ಬೆಂಗಳೂರು: ನಟ ಸುದೀಪ್ ರಸ್ತೆಯಲ್ಲಿ ವೇಗವಾಗಿ ಬೈಕ್ ಚಲಿಸುತ್ತಿದ್ದವರನ್ನು ನಿಲ್ಲಿಸಿ ಸಲಹೆ ಕೊಟ್ಟಿದ್ದಾರೆ. ಇದೀಗ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸುದೀಪ್ ಅಭಿಮಾನಿಗಳು ಟ್ವಿಟ್ಟರಿನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಸುದೀಪ್ ಕಾರಿನಲ್ಲಿ ಕುಳಿತಿದ್ದರು. ಈ ವೇಳೆ ರಸ್ತೆಯಲ್ಲಿ ವೇಗವಾಗಿ ಬೈಕ್ ಓಡಿಸುತ್ತಿದ್ದವರನ್ನು ನಿಲ್ಲಿಸಿದ್ದಾರೆ. ನಂತರ “ಏನ್ರೀ ನೀವು ಇಷ್ಟು ವೇಗವಾಗಿ ಬರುತ್ತಿದ್ದೀರ ಬ್ರದರ್” ಎಂದು ಸ್ವೀಟಾಗಿ ಪ್ರಶ್ನಿಸಿದ್ದಾರೆ. ತಕ್ಷಣ ಬೈಕ್ ಓಡಿಸುತ್ತಿದ್ದವರು ಸಾರಿ ಸರ್, ನಿಧಾನಕ್ಕೆ ಬರುತ್ತೀವಿ ಎಂದು ಹೇಳಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ನಿನ್ನೆ ರಸ್ತೆಯಲ್ಲಿ ವೇಗವಾಗಿ ಚಲ್ಲುಸೂತ್ತಿದ್ದ ವರನ್ನು ನಿಲ್ಲಿಸಿ ನಿಧಾನವಾಗಿ ಚಲಿಸಲು ಹೇಳಿ ಸ್ವೀಟಾಗಿ ವಾರ್ನಿಂಗ್ ಮಾಡಿದ ನಮ್ಮ ಅಭಿನಯ ಚಕ್ರವರ್ತಿ @KicchaSudeep Anna
ಈ ನಿಮ್ಮ ಪ್ರೀತಿಗೆ ಇಡೀ ನಿಮ್ಮ ಸ್ನೇಹಿತರು ಸದಾ ಚಿರಋಣಿ🙏🙏
Follow Us 👉 @KicchanaAdda 😎 pic.twitter.com/NjxDW0gCND
— 𝐊𝐢𝐜𝐜𝐡𝐚𝐧𝐚𝐀𝐝𝐝𝐚™ 20𝐊 (@KicchanaAdda) December 18, 2019
ಅಭಿಮಾನಿಗಳು ವಿಡಿಯೋ ಶೇರ್ ಮಾಡಿ ಅದಕ್ಕೆ, “ನಿನ್ನೆ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದವರನ್ನು ನಿಲ್ಲಿಸಿ ನಿಧಾನವಾಗಿ ಚಲಿಸಲು ಹೇಳಿ, ಸ್ವೀಟಾಗಿ ವಾರ್ನಿಂಗ್ ಮಾಡಿದ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಣ್ಣ. ಈ ನಿಮ್ಮ ಪ್ರೀತಿಗೆ ಇಡೀ ನಿಮ್ಮ ಸ್ನೇಹಿತರು ಸದಾ ಚಿರಋಣಿ” ಎಂದು ಬರೆದು ಕೈ ಮುಗಿಯುವ ಎರಡು ಎಮೋಜಿಯನ್ನು ಹಾಕಿದ್ದಾರೆ.
ಸದ್ಯಕ್ಕೆ ಸುದೀಪ್ ಬಾಲಿವುಡ್ ‘ದಬಾಂಗ್ 3’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಇದೇ ತಿಂಗಳ 20ರಂದು ತೆರೆಗೆ ಬರುತ್ತಿದೆ. ‘ದಬಾಂಗ್ 3’ ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗುತ್ತಿದ್ದು, ಇದೇ ಮೊದಲ ಬಾರಿಗೆ ಸುದೀಪ್, ಬಾಲಿವುಡ್ ನಟ ಸಲ್ಮಾನ್ ಖಾನ್ ಮುಂದೆ ವಿಲನ್ ಆಗಿ ಅಬ್ಬರಿಸಿದ್ದಾರೆ.
