ಚಿಕ್ಕಮಗಳೂರು: ಹಾಸನದ (Hassan) ಬೇಲೂರು ಭಾಗದಿಂದ ಚಿಕ್ಕಮಗಳೂರಿನ ಮೂಡಿಗೆರೆ ಹಾಗೂ ಭದ್ರಾ ಅಭಯಾರಣ್ಯ ಭಾಗಕ್ಕೆ ಕಾಡಾನೆಗಳನ್ನು (Elephant) ಅಟ್ಟಿರುವುದಕ್ಕೆ ಸ್ಥಳೀಯ ಶಾಸಕರ ವಿರೋಧ ಮುಂದುವರಿದಿದೆ. ಇದೇ ವಿಚಾಕ್ಕೆ ಸಂಬಂಧಿಸಿದಂತೆ ಮೂವರು ಸ್ಥಳೀಯ ಶಾಸಕರು ಸ್ಪೀಕರ್ ಭೇಟಿಗೆ ಬಂದಿದ್ದು, ರಾಜೀನಾಮೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.
ಚಿಕ್ಕಮಗಳೂರು ಕಾಂಗ್ರೆಸ್ (Congress) ಶಾಸಕ ತಮ್ಮಯ್ಯ, ಮೂಡಿಗೆರೆ ಶಾಸಕಿ ನಯನ ಮೋಟಮ್ಮ (Nayana Motamma) ಹಾಗೂ ಶೃಂಗೇರಿ ಶಾಸಕ ರಾಜೇಗೌಡ ಅವರು ಸ್ಪೀಕರ್ ಜಿ.ಎಸ್ ಪಾಟೀಲ್ ಅವರನ್ನು ಭೇಟಿಗೆ ಬಂದಿದ್ದಾರೆ. ಈ ಮೂವರು ಶಾಸಕರು ಆನೆಗಳ ಸಮಸ್ಯೆಯಿಂದಾಗಿ ರಾಜೀನಾಮೆಗೆ ಮುಂದಾಗಿದ್ದರು. ಸಿಎಂ ಡಿ.ಕೆ ಶಿವಕುಮಾರ್ ಅವರ ಮನವೊಲಿಕೆ ನಂತರ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದರು. ಈಗ ಮೂವರು ಶಾಸಕರು ಸ್ಪೀಕರ್ ಕಚೇರಿಗೆ ಆಗಮಿಸಿದ್ದು, ಆನೆ ಸ್ಥಳಾಂತರದ ವಿಚಾರ ಹಾಗೂ ರಾಜೀನಾಮೆ ಸಂಬಂಧ ಚರ್ಚೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಯನಾ ಮೋಟಮ್ಮ ಅಕ್ರೋಶ ಅರ್ಥ ಆಗುತ್ತೆ, ಆದ್ರೆ ರಾಜೀನಾಮೆ ಪರಿಹಾರ ಅಲ್ಲ: ಪೊನ್ನಣ್ಣ
ಈ ಬಗ್ಗೆ ಮಾತನಾಡಿರುವ ಶಾಸಕಿ ನಯನ ಮೊಟಮ್ಮ ಅವರು, ಮುಖ್ಯಮಂತ್ರಿಯವರು ನಮ್ಮ ಜೊತೆ ಮಾತನಾಡಿದ್ದಾರೆ. ನನ್ನ ಜೊತೆ ಮೆಸೆಜ್ ಕೂಡ ಮಾಡಿದ್ದಾರೆ. ನನ್ನ ಆಕ್ಷೇಪ, ಬೇಜಾರನ್ನು ನಾನು ವ್ಯಕ್ತಪಡಿಸಿದ್ದೇನೆ. ಇದರಿಂದ ಕಾರ್ಯಾಚರಣೆ ನಿಲ್ಲಿಸಿದ್ದಾರೆ.
5 ಜನ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಮ್ಮ ಕ್ಷೇತ್ರದ ಜನರಿಗೆ ತೊಂದರೆ ತಂದಿದ್ದಾರೆ. ಶಾಸಕರನ್ನು ಭೇಟಿ ಮಾಡಿ ಮಾತುಕತೆ ಮಾಡಬೇಕಾಗಿತ್ತು. ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯಬೇಕಾಗಿತ್ತು. ಎಲ್ಲರ ಅಭಿಪ್ರಾಯವನ್ನೂ ಪಡೆಯಬೇಕಾಗಿತ್ತು. ನಮ್ಮ ಕ್ಷೇತ್ರದ ಜನರಿಗೆ ನಾನು ಉತ್ತರ ಕೊಡಬೇಕಾಗುತ್ತೆ. ಇದನ್ನೆಲ್ಲೆ ನಾನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದ್ದಾರೆ.
ಈ ಬಾರಿ ಶಿವಮೊಗ್ಗದಲ್ಲಿ ಅಂಬಾರಿ ಮೆರವಣಿಗೆ ವೇಳೆ ಅವಘಡ ನಡೆದಿತ್ತು. ಆಗ ಸಾಕಿದ್ದ ಆನೆಯನ್ನು ಹಿಡಿಯಲು ಎಷ್ಟು ಕಷ್ಟ ಆಗಿತ್ತು ಅಂತ ನಾವು ಕೂಡ ನೋಡಿದ್ದೇವೆ. ಈಗ ಕಾಡಾನೆಗಳಿಂದ ಯಾವುದಾದರೂ ಅನಾಹುತ ಆದರೆ ಯಾರು ಹೊಣೆ?
ನನಗೆ ಯಾವುದೇ ಪಬ್ಲಿಸಿಟಿ ಅವಶ್ಯಕತೆ ಇಲ್ಲ. ನನ್ನ ಮೂಡಿಗೇರೆ ಕ್ಷೇತ್ರದ ಜನರಿಗೆ ತೊಂದರೆ ಆದರೆ ಯಾರು ಜವಾಬ್ದಾರಿ ಹೊರುತ್ತಾರೆ. ಆನೆ ತುಳಿತದಿಂದ ಆಪಾಯ ಆದರೆ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಈಗ ಕಾಫಿ ಕೊಯ್ಲು ಸೀಜನ್ ಈ ಆನೆಗಳಿಂದ ಸಮಸ್ಯೆ ಆದರೆ ಯಾರು ಹೊಣೆ? ಬೇಳೆ ನಾಶವಾದರೆ ಆ ಬೇಳೆ ಯಾರು ಪರಿಹಾರ ಕೊಡುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಮ್ಮ ಮಾತಿಗೆ ಬೆಲೆ ಇಲ್ಲ ಅಂದ್ರೆ ನಾವ್ಯಾಕೆ ಶಾಸಕರಾಗಿರಬೇಕು: ನಯನಾ ಮೋಟಮ್ಮ ಬೇಸರ
