ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ನಗರ (Shidlaghatta City) ಹೊರವಲಯದ ಗೌಡನ ಕೆರೆಯಲ್ಲಿ ಅವಧಿ ಮೀರಿದ ಮೂಟೆ ಮೂಟೆ ಔಷಧಿಗಳು (Medicines) ಪತ್ತೆಯಾಗಿವೆ.
ಕೆರೆಯಲ್ಲಿ ಮೂಟೆಗಟ್ಟಲೆ ಅವಧಿ ಮೀರಿದ ಔಷಧಿಗಳನ್ನ ಕಿಡಿ ಕಿಡಿಗೇಡಿಗಳು ಸುರಿದು ಹೋಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆರೋಗ್ಯ ಇಲಾಖೆ (Health Department) ಅಧಿಕಾರಿಗಳು, ಕೆರೆಯಲ್ಲಿ ಸುರಿದಿದ್ದ ಅವಧಿ ಮೀರಿದ ಔಷಧಿಗಳನ್ನು ಸಂಪೂರ್ಣವಾಗಿ ಸಂಗ್ರಹಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಅಲ್ಲದೇ ಔಷಧಿಗಳ ಬ್ಯಾಚ್ ನಂಬರ್ ಆಧರಿಸಿ ಮೂಲ ಪತ್ತೆಗೆ ಮುಂದಾಗಿದ್ದಾರೆ. ಯಾವ ಔಷಧಿ ಅಂಗಡಿ ಅಥವಾ ಸಂಸ್ಥೆಯಿಂದ ಔಷಧಿಗಳು ಬಂದಿವೆ ಎಂಬ ಬಗ್ಗೆ ತನಿಖೆ ಶುರುಮಾಡಿದ್ದಾರೆ.
ಕೆರೆಯಲ್ಲಿ ಔಷಧಿಗಳನ್ನು ಸುರಿದವರು ಯಾರು ಎಂಬುದನ್ನು ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದಾರೆ. ಇನ್ನು ಜಲಮೂಲಕ್ಕೆ ವಿಷ ಸುರಿದವರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯಿಸಿದ್ದಾರೆ.


