ಬೆಂಗಳೂರು: ರಾಜ್ಯದ ಕಾಡಿನಂಚಿನ ಗ್ರಾಮಗಳಲ್ಲಿನ ಆನೆ-ಮಾನವ ಸಂಘರ್ಷಕ್ಕೆ ಆನೆಧಾಮದಿಂದ (Elephant Camp) ಸಾಧ್ಯ ಅಂತ ಸಚಿವ ಈಶ್ವರ್ ಖಂಡ್ರೆ (Eshwar Khandre) ತಿಳಿಸಿದ್ದಾರೆ.
ಶಾಸಕರ ರಾಜೀನಾಮೆ ವಿಚಾರಕ್ಕೆ ವಿಕಾಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ತಾವು ಈ ಹಿಂದೆ ಅರಣ್ಯ ಸಚಿವನಾಗಿದ್ದಾಗ ಈ ಯೋಜನೆ ರೂಪಿಸಿದ್ದೆ, ಆದರೆ ಕೇಂದ್ರ ಸರ್ಕಾರ ಹುಲಿ ಸಂರಕ್ಷಿತ ಧಾಮದಲ್ಲಿ ಇದಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ತಿರಸ್ಕರಿಸಿತ್ತು ಎಂದರು. ಇದನ್ನೂ ಓದಿ: ಜಪಾನ್ನಿಂದಲೇ ವೀಡಿಯೊ ಕರೆ ಮೂಲಕ ಆಶಾ ಕಾರ್ಯಕರ್ತೆಯರೊಂದಿಗೆ ಸಿಎಂ ಚರ್ಚೆ
ತೋಟಗಳಲ್ಲೇ ಹುಟ್ಟಿ, ತೋಟದಲ್ಲೇ ಬೆಳೆಯುವ ಆನೆಗಳಿಂದ ಸಮಸ್ಯೆ ಹೆಚ್ಚಾಗಿದೆ. ಇಂತಹ ಆನೆಗಳನ್ನು ಆನೆಧಾಮದಲ್ಲಿ ಬಿಟ್ಟರೆ ಸಮಸ್ಯೆ ನಿಯಂತ್ರಿಸಬಹುದು ಎಂದರು. ಇದನ್ನೂ ಓದಿ: Punjab Elections 2027 | ಬಿಜೆಪಿ–ಅಕಾಲಿ ದಳ ಮೈತ್ರಿ ಘೋಷಣೆ – ಮುಖ್ಯಮಂತ್ರಿ ಸ್ಥಾನ SADಗೆ ಎಂದ ಅಮಿತ್ ಶಾ!
ರಾಮಲಿಂಗಾರೆಡ್ಡಿ ಅವರು ಹಿರಿಯ ಮತ್ತು ಅನುಭವಿ ಸಚಿವರಾಗಿದ್ದು, ಸಿಎಂ ಅವರು ಬರಲಿದ್ದಾರೆ. ಅವರು ಈಗಾಗಲೇ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಅವರು ಈ ಸಮಸ್ಯೆಗೆ ಪರಿಹಾರ ಒದಗಿಸುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮೀಸಲು ಅಧಿಸೂಚನೆ ಪ್ರಕಟ: ಜನವರಿಯಲ್ಲಿ ತಾ.ಪಂ, ಜಿ.ಪಂ ಚುನಾವಣೆ: ಈಶ್ವರ ಖಂಡ್ರೆ
