ಒಂದು ವೇಳೆ ಗೆದ್ದಿದ್ದರೆ, ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಹೆಚ್.ವೈ.ಮೇಟಿ

Public TV
1 Min Read
METI MB PATIL

ಬೆಂಗಳೂರು: ನಾನು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೇನೆ. ಸಚಿವ ಸ್ಥಾನ ಕೋಳೋದು ಸರಿಯಲ್ಲ. ಒಂದು ವೇಳೆ ನಾನು ಜಯ ಸಾಧಿಸಿದ್ದರೆ ಖಂಡಿತಾ ಸಚಿವ ಸ್ಥಾನದ ಆಕಾಂಕ್ಷಿಯಾಗಿರುತ್ತಿದ್ದೆ ಎಂದು ಮಾಜಿ ಸಚಿವ ಹೆಚ್.ವೈ.ಮೇಟಿ ಹೇಳಿದ್ದಾರೆ.

ಬಬಲೇಶ್ವರ ಕ್ಷೇತ್ರದಲ್ಲಿ ಜಯ ಸಾಧಿಸಿರುವ ಎಂ.ಬಿ.ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿ ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ ಅಂತಾ ಎಂ.ಬಿ.ಪಾಟೀಲರ ಪರವಾಗಿ ಬ್ಯಾಟ್ ಬೀಸಿದ್ರು. ಇದನ್ನೂ ಓದಿ: ಕೈ ಶಾಸಕ ಎಂ.ಬಿ ಪಾಟೀಲ್ ರಾಜೀನಾಮೆ?

HY METI

ಇತ್ತ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಈಗಾಗಲೇ ಎಂ.ಬಿ.ಪಾಟೀಲ್ ಸಾರ್ವಜನಿಕವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಸದಾಶಿವನಗರದಲ್ಲಿರುವ ಶಾಸಕರ ನಿವಾಸ ಮುಂದೆ ಎಂ.ಬಿ ಪಾಟೀಲ್ ಮನೆ ಮುಂದೆ ಬೆಂಬಲಿಗರು ಪ್ರತಿಭಟನೆ ಮುಂದಾಗಿದ್ದಾರೆ. ಮನೆಯ ಮುಂದೆ ಪ್ರತಿಭಟನೆಗೆ ಅವಕಾಶ ನೀಡದ ಕಾರಣ ಪಾಟೀಲ್ ಅಭಿಮಾನಿಗಳು ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಚಿವ ಸ್ಥಾನ ಸಿಗದೇ ಇದ್ರೆ ಬೇಜಾರು ಆಗುತ್ತೆ, ನಾನು ಕೂಡ ಮನುಷ್ಯ ತಾನೇ: ಜೆಡಿಎಸ್ ಶಾಸಕ

ರಾಜೀನಾಮೆ ಸಂಬಂಧ ಎಂಬಿ ಪಾಟೀಲ್ ಮಧ್ಯಾಹ್ನ ಸ್ಪೀಕರ್ ರಮೇಶ್ ಕುಮಾರ್ ಅವರ ಬಳಿ ಭೇಟಿಗೆ ಸಮಯ ಕೇಳಿದ್ದಾರೆ ಎಂದು ತಿಳಿದು ಬಂದಿದೆ. ಪಕ್ಷಕ್ಕಾಗಿ ಸಮುದಾಯವನ್ನೇ ಎದುರು ಹಾಕಿಕೊಂಡು ಕೆಲಸ ಮಾಡಿದ್ದಾನೆ. ಈಗ ಸಚಿವ ಸ್ಥಾನ ನೀಡದೇ ದ್ರೋಹ ಮಾಡಲಾಗಿದೆ ಎಂದು ತಮ್ಮ ಆಪ್ತರ ಜೊತೆ ಬೇಸರವನ್ನು ಪಾಟೀಲ್ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯಾವ ಬಾಲ್ ಬಂದ್ರೂ ಬ್ಯಾಟ್ ಬೀಸುತ್ತೇನೆ- ಯು.ಟಿ ಖಾದರ್

 ಇದನ್ನೂ ಓದಿ: ನನಗೆ ಸ್ಥಾನ ಕೊಡದಿರುವುದು ಕಾಂಗ್ರೆಸ್ಸಿಗೆ ಅತೀ ದೊಡ್ಡ ನಷ್ಟವಾಗಲಿದೆ: ಬಿ.ಸಿ. ಪಾಟೀಲ್ ಅಸಮಾಧಾನ

Share This Article
Leave a Comment

Leave a Reply

Your email address will not be published. Required fields are marked *