ಕೀವ್/ ಮಾಸ್ಕೋ: ಲಿಬಿಯಾದ ಬಂದರಿನಲ್ಲಿ(Libya Port) ನಿಂತಿದ್ದ ರಷ್ಯಾದ ಯುದ್ಧನೌಕೆ(Russian warship) ಮತ್ತು ಸರಕು ಹಡಗಿನ ಮೇಲೆ ಉಕ್ರೇನ್ ಭಾನುವಾರ ಡ್ರೋನ್ ದಾಳಿ (Drone Attack) ನಡೆಸಿ ಮುಳುಗಿಸಿದೆ. ಈ ದಾಳಿಯನ್ನು ತಾವೇ ಮಾಡಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelensky) ಸೋಮವಾರ ದೃಢಪಡಿಸಿದ್ದಾರೆ.
ಭಾನುವಾರ ಬೆಳಿಗ್ಗೆ ಪೂರ್ವ ಲಿಬಿಯಾದ ಬೆಂಘಾಜಿ ನೌಕಾನೆಲೆಯಲ್ಲಿ(Benghazi Naval Base) ಈ ಘಟನೆ ನಡೆದಿದೆ. ರಷ್ಯಾಕ್ಕೆ ವಾಪಸ್ ಹೋಗುವ ಮುನ್ನ ಇಂಧನ ಮತ್ತು ಅಗತ್ಯ ವಸ್ತುಗಳನ್ನು ತುಂಬಿಸಿಕೊಳ್ಳಲು ನಿಂತಿದ್ದ ಯುದ್ಧನೌಕೆಯಲ್ಲಿ ದೊಡ್ಡ ಸ್ಫೋಟ ಸಂಭವಿಸಿದೆ ಎಂದು ಪೂರ್ವ ಲಿಬಿಯಾದ ಸರ್ಕಾರ ತಿಳಿಸಿತ್ತು. ಸೋಮವಾರ ಈ ಬಗ್ಗೆ ಮಾತನಾಡಿದ ಅಧ್ಯಕ್ಷ ಝೆಲೆನ್ಸ್ಕಿ, “ರಷ್ಯಾದ ಯುದ್ಧಕ್ಕೆ ಪ್ರತಿಯಾಗಿ ಉಕ್ರೇನ್ ನಡೆಸಿದ ಅತ್ಯುತ್ತಮ ಕಾರ್ಯಾಚರಣೆ ಇದಾಗಿದೆ” ಎಂದು ಹೇಳಿದ್ದಾರೆ.
ರಷ್ಯಾದ ಅತ್ಯಂತ ಹೊಸ ಯುದ್ಧನೌಕೆಯಾದ ಮೆರ್ಕ್ಯುರಿ (Merkury) ನೌಕೆಯನ್ನು ಮುಳುಗಿಸಲು ಏಳು ನೌಕಾ ಡ್ರೋನ್ಗಳನ್ನು ಬಳಸಲಾಗಿತ್ತು ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ. ಈ ದಾಳಿಯಲ್ಲಿ ರಷ್ಯಾದ Ka-27 ಯುದ್ಧ ಹೆಲಿಕಾಪ್ಟರ್ ಕೂಡ ಸುಟ್ಟುಹೋಗಿದೆ. ಇದರ ಜೊತೆಗೆ, ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ರಷ್ಯಾದ ಎಂವಿ ಅಂಗಾರ (MV ANGARA) ಎಂಬ ಕಂಟೇನರ್ ಹಡಗಿಗೂ ದಾಳಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಬಂದರಿನ ಬಳಿ ದಾಳಿಗೊಳಗಾದ ವಾಣಿಜ್ಯ ಹಡಗಿನಲ್ಲಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಲಿಬಿಯಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಆದರೆ ಉಕ್ರೇನ್ ಹೇಳುತ್ತಿರುವ ಹಡಗು ಮತ್ತು ಗಾಯಾಳುಗಳಿರುವ ಹಡಗು ಒಂದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ಭಾರತದ ವೈವಿಧ್ಯತೆಯಿಂದ ಆಕರ್ಷಿತನಾಗಿದ್ದೇನೆ.. ಅದೊಂದು ಅದ್ಭುತ: ಪುಟಿನ್ ಬಣ್ಣನೆ
Last night’s attack on the Russian Navy’s Steregushchiy-class corvette Merkury at the Port of Benghazi in Eastern Libya, which had been conducting escort operations for Russian military-linked cargo vessels in the Mediterranean, was carried out by the Security Service of Ukraine (SBU) utilizing several unmanned surface drones launched from an unidentified location, sources familiar with the operation have told Defender Media.
According to sources, over a dozen drones were launched at the Russian corvette during the operation, including several decoys meant to overwhelm any Libyan or Russian defensive assets, with only one of two explosive-laden surface drones able to successfully strike the ship, setting munitions and fuel onboard ablaze and resulting in its total destruction while still docked at the Port of Benghazi.
— OSINTdefender (@sentdefender) November 22, 2026
ಬಾಲ್ಟಿಕ್ ಸಮುದ್ರದಲ್ಲೂ ದಾಳಿ:
ಲಿಬಿಯಾ ದಾಳಿಗೂ ಒಂದು ದಿನ ಮುನ್ನ, ಅಂದರೆ ಶನಿವಾರ ಬೆಳಿಗ್ಗೆ ಫಿನ್ಲ್ಯಾಂಡ್ ಕೊಲ್ಲಿಯಲ್ಲೂ ರಷ್ಯಾದ ಸ್ಪಾರ್ಟಾ-2 (Sparta II) ಎಂಬ ಸರಕು ಹಡಗಿನ ಮೇಲೆ ಡ್ರೋನ್ ದಾಳಿ ನಡೆದಿತ್ತು. ರಷ್ಯಾದ ಕಲಿನಿನ್ಗ್ರಾಡ್ಗೆ ಹೋಗುತ್ತಿದ್ದ ಈ ಹಡಗಿನ ಮೇಲಿನ ದಾಳಿಯ ಹಿಂದೆ ಉಕ್ರೇನ್ ಇರಬಹುದು ಎಂದು ಫಿನ್ಲ್ಯಾಂಡ್ ಸೇನೆ ಹೇಳಿದೆ. ಆದರೆ ಉಕ್ರೇನ್ ಈ ಬಗ್ಗೆ ಏನನ್ನೂ ಹೇಳಿಲ್ಲ.
BREAKING 🚨
Zelensky confirmed: Ukraine sank the Russian corvette “Mercury” off the coast of Libya
A Ka-27 military helicopter was also destroyed along with the warship.
According to the Ukrainian president, seven naval drones were used in the attack.
Zelensky said the second target was the Russian cargo ship MV Angara, which was used to transport weapons. The vessel was hit.
The Merkuriy regularly escorted Russian naval convoys and protected the MV Angara. The drones were transported to the operation area aboard a mothership.
Putin is clearly going through a rough patch.
— NEXTA (@nexta_tv) November 23, 2026
ರಷ್ಯಾ ಆಕ್ರೋಶ
ಈ ದಾಳಿಗಳ ಬಗ್ಗೆ ರಷ್ಯಾ ಅಧ್ಯಕ್ಷರ ಕಚೇರಿಯ ವಕ್ತಾರ ಡಿಮಿಟ್ರಿ ಪೆಸ್ಕೋವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬಾಲ್ಟಿಕ್ ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ಹೆಚ್ಚುತ್ತಿರುವುದು ಅಪಾಯಕಾರಿ ಬೆಳವಣಿಗೆ. ಇದು ಈ ಭಾಗದಲ್ಲಿ ಉದ್ವಿಗ್ನತೆಯನ್ನು ಹೆಚ್ಚು ಮಾಡುತ್ತಿದೆ” ಎಂದು ಅವರು ಹೇಳಿದ್ದಾರೆ. ಆದರೆ, ಲಿಬಿಯಾ ಕರಾವಳಿಯಲ್ಲಿ ನಡೆದ ದಾಳಿಯ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದು, ರಕ್ಷಣಾ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಲಿದೆ ಎಂದಿದ್ದಾರೆ.
ಮತ್ತೊಂದೆಡೆ, ಲಿಬಿಯಾದಲ್ಲಿರುವ ವಿಶ್ವಸಂಸ್ಥೆಯ ಕಚೇರಿ ಈ ದಾಳಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. “ವಿದೇಶಿ ಜಗಳಗಳಿಗೆ ಲಿಬಿಯಾ ಯುದ್ಧಭೂಮಿಯಾಗಬಾರದು. ಈ ಘಟನೆಯ ಬಗ್ಗೆ ತಕ್ಷಣವೇ ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಯಬೇಕು” ಎಂದು ವಿಶ್ವಸಂಸ್ಥೆ ಒತ್ತಾಯಿಸಿದೆ. ಬೆಂಘಾಜಿ ಬಂದರಿನಲ್ಲಿ ಹಡಗಿಗೆ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಬರುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳ ವಿಡಿಯೋ ಮತ್ತು ಉಪಗ್ರಹ ಚಿತ್ರಗಳಲ್ಲಿ ಕಂಡುಬಂದಿವೆ.
