ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜ್ಯದ ಹೆಸರನ್ನು ‘ಪಶ್ಚಿಮ ಬಂಗಾ’ (Paschim Banga) ಎಂದು ಬದಲಾಯಿಸಲು ಸರ್ಕಾರ ಮುಂದಾಗಿದೆ.
ಸೋಮವಾರ ಕೋಲ್ಕತ್ತಾದ ಸಚಿವಾಲಯ ನಬನ್ನಾದಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಈ ಮಹತ್ವದ ಪ್ರಸ್ತಾಪಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಡಿಸೆಂಬರ್ 4 ರಿಂದ 14ರವರೆಗೆ ನಡೆಯಲಿರುವ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ, ಡಿಸೆಂಬರ್ 9ರಂದು ಈ ಹೆಸರು ಬದಲಾವಣೆ ಪ್ರಸ್ತಾವನೆಯನ್ನು ಅಧಿಕೃತವಾಗಿ ಮಂಡಿಸಲಾಗುವುದು ಎಂದು ಸಿಎಂ ಅಧಿಕಾರಿ ತಿಳಿಸಿದ್ದಾರೆ. ಒಂದು ವೇಳೆ ಈ ಪ್ರಕ್ರಿಯೆಗೆ ಅಂತಿಮ ಅನುಮೋದನೆ ಸಿಕ್ಕರೆ, ಇಂಗ್ಲಿಷ್ನಲ್ಲಿಯೂ ‘ವೆಸ್ಟ್ ಬೆಂಗಾಲ್’ ಬದಲಿಗೆ ‘ಪಶ್ಚಿಮ ಬಂಗಾ’ ಎಂದೇ ಬಳಕೆಯಾಗಲಿದೆ.
ಹೆಸರು ಬದಲಾವಣೆ ಹಿಂದಿನ ಕಾರಣ
ಇಂಗ್ಲಿಷ್ನಲ್ಲಿ ‘West Bengal’ ಎಂದು ಇರುವುದರಿಂದ ‘W’ ಅಕ್ಷರದಿಂದ ಶುರುವಾಗುತ್ತದೆ. ಇದರಿಂದಾಗಿ ಕೇಂದ್ರ ಸರ್ಕಾರದ ಸಭೆಗಳು ಮತ್ತು ಅಧಿಕೃತ ಪಟ್ಟಿಗಳಲ್ಲಿ ಪಶ್ಚಿಮ ಬಂಗಾಳದ ಹೆಸರು ಯಾವಾಗಲೂ ಕೊನೆಯಲ್ಲಿ ಬರುತ್ತಿತ್ತು. ಈಗ ‘P’ ಅಕ್ಷರದಿಂದ ಶುರುವಾಗುವ ‘ಪಶ್ಚಿಮ ಬಂಗಾ’ ಎಂದು ಬದಲಾಯಿಸಿದರೆ ಆಡಳಿತಾತ್ಮಕವಾಗಿ ಅನುಕೂಲವಾಗಲಿದೆ ಅನ್ನೋದು ಸರ್ಕಾರದ ಲೆಕ್ಕಾಚಾರ.ಇದನ್ನೂ ಓದಿ: ಲಿಬಿಯಾ ಬಂದರಿನಲ್ಲಿ ಉಕ್ರೇನ್ ಡ್ರೋನ್ ದಾಳಿ: ರಷ್ಯಾದ ಯುದ್ಧನೌಕೆ, ಸರಕು ಹಡಗು ಮುಳುಗಡೆ
ಈ ಹಿಂದೆ ಮಮತಾ ಬ್ಯಾನರ್ಜಿ ಸಿಎಂ ಆಗಿದ್ದಾಗ ರಾಜ್ಯಕ್ಕೆ ‘ಬಾಂಗ್ಲಾ’ ಎಂದು ಹೆಸರಿಡಲು ವಿಧಾನಸಭೆಯಲ್ಲಿ ನಿರ್ಣಯ ಪಾಸ್ ಮಾಡಿ ಕೇಂದ್ರಕ್ಕೆ ಕಳುಹಿಸಿದ್ದರು. ಆದರೆ, ಕೇಂದ್ರ ಗೃಹ ಸಚಿವಾಲಯ ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ.
ಇನ್ನು ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನಮ್ಮ ಮೈಸೂರು ರಾಜ್ಯ ‘ಕರ್ನಾಟಕ’ ಆದಂತೆ, ಮದ್ರಾಸ್ ‘ತಮಿಳುನಾಡು’ ಹಾಗೂ ಒರಿಸ್ಸಾ ‘ಒಡಿಶಾ’ ಆಗಿ ಬದಲಾದಂತೆ, ಈಗ ಪಶ್ಚಿಮ ಬಂಗಾಳ ಕೂಡ ‘ಪಶ್ಚಿಮ ಬಂಗಾ’ ಆಗುವತ್ತ ಹೆಜ್ಜೆ ಇಟ್ಟಿದೆ. ಆದರೆ ಇದಕ್ಕೆ ವಿಧಾನಸಭೆ ಒಪ್ಪಿಗೆಯ ನಂತರ ಕೇಂದ್ರ ಸರ್ಕಾರದ ಅನುಮೋದನೆಯೂ ಅಗತ್ಯವಿದೆ.ಇದನ್ನೂ ಓದಿ: ಕಾಪು ಬೀಚ್ನಲ್ಲಿ ಸಮುದ್ರ ಪಾಲಾಗಿದ್ದ ಇಬ್ಬರು ಹುಡುಗರ ಮೃತದೇಹ ಪತ್ತೆ
