384(ಸುಲಿಗೆ)ಅಡಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ರೈತ ಮಹಿಳೆ ಮೇಲೆ ಲೇಡಿ ಪಿಎಸ್‍ಐ ದರ್ಪ

ಅನಿರೀಕ್ಷಿತ ಘಟನೆಯಿಂದ ಹೆದರಿದ್ದ ಯುವತಿ ಆರೋಪಿಗಳ ಮುಖ ನೋಡಿದ್ರೆ ಗುರುತು ಪತ್ತೆ ಹಚ್ಚೋದಾಗಿ ಹೇಳಿದ್ದರು. ಈ ಸಂಬಂಧ ಯುವತಿಯ ದೂರು ಬೆನ್ನಲ್ಲೇ ಪೊಲೀಸರು ಆಪರೇಷನ್ ಕೀಚಕರ ಗ್ಯಾಂಗ್ ಗೆ ಬಲೆ ಬೀಸಿದ್ದಾರೆ. ಸ್ವಲ್ಪ ತಡ ಮಾಡಿದ್ರೂ ಎಸ್ಕೇಪ್ ಆಗ್ತಿದ್ದ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.

ಆರೋಪಿಗಳ ಮೊಬೈಲ್ ನಲ್ಲಿದ್ದ ಖಾಸಗಿ ವೀಡಿಯೋವನ್ನು ಪೊಲೀಸರು ಡಿಲೀಟ್ ಮಾಡಿದ್ದಾರೆ. ಆರೋಪಿಗಳ ಪೆರೇಡ್‍ನ್ನು ಯುವತಿಯ ಮುಂದೆ ಮಾಡಿಸಿದಾಗ ಅವರ ಗುರುತನ್ನು ಹಿಡಿದ್ದಾರೆ. ಹಂದೇನ ಹಳ್ಳಿಯವರಾದ ಇವರು ಸಣ್ಣ ಪುಟ್ಟ ಕೆಲಸ ಮಾಡ್ಕೊಂಡಿದ್ದರು. ಅಂದು ಯುವಕ ಯುವತಿ ಏಕಾಂತದಲ್ಲಿದ್ದಾಗ ವೀಡಿಯೋ ಹಿಡಿದು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಈ ವೇಳೆ ಯುವತಿಯ ಹಣೆಬರಹ ಚೆನ್ನಾಗಿತ್ತು. ದುರಂತ ಏನೂ ಆಗಿಲ್ಲ. ಸದ್ಯ ಎಲ್ಲ ಆರೋಪಿಗಳನ್ನು ಪೊಲೀಸರು ಜೈಲಿಗೆ ಹಾಕಿದ್ದಾರೆ.

ಯುವತಿ ದೂರಿನಲ್ಲಿ ಏನಿತ್ತು?

ನಾನು ಬೆಂಗಳೂರಿನಲ್ಲಿ ವಾಸವಾಗಿದ್ದು, ಸೆ.25 ರಂದು ಬೆಳಗ್ಗೆ 11 ಗಂಟೆಗೆ ನನ್ನ ನಂಬರಿನ ಕಾರಿನಲ್ಲಿ ಸಂಬಂಧಿಯ ಜೊತೆಗೆ ದುನ್ನಸಂದ್ರ ಕ್ರಾಸ್, ಹಂದೇನಹಳ್ಳಿ ಗ್ರಾಮದ ಹತ್ತಿರವಿರುವ ಖಾಸಗಿರವರ ಲೇಔಟ್ ಗೆ ಹೋಗಿದ್ದೆವು. ಈ ವೇಳೆ ಕಾರಿನಲ್ಲಿ ನಾವಿಬ್ಬರು ಮಾತನಾಡಿಕೊಂಡು ಸ್ನ್ಯಾಕ್ಸ್ ಮತ್ತು ತಂಪು ಪಾನೀಯಗಳನ್ನು ಕುಡಿಯುತ್ತಿದ್ದೆವು. ಸುಮಾರು 12 ಗಂಟೆ ಸಮಯದಲ್ಲಿ ಯಾರೋ 5-6 ಅಪರಿಚಿತರು, ಏಕಾಏಕಿ ನಮ್ಮ ಕಾರಿನ ಹತ್ತಿರ ಬಂದು, ನಮ್ಮನ್ನು ಫೋಟೋ, ವೀಡಿಯೋ ಮಾಡಿದ್ದೀವಿ ಎಂದು ನನ್ನ ಕೈ ಹಿಡಿದು ಎಳೆದಾಡಿದರು.

ನನ್ನ ಜೊತೆಗಿದ್ದ ಸಂಬಂಧಿಯು ಅವರಿಂದ ಬಿಡಿಸಿ, ನನ್ನನ್ನು ಕಾರಿನಲ್ಲಿ ಕೂಡಿಸಿದರು. ಅವರು ನಮಗೆ ಐದು ಲಕ್ಷ ಹಣ ಕೊಡಬೇಕು. ಇಲ್ಲದಿದ್ದರೆ ನಮ್ಮ ಮೊಬೈಲ್ ನಲ್ಲಿ ವೀಡಿಯೊಗಳನ್ನು ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತೇವೆ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹೆದರಿಸುತ್ತಿದ್ದರು. ಆಗ ಯಾರೋ ದೂರದಲ್ಲಿ ಜನರು ಬರುವುದನ್ನ ನೋಡಿ ಇಬ್ಬರು ಬೈಕ್ ನಲ್ಲಿ, ಇನ್ನುಳಿದವರು ಸ್ಥಳದಿಂದ ಹೊರಟು ಹೋದರು. ಇದನ್ನೂ ಓದಿ: 10 ತಿಂಗಳ ಶಿಕ್ಷೆ ತಪ್ಪಿಸಲು 9 ವರ್ಷದಿಂದ ತಲೆ ಮರೆಸಿಕೊಂಡ ಆರೋಪಿ ಅಂದರ್

ನಾವು ಈ ಘಟನೆಯಿಂದ ಭಯಭೀತರಾಗಿ ಠಾಣೆಗೆ ತಡವಾಗಿ ಬಂದು ದೂರು ನೀಡಿರುತ್ತೇನೆ. ನಮಗೆ ಅವಾಚ್ಯ ಪದಗಳಿಂದ ಬೈದು, ಹಣ ಕೊಡುವಂತೆ ಹೆದರಿಸಿರುವ ಅಪರಿಚಿತ ಐದು-ಆರು ಜನರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೋರುತ್ತೇನೆ. ಮತ್ತೊಮ್ಮೆ ಅವರನ್ನ ನೋಡಿದರೆ ಗುರುತಿಸುತ್ತೇನೆ.

Share This Article
Leave a Comment

Leave a Reply

Your email address will not be published. Required fields are marked *