ರಾಂಚಿ: ಇಬ್ಬರು ಸಹೋದರರು ಸೇರಿ ತಮ್ಮ ಸ್ವಂತ ಪತ್ನಿಯರನ್ನೇ ಕೊಲೆ ಮಾಡಿರುವ ಘಟನೆ ಜಾರ್ಖಂಡ್ನ ಗುಮ್ಲಾ ಜಿಲ್ಲೆಯಲ್ಲಿ ಘಟನೆ ನಡೆದಿದೆ.
ಕೊಲೆ ಮಾಡಿದ ನಂತರ ಶವಗಳನ್ನ ಆಂಬ್ಯುಲೆನ್ಸ್ನಲ್ಲಿ ತೆಗೆದುಕೊಂಡು ಹೋಗಿ ಕಾಡಿನಲ್ಲಿ ಹೂತು ಹಾಕಿದ್ದಾರೆ. ಸದ್ಯ ಪೊಲೀಸರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ.
ಆಂಬ್ಯುಲೆನ್ಸ್ ಡ್ರೈವರ್ ಶಿವಶಂಕರ್ ಸಾಹು ಮತ್ತು ಆತನ ತಮ್ಮ ನವೀನ್ ಸಾಹು ಈ ಕೃತ್ಯ ಎಸಗಿದ್ದಾರೆ. ಸೋಮವಾರ ತಮ್ಮ ಪತ್ನಿಯರಾದ ಮಿನಿ ಪ್ರಿಯಾ (28) ಮತ್ತು ರಾಧಿಕಾ ಕುಮಾರಿ (20) ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ನಂತರ ಯಾರಿಗೂ ಅನುಮಾನ ಬರಬಾರದು ಅಂತ ಶವಗಳನ್ನ ಆಂಬ್ಯುಲೆನ್ಸ್ನಲ್ಲಿ ಹಾಕಿಕೊಂಡು ಪಕ್ಕದ ಸಿಮ್ಡೆಗಾ ಜಿಲ್ಲೆಯ ಕಾಡಿಗೆ ಕೊಂಡೊಯ್ದು ಸಮಾಧಿ ಮಾಡಿದ್ದಾರೆ.
ಇಬ್ಬರು ಪತ್ನಿಯರ ನಡುವೆ ತುಂಬಾ ದಿನಗಳಿಂದ ಜಗಳ ನಡೀತಿತ್ತು. ಇದರಿಂದ ಅಣ್ಣ-ತಮ್ಮ ಇಬ್ಬರೂ ಸಿಟ್ಟಾಗಿದ್ದರ ಅಂತ ಪೊಲೀಸರು ತಿಳಿಸಿದ್ದಾರೆ. ಆದರೆ, ಕೊಲೆ ನಡೆಯೋದಕ್ಕಿಂತ ಎರಡು ದಿನ ಮುಂಚೆಯಷ್ಟೇ ಇಬ್ಬರೂ ಮಹಿಳೆಯರು ಜಗಳ ಮರೆತು ರಾಜಿ ಆಗಿದ್ದರು.ಇದನ್ನೂ ಓದಿ: ದರ್ಶನ್ ಬೆನ್ನುನೋವು ಚಿಕಿತ್ಸೆಗೆ ಕೋರ್ಟ್ ಅಸ್ತು – ಇಂದೇ ಆಸ್ಪತ್ರೆಗೆ ಶಿಫ್ಟ್?
ಕೊಲೆ ಮಾಡಿದ ಮರುದಿನ ಆರೋಪಿಗಳೇ ಪೊಲೀಸ್ ಸ್ಟೇಷನ್ಗೆ ಹೋಗಿ ನಾಟಕ ಆಡಿದ್ದರು. ನಮ್ಮ ಹೆಂಡತಿಯರು ನಮಗೆ ಹೇಳದೆ ಮನೆ ಬಿಟ್ಟು ಹೋಗಿದ್ದಾರೆ ಅಂತ ದೂರು ಕೊಟ್ಟಿದ್ದರು. ಆದ್ರೆ ಪೊಲೀಸರಿಗೆ ಅನುಮಾನ ಬಂದು ವಿಚಾರಣೆ ನಡೆಸಿದಾಗ, ಆರೋಪಿಗಳು ಸತ್ಯ ಬಾಯ್ಬಿಟ್ಟಿದ್ದಾರೆ.
ಆರೋಪಿಗಳು ಕೊಟ್ಟ ಮಾಹಿತಿ ಮೇರೆಗೆ ಪೊಲೀಸರು ಕಾಡಿಗೆ ಹೋಗಿ, ಹೂತು ಹಾಕಿದ್ದ ಎರಡೂ ಶವಗಳನ್ನ ಹೊರತೆಗೆದು ಪೋಸ್ಟ್ ಮಾರ್ಟಮ್ಗೆ ಕಳುಹಿಸಿದ್ದಾರೆ. ಕೊಲೆಗೆ ಬಳಸಿದ್ದ ಕೊಡಲಿ ಮತ್ತು ಶವ ಸಾಗಿಸಿದ್ದ ಆಂಬ್ಯುಲೆನ್ಸ್ ಅನ್ನೂ ಸೀಜ್ ಮಾಡಲಾಗಿದೆ.ಇದನ್ನೂ ಓದಿ: KRS ಡ್ಯಾಂನಲ್ಲಿ ದಿನೇ ದಿನೆ ಕುಸಿಯುತ್ತಿದೆ ನೀರಿನ ಮಟ್ಟ – ಬೇಸಿಗೆಯಲ್ಲಿ ಜಲಕ್ಷಾಮದ ಆತಂಕ!
