ದಾವಣಗೆರೆ: ಊಟ ಮಾಡಿ ಕೈ ತೊಳೆಯಲು ಕಾಲುವೆಗೆ ಇಳಿದಿದ್ದ ಯುವತಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆ ಬಳಿ ನಡೆದಿದೆ.
ಕಾಲು ಜಾರಿ ನೀರು ಹರಿಯುತ್ತಿರುವ ಕಾಲುವೆಗೆ ಬಿದ್ದು ಮೃತಪಟ್ಟ ಯುವತಿಯನ್ನು ಶ್ರುತಿ (21) ಎಂದು ಗುರುತಿಸಲಾಗಿದೆ. ಈಕೆ ಮರವಂಜಿ ಗ್ರಾಮದ ಯುವತಿಯಾಗಿದ್ದಾಳೆ. ತಾಯಿ ಹಾಗೂ ಅಣ್ಣನ ಜೊತೆ ತಾಯಿ ತವರು ಮನೆ ಹಾರೋಸಾಗರಕ್ಕೆ ಹೋಗಿ ಬರುವಾಗ ಈ ಘಟನೆ ನಡೆದಿದೆ.

ಯುವತಿಯ ಶವ ಮೆದಕೆರೆ ಬಳಿ ಪತ್ತೆಯಾಗಿದ್ದು, ಉಳಿದ ಇಬ್ಬರಿಗೆ ಸ್ಥಳೀಯರು ಹುಡುಕಾಟ ನಡೆಸುತ್ತಿದ್ದಾರೆ. ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

