– ಸೇತುವೆ ಮೇಲೆ ಗದ್ದಲ ಸೃಷ್ಟಿಸಿದ ತೇಜಸ್ವಿ ಬೆಂಬಲಿಗರು
ಪಾಟ್ನಾ: ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ನಿತೀಶ್ ಸೇತು (Nitish Setu) ಉದ್ಘಾಟನೆಗೆ ತೇಜಸ್ವಿ ಯಾದವ್ ಅವರನ್ನು ಆಹ್ವಾನಿಸಲಿಲ್ಲ ಎಂದು ಆಕ್ರೋಶಗೊಂಡ ಆರ್ಜೆಡಿ ಬೆಂಬಲಿಗರು ಪೋಸ್ಟರ್ಗಳನ್ನು ಹರಿದುಹಾಕಿ ಗದ್ದಲ ಸೃಷ್ಟಿಸಿರುವ ಘಟನೆ ನಡೆದಿದೆ.
ಆರ್ಜೆಡಿ ನಾಯಕ ತೇಜಸ್ವಿ ಯಾದವ್ (Tejashwi Yadav) ಅವರನ್ನು ಸೇತುವೆ ಉದ್ಘಾಟನೆ ಸಮಾರಂಭಕ್ಕೆ ಆಹ್ವಾನಿಸಿಲ್ಲ ಎಂದು ಪ್ರಧಾನಿ ಮೋದಿಯವರ ಪೋಸ್ಟರ್ಗಳನ್ನು ಹರಿದು ಹಾಕಿದ್ದಾರೆ. ಆಡಳಿತ ಪಕ್ಷದ ಧ್ವಜಗಳನ್ನು ತುಳಿದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ‘ನಿತೀಶ್ ಸೇತು’ ಉದ್ಘಾಟಿಸಿದ ಪ್ರಧಾನಿ ಮೋದಿ; ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ
ಪ್ರಧಾನಿ ಮೋದಿ ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮತ್ತು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರೊಂದಿಗೆ 4,280 ಕೋಟಿ ರೂ. ವೆಚ್ಚದ ಕೇಬಲ್-ಸ್ಟೇಡ್ ಸೇತುವೆಯನ್ನು ಶನಿವಾರ ಉದ್ಘಾಟಿಸಿದರು. ಅದಾದ ಸ್ವಲ್ಪ ಸಮಯದ ನಂತರ ರಾಘೋಪುರದಲ್ಲಿ ಘರ್ಷಣೆ ಭುಗಿಲೆದ್ದಿದೆ.
नीतीश जी के नाम से तेजस्वी की नफरत देखिए, हुड़दंग के लिए गुंडे तक भेज दिए!
शहजादे की सियासत अब भी विरोध और हंगामे के पुराने ढर्रे पर ही अटकी है। https://t.co/oDu5gIshQM
— BJP Bihar (@BJP4Bihar) November 22, 2026
ರಾಜ್ಯ ವಿಧಾನಸಭೆಯಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸುವ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರು ರಾಜ್ಯ ಸರ್ಕಾರದಲ್ಲಿದ್ದಾಗ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿದ್ದರು. ಅವರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ಬಂದಿಲ್ಲ ಎಂದು ಸರ್ಕಾರದ ವಿರುದ್ಧ ರಾಘೋಪುರದ ನಿವಾಸಿಗಳು ಕಿಡಿಕಾರಿದ್ದಾರೆ.
ಆರ್ಜೆಡಿ ಧ್ವಜಗಳನ್ನು ಹಿಡಿದ ಕಾರ್ಯಕರ್ತರು ತೇಜಸ್ವಿ ಯಾದವ್ ಮತ್ತು ಆರ್ಜೆಡಿ ಮುಖ್ಯಸ್ಥ ಲಾಲು ಯಾದವ್ ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗುತ್ತಾ ಸೇತುವೆಯಾದ್ಯಂತ ಮೆರವಣಿಗೆ ನಡೆಸಿದ ದೃಶ್ಯದ ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಪ್ರಧಾನಿ ಮತ್ತು ಮುಖ್ಯಮಂತ್ರಿಯ ಚಿತ್ರವಿರುವ ಬ್ಯಾನರ್ಗಳನ್ನು ಹರಿದುಹಾಕಿ ಗದ್ದಲ ಸೃಷ್ಟಿ ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಹೊಸದಾಗಿ ಸುಸಜ್ಜಿತವಾದ ರಸ್ತೆಯುದ್ದಕ್ಕೂ ಇದ್ದ ಬಿಜೆಪಿ ಧ್ವಜಗಳನ್ನು ಬೀಳಿಸಿ ತುಳಿದಿದ್ದಾರೆ.
ಆರು ಪಥಗಳ ಕಚ್ಚಿ ದರ್ಗಾ-ಬಿದುಪುರ ಸೇತುವೆಗೆ ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಹೆಸರಿಡುವ ನಿರ್ಧಾರಕ್ಕೆ ತೇಜಸ್ವಿ ಯಾದವ್ ವಿರೋಧ ವ್ಯಕ್ತಪಡಿಸಿದ್ದರು. ಜೀವಂತ ರಾಜಕಾರಣಿಯ ಹೆಸರನ್ನು ಸಾರ್ವಜನಿಕ ರಚನೆಗೆ ಇಡುವುದರಿಂದ ನಿತೀಶ್ ಕುಮಾರ್ ರಾಜಕೀಯವಾಗಿ ಮುಗಿದಿದ್ದಾರೆ ಎಂದು ಸೂಚಿಸುತ್ತದೆ ಎಂದು ಟಾಂಗ್ ಕೊಟ್ಟಿದ್ದರು.
