Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಎಣ್ಣೆ ಪಾರ್ಟಿಗೆ ಸೈಡ್ಸ್ ತರಲಿಲ್ಲವೆಂದು ಸ್ನೇಹಿತನನ್ನೇ ಚುಚ್ಚಿ ಕೊಂದ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಎಣ್ಣೆ ಪಾರ್ಟಿಗೆ ಸೈಡ್ಸ್ ತರಲಿಲ್ಲವೆಂದು ಸ್ನೇಹಿತನನ್ನೇ ಚುಚ್ಚಿ ಕೊಂದ

Crime

ಎಣ್ಣೆ ಪಾರ್ಟಿಗೆ ಸೈಡ್ಸ್ ತರಲಿಲ್ಲವೆಂದು ಸ್ನೇಹಿತನನ್ನೇ ಚುಚ್ಚಿ ಕೊಂದ

Public TV
Last updated: May 11, 2020 12:29 pm
Public TV
Share
1 Min Read
liquor bottle
SHARE

– ಬಾತು ಕೋಳಿ ಮಾಂಸಕ್ಕಾಗಿ ಕೊಲೆ
– ಜಮೀನಿನಲ್ಲಿ ಪಾರ್ಟಿ ಮಾಡುತ್ತಾ ಜಗಳ

ಚೆನ್ನೈ: ಎಣ್ಣೆ ಪಾರ್ಟಿಗೆ ಸೈಡ್ಸ್ ತರಲಿಲ್ಲ ಎಂದು ಸಿಟ್ಟಿಗೆದ್ದ ವ್ಯಕ್ತಿಯೋರ್ವ ತನ್ನ ಸ್ನೇಹಿತನನ್ನೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಕೊಲೆ ಮಾಡಿದ ಆರೋಪಿಯನ್ನು ವಾಸು(38) ಎಂದು ಗುರುತಿಸಲಾಗಿದ್ದು, ವಿನಯಗಂ(43) ಕೊಲೆಯಾದ ದುರ್ದೈವಿಯಾಗಿದ್ದಾನೆ. ತಮಿಳುನಾಡಿನ ಚೆಂಗಲ್ಪಟ್ಟುವಿನ ಗುಡುವಾಂಚೇರಿ ಪಟ್ಟಣದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ವಾಸು ಹಾಗೂ ವಿನಯಗಂ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದು, ಹೂವು ಮಾರುವುದು, ಕ್ಯಾಬ್ ಓಡಿಸುವುದು ಹಾಗೂ ರಿಯಲ್ ಎಸ್ಟೇಟ್ ಬ್ರೋಕರ್ಸ್ ಆಗಿದ್ದರು. ಲಾಕ್‍ಡೌನ್ ಸಡಿಲಿಕೆ ಆಗಿ ಮದ್ಯ ಮಾರಾಟ ಆರಂಭವಾದ ಹಿನ್ನೆಲೆ ಇಬ್ಬರು ಜೊತೆ ಸೇರಿ ಎಣ್ಣೆ ಪಾರ್ಟಿ ಮಾಡಲು ನಿರ್ಧರಿಸಿದರು. ಆದ್ರೆ ಎಣ್ಣೆ ನಾನು ತರುತ್ತೇನೆ, ಸೈಡ್ಸ್ ಗೆ ಬಾತುಕೋಳಿ ಮಾಂಸ ತೆಗೆದುಕೊಂಡು ಬಾ ಎಂದು ವಾಸು ವಿನಯಗಂ ಬಳಿ ಹೇಳಿದ್ದನು.

liquor bottle 1

ವಾಸು ಮದ್ಯ ತಂದ ತಕ್ಷಣ ಇಬ್ಬರೂ ತೋಟವೊಂದರಲ್ಲಿ ಎಣ್ಣೆ ಪಾರ್ಟಿ ಮಾಡಲು ಹೋದರು. ಆದರೆ ಕುಡಿಯುತ್ತಿದ್ದ ವೇಳೆ ವಾಸು ಸೈಡ್ಸ್ ಎಲ್ಲಿ ಎಂದು ಕೇಳಿದನು. ಆಗ ವಿನಯಗಂ ಅಯ್ಯೊ ಬಾತುಕೋಳಿ ಮಾಂಸ ತರೋದನ್ನ ಮರೆತುಬಿಟ್ಟೆ ಎಂದಾಕ್ಷಣ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಜಗಳ ತಾರಕ್ಕಕ್ಕೇರಿ ಸಿಟ್ಟಿಗೆದ್ದ ವಾಸು ತನ್ನ ಬಳಿಯಿದ್ದ ಚಾಕುವಿನಿಂದ ವಿನಯಗಂ ಮೇಲೆ ಹಲ್ಲೆ ಮಾಡಿದ್ದಾನೆ. ಆತನಿಗೆ ಚುಚ್ಚಿ ಕೊಲೆಗೈದು ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.

roast duck 688px

ಈ ವೇಳೆ ಜಮೀನಿನ ದಾರಿಯಲ್ಲಿ ಹೋಗುತ್ತಿದ್ದವರು ಗಲಾಟೆ ಸದ್ದು ಕೇಳಿ ಸ್ಥಳಕ್ಕೆ ಹೋಗುವಷ್ಟರಲ್ಲಿ ವಾಸು ವಿನಯಗಂ ಅನ್ನು ಕೊಲೆ ಮಾಡಿ ಓಡಿ ಹೋಗಿದ್ದನು. ಹೀಗಾಗಿ ತಕ್ಷಣ ಪೊಲೀಸರಿಗೆ ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅನುಮಾನದ ಮೇರೆಗೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಬಲೆ ಬೀಸಿದ್ದಾರೆ.

TAGGED:chennaifriendsliquorliquor PartypolicePublic TVtamil naduಎಣ್ಣೆ ಪಾರ್ಟಿಚೆನ್ನೈತಮಿಳುನಾಡುಪಬ್ಲಿಕ್ ಟಿವಿಪೊಲೀಸ್ಮದ್ಯಸ್ನೇಹಿತರು
Share This Article
Facebook Whatsapp Whatsapp Telegram

Cinema news

Hansika Motwani Sohael Khaturiya
ಉದ್ಯಮಿ‌ ಸೊಹೇಲ್‌ ಜೊತೆಗಿನ 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯಹಾಡಿದ ‘ಬಿಂದಾಸ್‌’ ನಟಿ
Cinema Latest South cinema Top Stories
d53acfe5 1562 41db 9d81 d5b390041c73
ಪ್ರಿಯಕರ ಫರ್ಮಾನ್‌ ಖಾನ್‌ ಜೊತೆ ಕುಂಭಮೇಳದ ವೈರಲ್‌ ತಾರೆ ಮೊನಾಲಿಸಾ ಮದುವೆ
Cinema Latest Main Post
Monalisa Viral Video
ಮದುವೆಗೆ ಬಲವಂತ ಆರೋಪ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ‘ಕುಂಭಮೇಳ ಚೆಲುವೆ’ ಮೊನಾಲಿಸಾ
Cinema Latest Main Post
Yelahanka House Theft Arrest
ಸಿನಿಮೀಯ ಶೈಲಿಯಲ್ಲಿ ಮನೆ ಕಳ್ಳತನ – 3.5 ಕೋಟಿ ಮೌಲ್ಯದ ಚಿನ್ನಾಭರಣ ಸೀಜ್
Bengaluru City Cinema Crime Karnataka Latest Top Stories

You Might Also Like

Prahlad Joshi 1
Latest

ದೇಶದ ವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ ನವೀಕರಿಸಬಹುದಾದ ಇಂಧನದ್ದೇ ಅಗ್ರಪಾಲು – ಜೋಶಿ

Public TV
By Public TV
11 minutes ago
Cement lorry fell 50 feet deep driver cleaner miraculously escape mudigere chikmagaluru 2
Chikkaballapur

50 ಅಡಿ ಆಳಕ್ಕೆ ಬಿದ್ದ ಸಿಮೆಂಟ್ ಲಾರಿ – ಚಾಲಕ, ಕ್ಲೀನರ್ ಪವಾಡಸದೃಶ ಪಾರು

Public TV
By Public TV
45 minutes ago
Indian Origin Savani Brothers
Latest

ಭಾರತೀಯ ಮೂಲದ ಸಹೋದರರಿಗೆ 400 ವರ್ಷ ಶಿಕ್ಷೆ?

Public TV
By Public TV
48 minutes ago
Kavya Maran Abrar Ahmed
Cricket

ಕಾವ್ಯ ಮಾರನ್‌ ತಂಡದಲ್ಲಿ ಪಾಕ್‌ ಸ್ಪಿನ್ನರ್‌ – ನೆಟ್ಟಿಗರಿಂದ ಭಾರೀ ಆಕ್ರೋಶ

Public TV
By Public TV
1 hour ago
Vijayapura Car Accident
Crime

ಕಾರು ಪಲ್ಟಿಯಾಗಿ ಅವಘಡ – ಶ್ರೀಶೈಲಕ್ಕೆ ಹೋಗ್ತಿದ್ದ ಇಬ್ಬರು ದುರ್ಮರಣ

Public TV
By Public TV
2 hours ago
Assam Election Fear of Operation Kamala Congress MLAs shift to Bidadi Wonderla Resort Bengaluru 1
Bengaluru City

ಕ್ರಾಸ್‌ ವೋಟ್‌ ಭೀತಿ – ಒಡಿಶಾ ಕೈ ಶಾಸಕರು ಬಿಡದಿ ರೆಸಾರ್ಟ್‌ಗೆ ಶಿಫ್ಟ್‌

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?