Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 10ನೇ ತರಗತಿಯಲ್ಲಿ ಶೇ.90 ಅಂಕ ಗಳಿಸಿದ ವಿದ್ಯಾರ್ಥಿ, ನಿವೃತ್ತ ಹವಾಲ್ದಾರ್ ಪುತ್ರ ಶೂಟ್ ಮಾಡಿಕೊಂಡು ಆತ್ಮಹತ್ಯೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | 10ನೇ ತರಗತಿಯಲ್ಲಿ ಶೇ.90 ಅಂಕ ಗಳಿಸಿದ ವಿದ್ಯಾರ್ಥಿ, ನಿವೃತ್ತ ಹವಾಲ್ದಾರ್ ಪುತ್ರ ಶೂಟ್ ಮಾಡಿಕೊಂಡು ಆತ್ಮಹತ್ಯೆ

Bengaluru City

10ನೇ ತರಗತಿಯಲ್ಲಿ ಶೇ.90 ಅಂಕ ಗಳಿಸಿದ ವಿದ್ಯಾರ್ಥಿ, ನಿವೃತ್ತ ಹವಾಲ್ದಾರ್ ಪುತ್ರ ಶೂಟ್ ಮಾಡಿಕೊಂಡು ಆತ್ಮಹತ್ಯೆ

Public TV
Last updated: September 17, 2021 9:17 am
Public TV
Share
3 Min Read
sadashiva nagara shootou
SHARE

– ತಂದೆಯ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಬೆಂಗಳೂರು: ಎಸ್‍ಎಸ್‍ಎಲ್‍ಸಿ ಯಲ್ಲಿ ಶೇ.90ರಷ್ಟು ಅಂಕ ಗಳಿಸಿದ್ದ ವಿದ್ಯಾರ್ಥಿ, ನಿವೃತ್ತ ಹವಾಲ್ದಾರ್ ಪುತ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ಸದಾಶಿವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತನನ್ನು ಆರ್ಮಿ ಸ್ಕೂಲ್ ನ ವಿದ್ಯಾರ್ಥಿ 17 ವರ್ಷದ ರಾಹುಲ್ ಭಂಡಾರಿ ಎಂದು ಗುರುತಿಸಲಾಗಿದೆ. ಬೆಳಗಿನಜಾವ 5:45ರ ಸುಮಾರಿಗೆ ಘಟನೆ ನಡೆದಿದೆ. ತಲೆಗೆ ಗುಂಡು ಹಾರಿಸಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಲೆಯ ಎಡಭಾಗಕ್ಕೆ ಗುಂಡು ಬಿದ್ದಿದ್ದು, ಬುಲೆಟ್ ಕೂಡ ಮೃತ ವ್ಯಕ್ತಿಯ 6 ಅಡಿ ಅಂತರದಲ್ಲಿ ಬಿದ್ದಿದೆ. ತಂದೆಯ ಪರವಾನಗಿ ಇರುವ ಪಿಸ್ತೂಲ್‍ನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ರಾಹುಲ್ ಎಸ್‍ಎಸ್‍ಎಲ್‍ಸಿಯಲ್ಲಿ ಶೇ.90ರಷ್ಟು ಅಂಕ ಗಳಿಸಿದ್ದ.

ಸದಾಶಿವನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ವಿಧಿ ವಿಜ್ಞಾನ ಅಧಿಕಾರಿಗಳು ಮತ್ತು ಡಾಗ್ ಸ್ಕ್ವಾಡ್ ಸ್ಥಳಕ್ಕೆ ಕರೆಸುವ ಸಿದ್ಧತೆ ನಡೆದಿದೆ. ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಸಹ ಆಗಮಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ನಗರದಲ್ಲಿ ಹೊತ್ತಿ ಉರಿದ ಕಾರು

sadashivanagar havaldar son death 4

3.2 ಎಂಎಂ ಪಿಸ್ತೂಲ್ ನಿಂದ ಶೂಟ್ ಮಾಡಿಕೊಂಡು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೋಷಕರು ಆಗಮಿಸಿ, ಕಣ್ಣೀರಿಟ್ಟಿದ್ದು, ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಇವತ್ತಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಇತ್ತು. ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ, ರಾತ್ರಿ ಹೊತ್ತು ವಾಕಿಂಗ್ ಮಾಡುತ್ತಿದ್ದ. ಬೆಳಗ್ಗೆ 4 ಗಂಟೆಗೆ ಮನೆಯಿಂದ ವಾಕಿಂಗ್ ಬಂದಿದ್ದ. ಪ್ರತಿನಿತ್ಯ ವಾಕಿಂಗ್ ಮಾಡುತ್ತಿರಲಿಲ್ಲ. ಪರೀಕ್ಷೆಗೆ ಓದುತ್ತಿದ್ದ ಸಮಯದಲ್ಲಿ ವಿಶ್ರಾಂತಿಗಾಗಿ ವಾಕಿಂಗ್‍ಗೆ ಬರುತ್ತಿದ್ದ. ಬೆಳಗ್ಗೆ 6 ಗಂಟೆಯಿಂದ ಕರೆ ಮಾಡಿದರೂ ಸ್ವೀಕರಿಸಿಲ್ಲ ಎಂದು ಮನೆಯವರು ತಿಳಿಸಿದ್ದಾರೆ.

sadashivanagar havaldar son death 2

ರಾತ್ರಿ ಊಟ ಮುಗಿಸಿ ಮನೆಯಲ್ಲೇ ಮಲಗಿದ್ದ ರಾಹುಲ್, ತಂದೆ, ತಾಯಿ ಮಲಗಿರುವಾಗ ನಾಲ್ಕು ಗಂಟೆಗೆ ಮನೆಯಿಂದ ಎದ್ದು ಹೊರಬಂದಿದ್ದಾನೆ. ಮಾನಸಿಕ ಒತ್ತಡದಲ್ಲಿದ್ದ ಎನ್ನುವ ಶಂಕೆ ಇದೆ. ಪ್ರತಿದಿನ ಬೆಳಗಿನ ಜಾವ ಮೂರು ಗಂಟೆಗೆ ಎದ್ದು ಓದಿಕೊಳ್ಳುತ್ತಿದ್ದ. ಮಾನಸಿಕ ಒತ್ತಡ ಹೆಚ್ಚಾದಾಗ ಎದ್ದು ವಾಕ್ ಬರುತ್ತಿದ್ದ. ಅದೇ ರೀತಿ ಇಂದು ಬೆಳಗಿನ ಜಾವ ಕೂಡ ಮನೆಯಿಂದ ಎದ್ದು ಹೊರಬಂದಿದ್ದಾನೆ. ನಾಲ್ಕು ಗಂಟೆಗೆ ಮನೆಯಿಂದ ತೆರಳಿದ್ದು, ವಾಕ್ ಮಾಡುತ್ತಾ ಬಂದಿದ್ದಾನೆ. ರಾಹುಲ್ 6 ಗಂಟೆಯಾದರೂ ಮರಳಿ ಬಾರದ್ದರಿಂದ ಪೋಷಕರು ನಿರಂತರವಾಗಿ ಕರೆ ಮಾಡಲು ಶುರು ಮಾಡಿದ್ದು, ಕರೆ ಸ್ವೀಕರಿಸಿಲ್ಲ. ಇದನ್ನೂ ಓದಿ: 100 ಟನ್, 20 ಅಡಿ ಉದ್ದದ ರೇಣುಕಾಚಾರ್ಯರ ಪ್ರತಿಮೆಯ ಶಿಲೆ 100 ಚಕ್ರದ ಲಾರಿಯಲ್ಲಿ ರಂಭಾಪುರಿ ಮಠಕ್ಕೆ ಆಗಮನ

sadashivanagar havaldar son death 3

ಮುಂಜಾನೆ 5 ಗಂಟೆ ಸುಮಾರಿಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ರಾಹುಲ್ ತಲೆಯ ಎಡಭಾಗದಲ್ಲಿ ಶೂಟ್ ಮಾಡಿಕೊಂಡಿದ್ದಾನೆ. ಮೃತಪಟ್ಟ ಬಳಿಕವೂ ಪೋಷಕರಿಂದ ನಿರಂತರವಾಗಿ ಕರೆ ಬರುತ್ತಿತ್ತು. ಬಳಿಕ ಕರೆ ಸ್ವೀಕರಿಸಿ, ಪೊಲೀಸರು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ಆಗಮಿಸಿ, ಘಟನಾ ಸ್ಥಳದ ಪರಿಶೀಲನೆ ನಡೆಸಿದ್ದಾರೆ.

ವಿದ್ಯಾರ್ಥಿ ರಾಹುಲ್ ಭಗತ್ ಸಿಂಗ್ ಹಾಗೂ ಬಾಬ್ನಾ ದಂಪತಿಯ ಪುತ್ರನಾಗಿದ್ದು, ಭಗತ್ ಸಿಂಗ್ ಅವರು ಸೇನೆಯ ನಿವೃತ್ತ ಹವಾಲ್ದಾರ್ ಆಗಿದ್ದಾರೆ. ಉತ್ತರಾಖಂಡ್ ಮೂಲದವರಾದ ಭಗತ್ ಸಿಂಗ್, ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆರ್.ಟಿ.ನಗರದ ಗಂಗಾ ಬೇಕರಿ ಬಳಿ ಮನೆ ಮಾಡಿಕೊಂಡು ವಾಸವಾಗಿದ್ದಾರೆ.

ಮನೆಯವರಿಂದ ಓದಲೇಬೇಕು ಎಂಬ ಒತ್ತಡ ಇರಲಿಲ್ಲ. ಓದುವ ಒತ್ತಡದಿಂದ ವಾಕ್ ಬರುತ್ತಿದ್ದ. ದಂಪತಿಗೆ ಒಂದು ಹೆಣ್ಣು, ಒಂದು ಗಂಡು ಮಗನಿದ್ದ. ತಮ್ಮನ ಮೃತದೇಹ ನೋಡಿ ನಂಬಲಾಗದೆ ಅಕ್ಕ ಗಾಬರೆಯಾಗಿ ನಿಂತಿದ್ದಾಳೆ. ಏನೂ ಆಗಿಲ್ಲ ಅವನಿಗೆ, ನನ್ನ ತಮ್ಮನಿಗೆ ಏನೂ ಆಗಿಲ್ಲ. ನಿನ್ನೆ ನನ್ನ ಜೊತೆ ಚೆನ್ನಾಗಿ ಮತಾಡಿದ್ದ ಎಂದು ಕಣ್ಣೀರು ಹಾಕಿದ್ದಾಳೆ.

TAGGED:bengalurudeathpolicePublic TVRetired Havildarstudentನಿವೃತ್ತ ಹವಾಲ್ದಾರ್ಪಬ್ಲಿಕ್ ಟಿವಿಪೊಲೀಸರುಬೆಂಗಳೂರುವಿದ್ಯಾರ್ಥಿಸಾವು
Share This Article
Facebook Whatsapp Whatsapp Telegram

Cinema news

The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories
Dhurandhar 2 Trailer
ದುರಂಧರ್ 2 ಟ್ರೈಲರ್‌ ರಿಲೀಸ್ – ರಿವೆಂಜ್ ಮೋಡ್‌ನಲ್ಲಿ ರಣವೀರ್ ಸಿಂಗ್
Bollywood Cinema Latest Top Stories

You Might Also Like

IRGC
Latest

ಯುದ್ಧ ನಿಲ್ಲಿಸೋ ನಿರ್ಧಾರ ಅಮೆರಿಕದ್ದಲ್ಲ, ನಮ್ಮದು – ದಾಳಿ ಮುಂದುವರಿದ್ರೆ 1 ಲೀಟರ್‌ ತೈಲವೂ ಸಿಗಲ್ಲ: ಇರಾನ್‌

Public TV
By Public TV
37 minutes ago
donald trump
Latest

ನಾವು ಈಗಾಗಲೇ ಗೆದ್ದಿದ್ದೇವೆ, ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳಬಹುದು: ಟ್ರಂಪ್‌

Public TV
By Public TV
41 minutes ago
LPG Commercial Cylinder
Latest

ಕಮರ್ಷಿಯಲ್ ಸಿಲಿಂಡರ್ ಅಭಾವ – ತಮಿಳುನಾಡಲ್ಲಿ ರೆಸ್ಟೋರೆಂಟ್‌ಗಳು ಬಂದ್‌

Public TV
By Public TV
56 minutes ago
Haryana Gurugram Wall Collapse
Latest

ಹರಿಯಾಣ | ನಿರ್ಮಾಣ ಹಂತದ ಗೋಡೆ ಕುಸಿತ – 7 ಕಾರ್ಮಿಕರು ಸಾವು, ಐವರ ಸ್ಥಿತಿ ಚಿಂತಾಜನಕ

Public TV
By Public TV
1 hour ago
Bengaluru Kempegowda International Airport 4
Bengaluru City

ನಗ್ನ ಜೋಡಿ ಫೋಟೋ ಪಾರ್ಸೆಲ್ – ಬೆಂಗ್ಳೂರು ಏರ್‌ಪೋರ್ಟ್‌ಗೆ ವಾಮಾಚಾರ?

Public TV
By Public TV
2 hours ago
White Phosphorus Bomb
Latest

ಕಾನೂನು ಉಲ್ಲಂಘಿಸಿದ ಇಸ್ರೇಲ್‌ – ಲೆಬನಾನ್‌ ವಸತಿ ಪ್ರದೇಶದ ಮೇಲೆ ಬಿಳಿ ರಂಜಕ ಬಳಸಿ ದಾಳಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?