Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 4 ತಿಂಗ್ಳ ಹಿಂದೆಯಷ್ಟೇ ಮಗನಿಗೆ ಆಸ್ತಿ ವರ್ಗಾಯಿಸಿದ್ದರು ರೆಬೆಲ್ ಸ್ಟಾರ್..!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | 4 ತಿಂಗ್ಳ ಹಿಂದೆಯಷ್ಟೇ ಮಗನಿಗೆ ಆಸ್ತಿ ವರ್ಗಾಯಿಸಿದ್ದರು ರೆಬೆಲ್ ಸ್ಟಾರ್..!

Districts

4 ತಿಂಗ್ಳ ಹಿಂದೆಯಷ್ಟೇ ಮಗನಿಗೆ ಆಸ್ತಿ ವರ್ಗಾಯಿಸಿದ್ದರು ರೆಬೆಲ್ ಸ್ಟಾರ್..!

Public TV
Last updated: November 28, 2018 1:44 pm
Public TV
Share
2 Min Read
AMBI SON copy
SHARE

ಮಂಡ್ಯ: ಮಗನ ಹೆಸರಿಗೆ ಆಸ್ತಿಯನ್ನು ವರ್ಗಾಯಿಸಿದ್ದು ಈ ಮೂಲಕ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ತಾನು ಹೆಚ್ಚು ದಿನ ಬದುಕಲ್ಲ ಅನ್ನೋ ಸುಳಿವು ಮೊದಲೇ ಸಿಕ್ಕಿತ್ತಾ ಅನ್ನೋ ಪ್ರಶ್ನೆಯೊಂದು ಇದೀಗ ಕಾಡುತ್ತಿದೆ.

ಅಂಬಿ ನಾಲ್ಕು ತಿಂಗಳ ಹಿಂದೆಯಷ್ಟೇ ತಮ್ಮ ಆಸ್ತಿಯನ್ನು ಮಗನ ಹೆಸರಿಗೆ ಬದಲಾಯಿಸಿದ್ದರು. ಹುಟ್ಟೂರು ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆ ಗ್ರಾಮದಲ್ಲಿ 7 ಎಕರೆಯಷ್ಟು ಪಿತ್ರಾರ್ಜಿತ ಆಸ್ತಿ ಇತ್ತು. ಮದ್ದೂರು ಪಟ್ಟಣದಲ್ಲಿರುವ ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ಪುತ್ರ ಅಭಿಷೇಕ್ ಜೊತೆಗೆ ಬಂದಿದ್ದ ಅಂಬಿರೀಶ್ ಅವರು ಈ ಆಸ್ತಿಯನ್ನು ಮಗನ ಹೆಸರಿಗೆ ಬದಲಾಯಿಸಿದ್ದರು.

vlcsnap 2018 11 28 12h19m51s56

ಜುಲೈ 26ರಂದು ಅಂಬಿ ಮದ್ದೂರಿನ ಸಬ್ ರಿಜಿಸ್ಟಾರ್ ಆಫೀಸಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಅವರು ಮಾಧ್ಯಮದವರನ್ನು ಒಳಗಡೆ ಬಿಡಬೇಡಿ ಅಂತ ಹೇಳಿ, ತಮ್ಮ ಮಗನ ಜೊತೆ ಕಚೇರಿಯಲ್ಲಿ ತನ್ನ ಆಸ್ತಿಯನ್ನು ಮಗನ ಹೆಸರಿಗೆ ಬರೆದುಕೊಟ್ಟಿದ್ದರು. ಕಚೇರಿಯಿಂದ ಹೊರಗಡೆ ಬಂದ ಬಳಿಕ ಅಂಬರೀಶ್ ಅವರು ಮಾಧ್ಯಮಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಆದ್ರೆ ವಿಡಿಯೋ ಮಾಡಲು ಅವಕಾಶ ಮಾಡಿಕೊಟ್ಟಿದ್ದರು. ಇವೆಲ್ಲವನ್ನೂ ಗಮನಿಸಿದ್ರೆ ಅಂಬರೀಶ್ ಅವರಿಗೆ ತನ್ನ ಆರೋಗ್ಯ ಕ್ಷೀಣಿಸುತ್ತಿದೆ ಅಂತ ಅರಿವಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಮಗನ ಹೆಸರಿಗೆ ಆಸ್ತಿ ವರ್ಗಾವಣೆ ಮಾಡಿದ್ರಾ ಅಂತ ಮಂಡ್ಯದಲ್ಲಿ ಅವರ ಅಭಿಮಾನಿಗಳು ಚರ್ಚೆ ಮಾಡುವ ಮೂಲಕ ಭಾವುಕರಾಗುತ್ತಿದ್ದಾರೆ.

vlcsnap 2018 11 28 12h19m56s114

ನವೆಂಬರ್ 24ರ ಶನಿವಾರದಂದು ಮಂಡ್ಯದಲ್ಲಿ ಭೀಕರ ಬಸ್ ಅಪಘಾತ ನಡೆದಿತ್ತು. ಈ ಕುರಿತಾಗಿ ಅಂಬರೀಶ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದರು. ಈ ಸಂದರ್ಭದಲ್ಲಿ ಅವರು ತನಗೆ ಹುಷಾರಿಲ್ಲದಿರುವುದಾಗಿ ತಿಳಿಸಿದ್ದರು. ಆದ್ರೆ ರಾತ್ರಿ ಹೃದಯಘಾತವಾಗಿತ್ತು. ಕೂಡಲೇ ಅವರನ್ನು ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ನಂತ ಅವರ ಪಾರ್ಥಿವ ಶರೀರವನ್ನು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.

ambi tilak copy

ಭಾನುವಾರ ಸಂಜೆ ಅವರ ಪಾರ್ಥಿವ ಶರೀರವನ್ನು ಸೇನಾ ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ಕೊಂಡೊಯ್ದು, ಅಲ್ಲಿನ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸೋಮವಾರ ಮತ್ತೆ ಬೆಂಗಳೂರಿಗೆ ಪಾರ್ಥಿವ ಶರೀರವನ್ನು ತಂದು ಮೆರವಣಿಗೆಯ ಮೂಲಕ ಕಂಠೀರವ ಸ್ಟುಡಿಯೋಗೆ ಕೊಂಡೊಯ್ದು ಅಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:abhishekAmbareeshmandyapropertyPublic TVrebel starsandalwoodsonಅಂಬರೀಶ್ಅಭಿಷೇಕ್ಆಸ್ತಿಪಬ್ಲಿಕ್ ಟಿವಿಮಂಗಮಂಡ್ಯರೆಬೆಲ್ ಸ್ಟಾರ್ಸ್ಯಾಂಡಲ್ ವುಡ್
Share This Article
Facebook Whatsapp Whatsapp Telegram

Cinema news

Rashmika Mandanna Vijay Deverakonda Wedding
Rashmika Mandanna-Vijay Deverakonda Wedding: ಮದುವೆಯ ಫೋಟೊ ಹಂಚಿಕೊಂಡ ರಶ್ಮಿಕಾ ಮಂದಣ್ಣ
Cinema Latest Main Post South cinema
Rashmika Mandanna Vijay Devarakonda 1
ವಿರೋಶ್‌ ಕಲ್ಯಾಣಕ್ಕೆ ಸ್ಯಾಂಡಲ್‌ವುಡ್‌ನ 11 ಮಂದಿಗೆ ಆಹ್ವಾನ
Cinema Latest Sandalwood Top Stories
Vijay Deverakonda
Rashmika-Vijay | ʻವಿರೋಶ್ʼ ಕಲ್ಯಾಣ – ಸತಿಪತಿಯಾದ ವಿಜಯ್, ರಶ್ಮಿಕಾ!
Cinema Latest Main Post Sandalwood
Rashmika Mandanna Vijay Devarakonda Wedding Decorated Kodagu Virajpet House
ರಶ್ಮಿಕಾ ಮಂದಣ್ಣ ಮದುವೆ – ಸಿಂಗಾರಗೊಂಡ ಕೊಡಗಿನ ಮನೆ
Cinema Districts Karnataka Kodagu Latest Sandalwood Top Stories

You Might Also Like

Cabinet Siddaramaiah
Bengaluru City

ನಿರುದ್ಯೋಗಿಗಳ ಉಗ್ರ ಹೋರಾಟಕ್ಕೆ ಮಣಿದ ಸರ್ಕಾರ – 56 ಸಾವಿರ ನೇಮಕಾತಿಗೆ ಗ್ರೀನ್ ಸಿಗ್ನಲ್

Public TV
By Public TV
26 minutes ago
Thawar Chand Gehlot Internal Reservation Bill
Bengaluru City

ನೇಮಕಾತಿ ಪ್ರಕ್ರಿಯೆಗೆ ತೊಡಕಾಗಿದ್ದ ಒಳ ಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ

Public TV
By Public TV
51 minutes ago
Using Mobile
Bengaluru City

ಸ್ಕೂಲ್, ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್ ಆಗುತ್ತಾ? – ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಕ್ಕೆ ಮನವಿ

Public TV
By Public TV
1 hour ago
Abhishek Sharma Hardik Pandya
Cricket

ಅಭಿಷೇಕ್‌, ಹಾರ್ದಿಕ್‌ ಸ್ಫೋಟಕ ಫಿಫ್ಟಿ; ಜಿಂಬಾಬ್ವೆಗೆ 257 ಬೃಹತ್‌ ರನ್‌ಗಳ ಗುರಿ

Public TV
By Public TV
1 hour ago
bank loan
Hassan

9 ರೂಪಾಯಿ ಸಾಲಕ್ಕಾಗಿ ಬೆನ್ನುಬಿದ್ದ ಬ್ಯಾಂಕ್‌ – 10 ರೂ. ಲೋನ್ ಕಟ್ಟಿ 66 ಪೈಸೆ ವಾಪಸ್ ಕೊಡಿ ಅಂತ ಗ್ರಾಹಕ ಪಟ್ಟು

Public TV
By Public TV
2 hours ago
DK Shivakumar 1 1
Districts

ಸರ್ಕಾರಕ್ಕೆ ಹೊರೆಯಾದ್ರೂ ನಿಲ್ಲಿಸಲ್ಲ, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯೂ ಇಲ್ಲ: ಡಿಕೆಶಿ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?