ಬಸ್ಸಿಗಾಗಿ ಕಾಯ್ತಿದ್ದ ಯುವತಿಯನ್ನು ಆಟೋದಲ್ಲಿ ಕರ್ಕೊಂಡು ಹೋಗಿ ಚಾಲಕ ರೇಪ್!

Public TV
2 Min Read
auto 1

– ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ನೀಚ ಕೃತ್ಯ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆದಿದ್ದ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ನೀಚ ಕೃತ್ಯ ಬಯಲಾಗಿದೆ. ಆಟೋ ಚಾಲಕನೊಬ್ಬ ಯುವತಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಆರೋಪಿಯನ್ನು ಮುಬಾರಕ್(28) ಎಂದು ಗುರುತಿಸಲಾಗಿದೆ. ದೇವನಹಳ್ಳಿ ನಿವಾಸಿಯಾಗಿರುವ ಈತನನ್ನು ಸಂಪಿಗೆಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ವಿದ್ಯಾರ್ಥಿನಿಯ ರೇಪ್ & ಮರ್ಡರ್

sampigehalli

ಸಂತ್ರಸ್ತೆ ಕಂಪ್ಯೂಟರ್ ಸೈನ್ಸ್ ಕೋರ್ಸ್ ಜೊತೆಗೆ ಮದುವೆಗಳಲ್ಲಿ ಸ್ವಾಗಕಾರರಾಗಿ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದಳು. ಹೀಗೆ ವಿವಾಹ ಸಮಾರಂಭಕ್ಕೆ ತೆರಳಿದ್ದ ಯುವತಿ ಕಾರ್ಯಕ್ರಮ ಮುಗಿಯುವಾಗ ತಡವಾದ ಹಿನ್ನೆಲೆಯಲ್ಲಿ ಮಂಟಪದಲ್ಲಿಯೇ ಉಳಿದುಕೊಂಡಿದ್ದಾಳೆ. ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಥಣಿಸಂದ್ರ ಮುಖ್ಯರಸ್ತೆ ಬಳಿ ಬಸ್ಸಿಗಾಗಿ ಕಾಯುತ್ತಿದ್ದಳು. ಕೆಲ ಹೊತ್ತಾದರೂ ಬಸ್ಸು ಬಂದಿರಲಿಲ್ಲ. ಈ ವೇಳೆ ಅಲ್ಲಿಗೆ ಬಂದ ಆಟೋದವನು ಎಲ್ಲಿಗೆ ಹೋಗಬೇಕು ಎಂದು ಕೇಳಿದ್ದಾನೆ. ನಾಗವಾರ ಕಡೆ ಎಂದು ಸಂತ್ರಸ್ತೆ ಹೇಳಿದ್ದಾನೆ. ಆಗ ಆರೋಪಿ ಮುಬಾರಕ್ ನಾನು ಆ ಕಡೆನೆ ಹೋಗಬೇಕು ಎಂದು ಹೇಳಿ ಆಟೋ ಹತ್ತಿಸಿಕೊಂಡಿದ್ದಾನೆ.

auto copy

ಹೀಗೆ ಹೋಗುವಾಗ ನಾಗವಾರ ಸಿಗ್ನಲ್ ಬಳಿ ಬರುತ್ತಿದ್ದಂತೆಯೇ ಸಂತ್ರಸ್ತೆ ಆಟೋ ನಿಲ್ಲಿಸುವಂತೆ ಸೂಚಿಸಿದ್ದಾಳೆ. ಆದರೆ ಮುಬಾರಕ್ ಯುವತಿಯ ಮಾತನ್ನು ಕೇಳದೆ ಮುಂದೆ ಸಾಗಿದ್ದಾನೆ. ಇದರಿಂದ ಗಾಬರಿಗೊಂಡ ಯುವತಿ ಚೀರಾಡಿದಾಗ, ನನಗೆ ಸ್ನೇಹಿತರೊಬ್ಬರಿಗೆ ಹಣ ಕೊಡಬೇಕು. ಅವರಿಂದ ಹಣ ಪಡೆದ ಕೂಡಲೇ ನೀವು ಹೇಳಿದ ಜಾಗಕ್ಕೆ ಕರೆದುಕೊಂಡು ಹೋಗಿ ಬಿಡುತ್ತೇನೆ ಎಂದು ಹೇಳಿದ್ದಾನೆ. ನಂತರ ನಿರ್ಜನ ಪ್ರದೇಶವೊಂದರಲ್ಲಿ ಆಟೋ ನಿಲ್ಲಿಸಿ, ಆಟೋದೊಳಗಿಂದ ಸಂತ್ರಸ್ತೆಯನ್ನು ಎಳೆದೊಯ್ದು ಆಕೆಯ ಮೇಲೆ ಕಾಮ ತೃಷೆ ತೀರಿಸಿಕೊಂಡಿದ್ದಾನೆ. ಬಳಿಕ ಯುವತಿಯನ್ನು ಅಲ್ಲಿಯೇ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಇದನ್ನೂ ಓದಿ: ಸೆಕ್ಸ್ ವೇಳೆ ಮೂರ್ಛೆ ಹೋದ್ಳು, ನಾನು ಕೊಲೆ ಮಾಡಿಲ್ಲ ಅಂದ ಆರೋಪಿ! 

Police Jeep 1 2 medium

ನಿರ್ಜನ ಪ್ರದೇಶದಿಂದ ಹತ್ತಿರದ ಮುಸ್ಯರಸ್ತೆಗೆ ನಡೆದುಕೊಂಡು ಬಂದ ಸಂತ್ರಸ್ತೆ ಬೈಕಿನಲ್ಲಿ ತೆರಳುತ್ತಿದ್ದವರ ಸಹಾಯ ಪಡೆದು ಮನೆ ಸೇರಿದ್ದಾಳೆ. ಬಳಿಕ ಪೊಲೀಸ್ ಠಾಣೆಗೆ ತೆರಳಿದ ಯುವತಿ ಆರೋಪಿಯ ಆಟೋ ನೋಂದಣಿ ಸಂಖ್ಯೆಯನ್ನು ಪೊಲೀಸರಿಗೆ ತಿಳಿಸಿದ್ದಾಳೆ. ಅಂತೆಯೇ ಸಂಪಿಗೆಹಳ್ಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಯುವತಿ ನೀಡಿದ ಆಟೋ ನಂಬರ್ ಪತ್ತೆ ಹಚ್ಚಿ, ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

ARREST 2540291b 2

Share This Article
Leave a Comment

Leave a Reply

Your email address will not be published. Required fields are marked *