ನಿಖಿಲ್ ಅಭಿಮನ್ಯುವಿನ ಪಾತ್ರಕ್ಕೆ ಜೈಕಾರ ಹೇಳಿದ ಅಭಿಮಾನಿ

Public TV
2 Min Read
Nikhil Kurukshetra 13 1

ಬೆಂಗಳೂರು: ಶನಿವಾರ ಜೆಡಿಎಸ್ ಧಳಪತಿ ಹೆಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿತ್ತು. ಕುರುಕ್ಷೇತ್ರ ಚಿತ್ರತಂಡ ಜೆಡಿಎಸ್ ಕುಡಿ ನಿಖಿಲ್ ಕುಮಾರ್ ಅಭಿನಯದ ಅಭಿಮನ್ಯು ಪಾತ್ರದ ಪರಿಚಯವನ್ನು ಮಾಡಿಕೊಟ್ಟಿತ್ತು.

ಅರ್ಜುನ್ ಮತ್ತು ಸುಭದ್ರೆಯ ಮಗನಾದ ಅಭಿಮನ್ಯು ಯುದ್ಧಕ್ಕೆ ತೆರಳುವ ದೃಶ್ಯದೊಂದಿಗೆ ಆರಂಭವಾಗುವ ಟೀಸರ್ ನಲ್ಲಿ ಯುದ್ಧದ ಸನ್ನಿವೇಶ ಮತ್ತು ಚಕ್ರವ್ಯೂಹದ ರೂಪುರೇಷಗಳ ಒಂದು ಝಲಕ್ ತೋರಿಸಲಾಗಿದೆ. ಅಭಿಮನ್ಯು ಮಹಾಭಾರತದಲ್ಲಿ ಶೌರ್ಯದ ಪ್ರತೀಕವಾಗಿ ನಿಲ್ಲುತ್ತಾನೆ. ಚಕ್ರವ್ಯೂಹ ಬೇಧಿಸುವ ನಿಖಿಲ್(ಅಭಿಮನ್ಯು) ಯುದ್ಧದ ರಣತಂತ್ರಗಳ ಬಗ್ಗೆ ಟೀಸರ್ ಹೇಳುತ್ತಿದೆ. ಆದರೆ ಅಭಿಮನ್ಯು ಹಿಂದಿರುಗಿ ಬರುವ ರಣತಂತ್ರಗಳು ತಿಳಿಯದೇ ಏಕಾಂಗಿಯಾಗಿ ಹೋರಾಡಿ ವೀರಮರಣ ಹೊಂದುತ್ತಾನೆ.

ಯಾವ ಇಂಡಸ್ಟ್ರಿಗೂ ಕಡಿಮೆ ಇಲ್ಲದಂತೆ ಸಿನಿಮಾ ಅದ್ಧೂರಿ ಸೆಟ್ ಗಳಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಚಿತ್ರದ ಮತ್ತೊಂದು ವಿಶೇಷ ಅಂದರೆ ಸ್ಯಾಂಡಲ್‍ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಇದಾಗಿದ್ದು, ಭಾರೀ ಕುತೂಹಲವನ್ನು ಹುಟ್ಟು ಹಾಕಿದೆ. ಈ ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಆ್ಯಕ್ಷನ್-ಕಿಂಗ್ ಅರ್ಜುನ್ ಸರ್ಜಾ, ಡೈಲಾಗ್ ಕಿಂಗ್ ಸಾಯಿಕುಮಾರ್, ಶಶಿಕುಮಾರ್, ಆರ್ಮುಗಂ ಖ್ಯಾತಿಯ ರವಿಶಂಕರ್, ಶ್ರೀನಿವಾಸ್ ಮೂರ್ತಿ ಹಾಗೂ ಪ್ರಣಯ ರಾಜ ಶ್ರೀನಾಥ್ ಕಾಣಿಸಿಕೊಳ್ಳಲಿದ್ದಾರೆ. ಭಾರತಿ ವಿಷ್ಣುವರ್ಧನ್, ಹರಿಪ್ರಿಯಾ, ಮೇಘನಾ ರಾಜ್, ಪವಿತ್ರಾ ಲೋಕೇಶ್ ಕೂಡ ಈ `ಕುರುಕ್ಷೇತ್ರ’ ಚಿತ್ರದಲ್ಲಿ ಕಾಣಿಸಲಿದ್ದಾರೆ.

ಟೀಸರ್ ನಲ್ಲಿ ಅತ್ಯಂತ ಆಕ್ರಮಣಕಾರಿ ಶೈಲಿನಲ್ಲಿ ನಿಖಿಲ್ ಕಂಗೊಳಿಸಿದ್ದಾರೆ. ಮುನಿರತ್ನ ಅವರ ಕನಸಿನ ಸಿನಿಮಾ ಕುರುಕ್ಷೇತ್ರ ಬರೋಬ್ಬರಿ 50 ರಿಂದ 60 ಕೋಟಿ ರೂ. ವೆಚ್ಚದಲ್ಲಿ ವೃಷಭಾದ್ರಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಕುರುಕ್ಷೇತ್ರ ಚಿತ್ರವನ್ನು ನಾಗಣ್ಣ ನಿರ್ದೇಶಿಸುತ್ತಿದ್ದಾರೆ. ನೂತನ ತಂತ್ರಜ್ಞಾನದಲ್ಲಿ ಬಾಹುಬಲಿ ಚಿತ್ರಕ್ಕಾಗಿ ದುಡಿದ ತಂತ್ರಜ್ಞಾನಿಗಳ ಕೈಚಳಕದಲ್ಲಿ ಕನ್ನಡದ ಕುರುಕ್ಷೇತ್ರ ಮೂಡಿಬರಲಿದೆ.

ಕುರುಕ್ಷೇತ್ರ ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದಿಲ್ಲ ಒಂದು ಕಾರಣಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡುತ್ತಿದೆ. ಕನ್ನಡ ಚಿತ್ರರಂಗದ ಬಿಗ್ ಬಜೆಟ್ ಸಿನಿಮಾ ಇದಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯಲಿದೆ ಎಂದು ಸಿನಿ ಪಂಡಿತರು ಈಗಾಗಲೇ ಲೆಕ್ಕ ಹಾಕಿದ್ದಾರೆ. ನಿಖಿಲ್ ಟೀಸರ್ ಶನಿವಾರ ರಿಲೀಸ್ ಆಗಿದ್ದು, ಇದೂವರೆಗೂ ಬರೋಬ್ಬರಿ 2.9 ಲಕ್ಷಕ್ಕೂ ಅಧಿಕ ವ್ಯೂವ್ ಗಳನ್ನು ಪಡೆದುಕೊಂಡಿದೆ.

https://www.youtube.com/watch?v=gWVZRqgAwDo

Nikhil Kurukshetra 3 Nikhil Kurukshetra 4

Nikhil Kurukshetra 5

Nikhil Kurukshetra 6

Nikhil Kurukshetra 7

Nikhil Kurukshetra 8

Nikhil Kurukshetra 9

Nikhil Kurukshetra 10

Nikhil Kurukshetra 11

Nikhil Kurukshetra 12

 

Nikhil Kurukshetra 14

Nikhil Kurukshetra 15

Nikhil Kurukshetra 16

Nikhil Kurukshetra 17

Nikhil Kurukshetra 18

Nikhil Kurukshetra 19

Nikhil Kurukshetra 20

Nikhil Kurukshetra 21

Nikhil Kurukshetra 22

Nikhil Kurukshetra 23

Nikhil Kurukshetra 24

Nikhil Kurukshetra 25

Nikhil Kurukshetra 26

Nikhil Kurukshetra 27

Nikhil Kurukshetra 1

Share This Article
Leave a Comment

Leave a Reply

Your email address will not be published. Required fields are marked *