Chitradurga

ಮೂಕಜೀವಿಗಳ ಸಂಕಷ್ಟಕ್ಕೆ ಮಿಡಿಯುವ ಕೋಟೆನಾಡಿನ ಮಾನವೀಯತೆಯ ಹೃದಯ

Published

on

Share this

ಚಿತ್ರದುರ್ಗ: ಲಾಭವಿಲ್ಲ ಎಂದರೆ ಹೆತ್ತ ತಂದೆ-ತಾಯಿಗಳಿಗೆ ಒಪ್ಪೊತ್ತಿನ ಊಟ ಹಾಕದ ಮಕ್ಕಳಿರುವ ಕಾಲವಿದು. ಆದರೆ ಜನರಿಂದ ಅಪಘಾತಕ್ಕೀಡಾಗಿ, ಸಾವು-ಬದುಕಿನ ಮಧ್ಯೆ ಓಡಾಡುವ ರೋಗಗ್ರಸ್ತ ಸಾಕು ಪ್ರಾಣಿಗಳ ರಕ್ಷಣೆಗೆ ಕೋಟೆನಾಡು ಚಿತ್ರದುರ್ಗದ ಸ್ಪೂರ್ತಿ ಎಂಬ ಯುವತಿ ಪಣ ತೊಟ್ಟಿದ್ದಾರೆ.

ಹೆತ್ತ ಮಕ್ಕಳೇ ವಯಸ್ಸಾದ ತಂದೆ-ತಾಯಿಯನ್ನು ಹಾರೈಕೆ ಮಾಡಲಾಗದೇ ವೃದ್ಧಾಶ್ರಮಕ್ಕೆ ಸೇರಿಸುವ ಕಾಲವಿದು. ಅಲ್ಲದೆ ಸಾಕಿರುವ ನಾಯಿಗೆ ಚರ್ಮರೋಗ ಬಂತು ಎಂದರೆ ಬೀದಿಗೆ ಬಿಡೋ ಸ್ವಾರ್ಥಿಗಳ ಜಗವಿದು. ಸಾಕಿದ ನಾಯಿಯು, ರಸ್ತೆಯಲ್ಲಿ ಅಪಘಾತಕ್ಕೀಡಾದ ಬಿದಿ ಹೆಣವಾಗಿ ದುರ್ನಾತ ಬೀರಿದರು ಸಹ ಆ ನಾಯಿಯ ಮಾಲೀಕ ಒಮ್ಮೆ ಕೂಡ ಅದರತ್ತ ತಿರುಗಿ ಸಹ ನೋಡದವರೇ ಹೆಚ್ಚು. ಆದರೆ ಸ್ಪೂರ್ತಿ ಎನ್ನುವ ಯುವತಿ ಮಾತ್ರ ಯಾವುದೇ ಪ್ರತಿಫಲಪೇಕ್ಷೆ ಇಲ್ಲದೇ ನಿಸ್ವಾರ್ಥದಿಂದ ಇಂತಹ ಕಾಲಘಟ್ಟದಲ್ಲೂ ಮಾನವೀಯ ಮೌಲ್ಯಗಳನ್ನು ತಮ್ಮ ಚಿಕ್ಕವಯಸ್ಸಿನಲ್ಲೇ ಅಳವಡಿಸಿಕೊಂಡು, ಬೀದಿನಾಯಿಗಳ ಪಾಲನೆಯ ಹೊಣೆ ಹೊತ್ತಿದ್ದಾರೆ. ಇದನ್ನೂ ಓದಿ: ಹೋಟೆಲ್‍ನಲ್ಲಿ ಲಂಚ ಸ್ವೀಕರಿಸುತ್ತಿದ್ದ ಇನ್ಸ್​ಪೆಕ್ಟರ್ ಎಸಿಬಿ ಬಲೆಗೆ!

ಚಿತ್ರದುರ್ಗದಲ್ಲಿ ನೆಲೆಸಿರುವ ಈಕೆ, ಕಳೆದ ಮುರ್ನಾಲ್ಕು ವರ್ಷಗಳಿಂದ ಅಪಘಾತಕ್ಕೀಡಾಗಿ ಸಾವು-ಬದುಕಿನ ನಡುವೇ ಒದ್ದಾಡುವ ಬೀದಿನಾಯಿ, ಬೀಡಾಡಿ ದನಗಳು, ಅಳಿಲು, ಬೆಕ್ಕು, ಕುದುರೆ, ಹಾವು ಮತ್ತು ಇತರೆ ಸಾಕು ಪ್ರಾಣಿಗಳ ಜೀವರಕ್ಷಕಿ ಎನಿಸಿದ್ದಾರೆ. ಇಲ್ಲಿಯವರೆಗೆ 130ಕ್ಕೂ ಹೆಚ್ಚು ರೋಗಗ್ರಸ್ಥ ಪ್ರಾಣಿಗಳ ಜೀವವನ್ನು ಕಾಪಾಡಿದ್ದಾರೆ. ಹೀಗಾಗಿ ಕೋಟೆನಾಡಿನ ಬೀಡಾಡಿ ಪ್ರಾಣಿಗಳ ಪಾಲಿಗೆ ಈ ಯುವತಿ ಸ್ಪೂರ್ತಿಯು ನಿಸ್ವಾರ್ಥ ಭಾವದ ವಾತ್ಸಲ್ಯಮಯಿಯಾಗಿದ್ದಾರೆ.

ಈ ಯುವತಿಯ ಕಾರ್ಯವನ್ನು ಗಮನಿಸಿದ ಜೈನ ಸಮುದಾಯದ 20 ಜನ ಯುವಕರು ಈಕೆಗೆ ಸಾಥ್ ನೀಡಿದ್ದಾರೆ. ಯಾವುದೇ ಸಮಯದಲ್ಲಾದರು ಬೀಡಾಡಿ ಸಾಕು ಪ್ರಾಣಿಗಳಿಗೆ ಅಪಘಾತ ಸಂಭವಿಸಿದರೆ ಈ ತಂಡವು ತಕ್ಷಣ ಹಾಜರ್ ಆಗುತ್ತೆ. ಆ ವೇಳೆ ಸ್ವಲ್ಪವೂ ಮುಜುಗರ ಹಾಗು ಅಸಹ್ಯಪಡದೇ, ಪ್ರೀತಿಯಿಂದ, ಕಾಳಜಿಯಿಂದ ಪ್ರಾಣಿಗಳಿಗೆ ಪ್ರಥಮ ಚಿಕಿತ್ಸೆ ನೀಡುತ್ತಾರೆ. ಅಲ್ಲದೆ ಗಾಯಗೊಂಡ ಹಾಗೂ ರೋಗಗ್ರಸ್ಥ ಪ್ರಾಣಿಗಳ ಪಾಲನೆಗಾಗಿ ಜೈನ್ ಕಾಲೋನಿಯಲ್ಲಿ ಒಂದು ನಿವೇಶನವನ್ನೇ ಮೀಸಲಿಟ್ಟಿರುವ ಯುವಕರ ತಂಡವು ಈ ಕಾರ್ಯಕ್ಕಾಗಿ ಪ್ರತೀ ತಿಂಗಳು 35,000 ರೂ. ಅಧಿಕ ಹಣ ಖರ್ಚು ಮಾಡ್ತಾರೆ. ಇದನ್ನೂ ಓದಿ: ಕೆರೆಯ ಬಳಿ ಮದ್ಯಪಾನ ಮಾಡಿ ಗುಂಡಿನ ದಾಳಿ – FSL ತಂಡದಿಂದ ಪರಿಶೀಲನೆ

ತಲಾ ನಾಲ್ಕೈದು ಬೀದಿ ನಾಯಿಗಳನ್ನು ದತ್ತು ಪಡೆದು ಹಾರೈಕೆ ಮಾಡ್ತಿದ್ದಾರೆ. ಆದರೆ ಯಾರ ಬಳಿಯೂ ಇದಕ್ಕಾಗಿ ಹಣ ಸಂಗ್ರಹಿಸಿದೇ ನಿಸ್ವಾರ್ಥ ಸೇವೆ ಮಾಡ್ತಾ ಮಾನವೀಯತೆ ಮೆರೆಯುತ್ತಿರುವ ಶ್ಲಾಘನೀಯ. ಯಾವುದೇ ಲಾಭವಿಲ್ಲದೆ ಮನೆಯಲ್ಲಿ ಸಾಕಿದ ನಾಯಿಗೂ ತುಂಡು ರೊಟ್ಟಿ ಹಾಕದ ಜನರ ನಡುವೇ ಸ್ಪೂರ್ತಿ ಅವರ ಕಾರ್ಯ ಇತರರಿಗೆ ಮಾದರಿಯಾಗಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications