Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಂಡ್ಯದ ದೇವಸ್ಥಾನವೊಂದರಲ್ಲಿ ಕೇಳಿಬರ್ತಿದೆ ನಿಗೂಢ ಶಬ್ದ- ನಿಬ್ಬೆರಗಾದ ಹತ್ತೂರ ಜನ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಮಂಡ್ಯದ ದೇವಸ್ಥಾನವೊಂದರಲ್ಲಿ ಕೇಳಿಬರ್ತಿದೆ ನಿಗೂಢ ಶಬ್ದ- ನಿಬ್ಬೆರಗಾದ ಹತ್ತೂರ ಜನ

Districts

ಮಂಡ್ಯದ ದೇವಸ್ಥಾನವೊಂದರಲ್ಲಿ ಕೇಳಿಬರ್ತಿದೆ ನಿಗೂಢ ಶಬ್ದ- ನಿಬ್ಬೆರಗಾದ ಹತ್ತೂರ ಜನ

Public TV
Last updated: January 21, 2021 11:19 am
Public TV
Share
2 Min Read
MND
SHARE

ಮಂಡ್ಯ: ಪ್ರಕೃತಿಯಲ್ಲಿ ಮಾನವನಿಗೆ ತಿಳಿಯದ ಅದೇಷ್ಟೋ ನಿಗೂಢಗಳು, ಅಚ್ಚರಿಗಳು ಇರುತ್ತವೆ. ಇದೀಗ ಇಂತಹದೊಂದು ಅಚ್ಚರಿ ಹಾಗೂ ನಿಗೂಢತೆಗೆ ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಇರುವ ದೇವಸ್ಥಾನ ಕಾರಣವಾಗಿದೆ. ಅಲ್ಲಿನ ನಿಗೂಢತೆಗೆ ಸುತ್ತಲಿನ ಹತ್ತೂರಿನ ಜನರು ಸಹ ನಿಬ್ಬೆರಗಾಗಿದ್ದಾರೆ.

MND TEMPLE 3

ಕತ್ತಲಾದರೆ ಸಹ ಆ ದೇವಸ್ಥಾನದ ಗೋಪುರದ ಬಳಿ ಹತ್ತೂರಿನ ನೂರಾರು ಜನರು ಬಂದು ನಿಶ್ಯಬ್ದವಾಗಿ ನಿಂತುಕೊಳ್ಳುತ್ತಾರೆ. ಇದೇನಿದು ದೇವಸ್ಥಾನಕ್ಕೆ ಬಂದು ಪೂಜೆ ಮಾಡುವ ಬದಲು ಈ ಜನ ಗೋಪುರದ ಬಳಿ ಅದ್ಯಾಕೆ ನಿಶ್ಯಬ್ದವಾಗಿ ನಿಲ್ಲುತ್ತಾರೆ ಅಂತ ಕೇಳಬಹುದು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದ ಪಟ್ಟಲದಮ್ಮ ದೇವಸ್ಥಾನದ ಬಳಿಯ ದೃಶ್ಯಗಳನ್ನು ನೋಡಿ ಎಂತವರಿಗೂ ಹಾಗೆ ಅನ್ನಿಸೋದು ಸಹಜ. ಆದರೆ ಈ ದೇವಸ್ಥಾನದ ಬಳಿ ಹೋದಾಗ ಕೇಳುವ ನಿಗೂಢವಾದ ಶಬ್ದವನ್ನು ಆಲಿಸಿದ್ರೆ ಎಂಥವರು ಸಹ ಸೈಲೆಂಟ್ ಆಗಿ ಹೋಗುತ್ತಾರೆ. ಕಳೆದ 15 ದಿನಗಳಿಂದ ಈ ದೇವಸ್ಥಾನ ಗೋಪುರದ ಮೇಲಿಂದ ಉಸಿರು ಬಿಡುವ ಶಬ್ದವೊಂದು ಕೇಳಿ ಬರುತ್ತಾ ಇದೆ. ಇಷ್ಟು ವರ್ಷ ಇಲ್ಲದ ಈ ಶಬ್ದ ಈಗ ಏಕೆ ಬರ್ತಾ ಇದೆ ಎಂದು ಕೊಪ್ಪ ಗ್ರಾಮ ಸೇರಿದಂತೆ ಸುತ್ತ ಹತ್ತೂರಿನ ಜನ ಆಶ್ಚರ್ಯದಿಂದ ಬಂದ ಆ ಶಬ್ದವನ್ನು ಕೇಳಿಸಿಕೊಂಡು ನಿಬ್ಬೆರಗಾಗುತ್ತಿದ್ದಾರೆ.

MND TEMPLE 2

ಗೋಪುರದ ಮೇಲೆ ಪಕ್ಷಿ ಅಥವಾ ಬೇರೆ ಯಾವುದಾದರೂ ಪ್ರಾಣಿ ಇರಬಹುದು ಎಂದು ಗ್ರಾಮ ಕೆಲ ಯುವಕರು ಸಹ ಗೋಪುರದ ಮೇಲೆ ಹತ್ತಿಯೂ ಸಹ ನೋಡಿದ್ದಾರೆ. ಆ ವೇಳೆ ಮೇಲೆ ಏನು ಸಿಗದೇ ಕೆಳಗೆ ಇಳಿದಾಗಲು ಅದೆ ಉಸಿರಿನ ಶಬ್ದ ಮತ್ತಷ್ಟು ಹೆಚ್ಚಾಗಿದೆ. ಈ ಶಬ್ದವನ್ನು ಕೇಳಿ ಗೋಪುರ ಮೇಲೆ ಹತ್ತಿದ ಯುವಕರು ಭಯಭೀತರಾಗಿ ಪಟ್ಟಲದಮ್ಮನನ್ನು ಕ್ಷಮೆಯಾಚನೆ ಮಾಡಿದ್ದಾರೆ. ಊರಿನವರು ಹಾಗೂ ಹಿರಿಯರು ಹೇಳುವ ಪ್ರಕಾರ ಇದು ನಮ್ಮ ಪಟ್ಟಲದಮ್ಮ ದೇವಿ ಮಾಡುತ್ತಿರುವ ಶಬ್ದ, 11 ವರ್ಷದಿಂದ ತಾಯಿಗೆ ಪರ ಹಾಗೂ ಕೊಂಡವನ್ನು ಹಾಯದ ಕಾರಣ ದೇವಿ ಈ ರೀತಿಯ ಸೂಚನೆ ನೀಡುತ್ತಾ ಇದ್ದಾಳೆ. ಇದು ದೇವರ ಪವಾಡವೆ ಎಂದು ಹೇಳುತ್ತಾ ಇದ್ದಾರೆ.

MND TEMPLE 4

ದೇವಸ್ಥಾನದ ಜಾಗದ ವಿಚಾರದಲ್ಲಿ ಹಾಗೂ ನವೀಕರಣದ ವಿಚಾರದಲ್ಲಿ ವಿವಾದ ಇರುವ ಕಾರಣ ಕಳೆದ 11 ವರ್ಷಗಳಿಂದ ಇಲ್ಲಿ ಪರ ಮತ್ತು ಕೊಂಡ ಹಾಯುವುದು ನಿಂತು ಹೋಗಿದೆ. ಈ ಹಿಂದೆ ಇಲ್ಲಿ ವಿಜೃಂಭಣೆಯಿಂದ ಪರ ನಡೆಯುತ್ತಾ ಇತ್ತು. ಇದೀಗ ಪರ ಹಾಗೂ ಕೊಂಡ ಹಾಯುವುದು ನಿಂತು ಹೋಗಿರುವ ಕಾರಣ ದೇವಸ್ಥಾನ ಗೋಪುರದಲ್ಲಿ ಈ ರೀತಿಯ ಶಬ್ದ ಬರುತ್ತಿದೆ. ಈ ಶಬ್ಧ ಕೇಳಿದ್ರೆ ಎದೆ ಜಲ್ ಎನ್ನುತ್ತಾ ಇದೆ. ಈ ಶಬ್ದವನ್ನು ಹಿಂದೆ ನಾವು ಎಂದಿಗೂ ಕೇಳಿರಲಿಲ್ಲ ಎಂದು ಇಲ್ಲಿನ ಜನರು ಆತಂಕದಲ್ಲಿ ಹೇಳುತ್ತಿದ್ದಾರೆ.

MND TEMPLE 1

ಈ ದೇವಸ್ಥಾನದ ಗೋಪುರದಿಂದ ಬರುತ್ತಿರುವ ನಿಗೂಢ ಶಬ್ದ ಏನು ಎಂದು ಇಲ್ಲಿಯವರೆಗೆ ತಿಳಿದುಬಂದಿಲ್ಲ. ಈ ನಿಗೂಢ ಶಬ್ಧವನ್ನು ಕೇಳಲು ಪ್ರತಿನಿತ್ಯ ಸಾವಿರಾರು ಜನರು ದೇವಸ್ಥಾನದ ಬಳಿ ಬರುತ್ತಿದ್ದು, ನಿಗೂಢ ಶಬ್ದವನ್ನು ಕೇಳಿ ಆತಂಕ ವ್ಯಕ್ತಪಡಿಸುತ್ತಿದ್ದು, ಪರ ಮಾಡಿದರೆ ಮಾತ್ರ ಈ ಶಬ್ದ ನಿಲ್ಲುತ್ತದೆ ಎಂದು ಜನ ಹೇಳ್ತಾ ಇದ್ದಾರೆ.

TAGGED:mandyaPublic TVtempleದೇವಸ್ಥಾನಪಬ್ಲಿಕ್ ಟಿವಿಮಂಡ್ಯ
Share This Article
Facebook Whatsapp Whatsapp Telegram

Cinema news

yash mother pushpa compound demolition 1
ಯಶ್‌ ತಾಯಿ ಸೈಟ್‌ ವಿವಾದ – ಏಕಪಕ್ಷೀಯ ತೀರ್ಪಿಗೆ ಕೋರ್ಟ್ ತಾತ್ಕಾಲಿಕ ತಡೆ
Cinema Court Districts Hassan Karnataka Latest States Top Stories
vijay devarakonda rashmika
ವೈರಲ್ ಆಯ್ತು ವಿಜಯ್ ದೇವರಕೊಂಡ – ರಶ್ಮಿಕಾ ವೆಡ್ಡಿಂಗ್ ಕಾರ್ಡ್; ಮದ್ವೆ ಎಲ್ಲಿ – ಯಾವಾಗ?
Cinema Latest Sandalwood South cinema
World Of Nagabandham
`ನಾಗಬಂಧಂ’ ಟೀಸರ್ ರಿಲೀಸ್ ಮಾಡಿದ ಸೂಪರ್‌ ಸ್ಟಾರ್‌ ಮಹೇಶ್ ಬಾಬು
Cinema Latest South cinema
Trisha Nainar Nagenthran
ಈ ರೀತಿಯ ಅಸಹ್ಯ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ: ನೈನಾರ್ ನಾಗೇಂದ್ರನ್‌ಗೆ ತ್ರಿಶಾ ತಿರುಗೇಟು
Cinema Latest Main Post South cinema

You Might Also Like

Basanagouda Patil Yatnal 1
Districts

ಯತೀಂದ್ರ ಕೂಡ ವಿಜಯೇಂದ್ರನಂತೆ ವಸೂಲಿಗೆ ಇಳಿದಿದ್ದಾನೆ: ಯತ್ನಾಳ್

Public TV
By Public TV
1 minute ago
Pakistan Team
Cricket

ಭಾರತದ ವಿರುದ್ಧ ಹೀನಾಯ ಸೋಲು – ಪಾಕಿನ ಇಬ್ಬರು ಸ್ಟಾರ್‌ ಆಟಗಾರರು ಔಟ್‌

Public TV
By Public TV
14 minutes ago
Nikhil Kumaraswamy 1
Districts

ಇವರ ಸಾಧನೆ ಸಾಲದ ಹೊರೆ ಅಷ್ಟೇ – ಸರ್ಕಾರದ 1000 ದಿನಗಳ ಸಂಭ್ರಮಕ್ಕೆ ನಿಖಿಲ್ ಲೇವಡಿ

Public TV
By Public TV
33 minutes ago
PM Narendra Modi Emmanuel Macron to Virtually Inaugurate Indias First Private Helicopter Assembly Line in Kolara
Districts

ಕೋಲಾರದಲ್ಲಿ ದೇಶದ ಮೊದಲ ಮಿನಿ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ನಾಳೆ ಮೋದಿ ಚಾಲನೆ

Public TV
By Public TV
45 minutes ago
NEHA FAYAZ 1
Court

ನೇಹಾ ಹಿರೇಮಠ್ ಕೋಲೆ ಆರೋಪಿಗೆ ಮತ್ತೆ ಹಿನ್ನೆಡೆ – 3ನೇ ಬಾರಿಗೆ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್

Public TV
By Public TV
1 hour ago
Mani Shankar Aiyar and Rahul Gandhi
Latest

ನಾನು ರಾಹುಲ್‌ವಾದಿಯಲ್ಲ, ಕೇರಳ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಲ್ಲ: ಮಣಿಶಂಕರ್‌ ಅಯ್ಯರ್‌

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?