ಕೋಲಾರ: ರೌಡಿ ಶೀಟರ್ ಮೇಲೆ ಗುಂಡಿನ ದಾಳಿ (Firing) ನಡೆಸಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಮಾಸ್ತಿ ಬಳಿ ನಡೆದಿದೆ.
ರೌಡಿ ಶೀಟರ್ (Rowdy Sheeter) ಅಣಕರಹಳ್ಳಿ ಪ್ರತಾಪ್ ಮೇಲೆ ಗುಂಡಿನ ದಾಳಿಗೆ ಯತ್ನ ನಡೆದಿದೆ. ಆದ್ರೆ ಗುಂಡು ಚಾಲಕ, ಪ್ರತಾಪ್ ಅಣ್ಣ ನರೇಂದ್ರಗೆ ತಗುಲಿ ಗಾಯಗೊಂಡಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಮಾಸ್ತಿ ಪೊಲೀಸರು (Masti Police) ಮುಂದಿನ ತನಿಖೆ ಕೈಗೊಂಡಿದ್ದಾರೆ.
ಘಟನೆಗೆ ಕಾರಣ ಏನು?
2 ವರ್ಷಗಳ ಹಿಂದೆ ಬೇರಿಕೆ ಬಳಿಯ ಶ್ಯಾನಮಂಗಲ ಮೂಲದ ನಾಗೇಶ್ ಭಾಮೈದನ ಕೊಲೆಯಾಗಿತ್ತು. ಈ ಹಿನ್ನೆಲೆ ಹಳೆ ದ್ವೇಷಕ್ಕೆ ಫೈರಿಂಗ್ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಘಟನೆಯಲ್ಲಿ ರೌಡಿ ಶೀಟರ್ ಪ್ರತಾಪ್ ಹಾಗೂ ಅಣ್ಣ ನರೇಂದ್ರ ಗಾಯಗೊಂಡಿದ್ದು, ಹೊಸಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳ ಪರಿಶೀಲನೆ ಬಳಿಕ ಮಾಸ್ತಿ ಪೊಲೀಸರು, ಗುಂಡಿನ ದಾಳಿಗೆ ಒಳಗಾದ ಇನ್ನೋವಾ ಕಾರನ್ನ ವಶಕ್ಕೆ ವಶಕ್ಕೆ ಪಡೆದಿದ್ದಾರೆ.


