– ಜೆಎಫ್ಇ ಇಂಜಿನಿಯರಿಂಗ್ ಕಾರ್ಪೊರೇಷನ್ ಪ್ರತಿನಿಧಿಗಳೊಂದಿಗೆ ಸಭೆ
ಬೆಂಗಳೂರು: ಸಿಎಂ ಡಿ. ಕೆ. ಶಿವಕುಮಾರ್ (DK Shivakumar) ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಎಂ. ಬಿ. ಪಾಟೀಲ್ (MB Patil) ಅವರೊಂದಿಗೆ ಜಪಾನ್ನಲ್ಲಿ(Japan) ಜೆಎಫ್ಇ ಇಂಜಿನಿಯರಿಂಗ್ ಕಾರ್ಪೊರೇಷನ್ ವ್ಯವಸ್ಥಾಪಕ ನಿರ್ದೇಶಕರಾದ ಕೀಚಿ ನಾಗಯಾ ಮತ್ತು ಕಂಪನಿಯ ಹಿರಿಯ ಪ್ರತಿನಿಧಿಗಳನ್ನು ಭೇಟಿ ಮಾಡಿದರು.
ತ್ಯಾಜ್ಯದಿಂದ ಇಂಧನ ಉತ್ಪಾದನೆ, ನಗರ ಘನತ್ಯಾಜ್ಯ ನಿರ್ವಹಣೆ ಮತ್ತು ನಗರ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಹಯೋಗದ ಅವಕಾಶಗಳನ್ನು ಅನ್ವೇಷಿಸುವ ಕುರಿತು ಈ ಸಂದರ್ಭದಲ್ಲಿ ಚರ್ಚಿಸಲಾಯಿತು.
ಜಪಾನ್ ಮತ್ತು ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ನಗರ ಘನತ್ಯಾಜ್ಯವನ್ನು ಇಂಧನವನ್ನಾಗಿ ಪರಿವರ್ತಿಸುವಲ್ಲಿ ಜೆಎಫ್ಇ ಇಂಜಿನಿಯರಿಂಗ್ ಹೊಂದಿರುವ ಅನುಭವದ ಕುರಿತು ಚರ್ಚೆ ನಡೆಯಿತು. ಲ್ಯಾಂಡ್ ಫಿಲ್ ಪ್ರದೇಶಗಳಿಗೆ ಸೇರುವ ತ್ಯಾಜ್ಯದ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವುದರ ಜೊತೆಗೆ, ಸುಮಾರು 15 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯವಿರುವ ತ್ಯಾಜ್ಯದಿಂದ ಇಂಧನ ತಯಾರಿಸುವ ಘಟಕಗಳನ್ನು ಅಭಿವೃದ್ಧಿಪಡಿಸುವ ತನ್ನ ಪರಿಣತಿಯನ್ನು ಕಂಪನಿಯು ಹಂಚಿಕೊಂಡಿತು.
Met Mr. Keiichi Nagaya, Managing Director of JFE Engineering Corporation, and his team in Japan, along with Minister Shri M. B. Patil, to explore opportunities for collaboration in waste management and urban infrastructure.
JFE Engineering brings considerable experience in converting municipal solid waste into energy through advanced waste-to-energy facilities. We discussed how its technology and expertise, including facilities capable of generating around 15 MW of power while reducing the burden on landfills, could help Karnataka strengthen its urban waste-management systems.
Our focus is to explore solutions that integrate waste processing, energy recovery and long-term operations, not just in Bengaluru but also in other major cities across Karnataka. We also discussed the importance of partnering with capable local organisations to combine Japanese technology and engineering expertise with local strengths.
We look forward to taking these discussions forward and exploring how we can bring more efficient, sustainable and scalable waste-management solutions to our cities.
— DK Shivakumar (@DKShivakumar) November 25, 2026
ತ್ಯಾಜ್ಯ ಸಂಸ್ಕರಣೆ, ಇಂಧನ ಉತ್ಪಾದನೆ ಮತ್ತು ದೀರ್ಘಕಾಲೀನ ಕಾರ್ಯಾಚರಣೆಗಳನ್ನು ಸಂಯೋಜಿಸುವ ಮೂಲಕ, ಕರ್ನಾಟಕದ ನಗರ ತ್ಯಾಜ್ಯ ನಿರ್ವಹಣಾ ಅಗತ್ಯಗಳಿಗೆ ತಕ್ಕಂತೆ ಜೆಎಫ್ಇ ಸಂಸ್ಥೆಯ ತಂತ್ರಜ್ಞಾನ ಮತ್ತು ಕಾರ್ಯನಿರ್ವಹಣಾ ಮಾದರಿಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆಗಳ ಕುರಿತು ನಿಯೋಗವು ಪರಿಶೀಲಿಸಿತು. ಆಯಾ ನಗರಗಳ ತ್ಯಾಜ್ಯದ ಸ್ವರೂಪ, ಸಂಗ್ರಹಣಾ ವ್ಯವಸ್ಥೆ, ಪ್ರಮಾಣ ಮತ್ತು ಮೂಲಸೌಕರ್ಯ ಅಗತ್ಯಗಳಿಗೆ ಅನುಗುಣವಾಗಿ ವಿಶೇಷ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಕುರಿತೂ ಚರ್ಚಿಸಲಾಯಿತು. ಇದನ್ನೂ ಓದಿ: ಸರ್ಕಾರದಿಂದ ಎರಡನೇ ಕಂತಿನ 2,500 ರೂ. ಬರ ಪರಿಹಾರ ಬಿಡುಗಡೆ
