ಬೆಂಗಳೂರು: ಸ್ಯಾಂಡಲ್ವುಡ್ ನಟಿ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯದಲ್ಲಿ ಹಂಚಿಕೊಂಡ ಹಾಟ್ ಫೋಟೋ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ. ಹಾಟ್ ಫೋಟೋ ಮೂಲಕವಾಗಿ ರಶ್ಮಿಕಾ ಸುದ್ದಿಯಾಗಿದ್ದಾರೆ.
ಇದುವರೆಗೂ ಕಾಣಿಕೊಳ್ಳದ ಸೂಪರ್ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿರೋ ಫೋಟೋ ವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಒಂದು ಸಂದೇಶವನ್ನು ನೀಡಿದ್ದಾರೆ. ನೇರಳೆ ಬಣ್ಣದ ಗೌನ್ ತೊಟ್ಟಿರೋ ರಶ್ಮಿಕಾ ಸೂಪರ್ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಆ ಫೋಟೋ ಜೊತೆಗೆ ಟೀಕಾಕಾರರಿಗೆ ಬಿರುಸಾಗಿ ಚಾಟಿಯನ್ನು ಬೀಸಿದ್ದಾರೆ.
View this post on Instagram
ದೊಡ್ಡ ದೊಡ್ಡ ಸಾಧನೆ ಮಾಡಲು ಹೊರಡುವ ಯುವತಿ ಚಿಕ್ಕ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಈ ಮಾತು ನನಗೆ ಅನ್ವಯ ಮಾಡಿಕೊಳ್ಳುತ್ತೇನೆ ಎಂದು ಬರೆದುಕೊಂಡು ಹಾಟ್ ಫೊಟೋವನ್ನು ಶೇರ್ ಮಾಡಿಕೊಂಡಿದ್ದಾರೆ.ಈ ಮೂಲಕವಾಗಿ ವಿನಾಕಾರಣ ತಮ್ಮನ್ನು ಟೀಕಿಸುವ ಟ್ರೋಲರ್ಗಳಿಗೆ ಸಖತ್ ಬಿರುಸಾಗಿ ಮಾತನಾಡಿದ್ದಾರೆ. ರಶ್ಮಿಕಾ ಅವರ ಈ ಫೋಟೋಗೆ ನೆಟ್ಟಿಗರು ಕಮೆಂಟ್ಗಳ ಸುರಿಮಳೆಗೈದಿದ್ದಾರೆ.
Someone said – A girl who’s going to do big things, can’t let the small things get to her…and I totally relate to it!✨ pic.twitter.com/S48uqVGPoM
— Rashmika Mandanna (@iamRashmika) June 15, 2021
ಬಾಲಿವುಡ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಅಮಿತಾಭ್ ಅವರ ಜೊತೆಗೆ ನಟಿಸುತ್ತಿರುವ ಗುಡ್ ಬೈ ಸಿನಿಮಾದ ಚಿತ್ರೀಕರಣಕ್ಕೆಂದು ಮುಂಬೈಗೆ ಬಂದಿದ್ದಾರೆ. ತೆಲಗು, ತಮಿಳು ಸಿನಿಮಾಗಳಲ್ಲಿ ರಶ್ಮಿಕಾ ಸಖತ್ ಬ್ಯೂಸಿಯಾಗಿದ್ದಾರೆ.