– ಜನರು ನೀರನ್ನು ಬಿಸಿ ಮಾಡಿ ಕುಡಿಯುವುದು ಒಳ್ಳೆಯದು: ಆರೋಗ್ಯ ಸಚಿವ ಖಾದರ್ ಸಲಹೆ
ಬೆಂಗಳೂರು: ಕರ್ನಾಟಕದಲ್ಲಿ ಬಿಸ್ಲೆರಿ ನೀರು (Bisleri Water) ಸೇಫ್ ಎಂದು ಪರೀಕ್ಷಾ ವರದಿ ದೃಢಪಡಿಸಿದೆ. ಈ ಕುರಿತು ಆರೋಗ್ಯ ಸಚಿವ ಯು.ಟಿ.ಖಾದರ್ ಮಾಹಿತಿ ಹಂಚಿಕೊಂಡಿದ್ದಾರೆ.
ರಾಜ್ಯ ಘಟಕದಲ್ಲಿ ತಯಾರಾದ ಬಿಸ್ಲೇರಿ ವಾಟರ್ ಸೇಫ್ ಇದೆ. ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಸುರಕ್ಷಿತ ಅಂತ ವರದಿ ತಿಳಿಸಿದೆ. ಆದರೂ, ನೀರನ್ನ ಬಿಸಿ ಮಾಡಿ ಕುಡಿಯುವುದು ಒಳ್ಳೆಯದು ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ಬಾಟಲಿ ನೀರಿನ ಗುಣಮಟ್ಟದ ಮೇಲೆ FSSAI ಹದ್ದಿನ ಕಣ್ಣು – ಲೇಬಲ್ಗಳ ಬಗ್ಗೆಯೂ ತನಿಖೆ
ನಮ್ಮ ರಾಜ್ಯದಲ್ಲಿ ಟೆಸ್ಟ್ ಮಾಡಿದ್ದೇವೆ. ಸೇಫ್ ಅಂತ ಇದೆ. ಬೇರೆ ರಾಜ್ಯದಲ್ಲಿ ಹೇಗಿದೆ ಅಂತ ಗೊತ್ತಿಲ್ಲ. 122 ನೀರು ತಯಾರಕ ಘಟಕಗಳನ್ನ ಪರಿಶೀಲನೆ ಮಾಡಿದ್ದೇವೆ. ತಯಾರಿಕಾ ಘಟಕ ಶುಚಿತ್ವ ಇಲ್ಲ ಎನ್ನುವ ಕಾರಣಕ್ಕೆ ನೋಟಿಸ್ ಕೊಟ್ಟಿದ್ದೇವೆ. ಏನೇ ಆದರೂ ಜನ ಬಿಸಿ ನೀರು ಕಾಯಿಸಿಕೊಂಡು ಕುಡಿಯಿರಿ ಎಂದು ಸಚಿವರು ಸಲಹೆ ನೀಡಿದ್ದಾರೆ.
ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿ ಅಸುರಕ್ಷಿತ ಎಂದು ಬಿಸ್ಲೆರಿ ಇಂಟರ್ನ್ಯಾಷನಲ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೆಲದಿನಗಳ ಹಿಂದಷ್ಟೇ ಎಫ್ಎಸ್ಎಸ್ಎಐ ಅನುಮತಿ ನೀಡಿತ್ತು.
ಬಿಸ್ಲೆರಿ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾದರಿಯಲ್ಲಿ ಬ್ರೊಮೇಟ್ ಮಟ್ಟ ನಿಗದಿಗಿಂತ ಹೆಚ್ಚಿರುವುದು ಕಂಡುಬಂದಿದೆ. ಹೀಗಾಗಿ, ಎಫ್ಎಸ್ಎಸ್ ಕಾಯ್ದೆಯಡಿ ಅಸುರಕ್ಷಿತ ಎಂದು ಘೋಷಿಸಿರುವುದಾಗಿ ಎಫ್ಎಸ್ಎಸ್ಎಐ ತಿಳಿಸಿತ್ತು. ಇದನ್ನೂ ಓದಿ: ನೀರು ಕುಡಿಯಲು ಯೋಗ್ಯ: ಬಿಸ್ಲೆರಿ ಕಂಪನಿ ಸ್ಪಷ್ಟನೆ
