ಬಿಗ್ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಆಟ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಟಾಸ್ಕ್ಗಳ ಮೂಲಕ ಸ್ಪರ್ಧಿಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸುತ್ತಿದ್ದರೆ, ಮತ್ತೊಂದೆಡೆ ಕಿಚ್ಚನ ಪಂಚಾಯ್ತಿಯಲ್ಲಿ ಸ್ಪರ್ಧಿಗಳ ಆಟಕ್ಕೆ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ವಾರ ಕಿರಣ್ ಶಾಸ್ತ್ರಿ ಅವರ ಆಟಕ್ಕೆ ಕಿಚ್ಚ ಸುದೀಪ್ (Kichcha Sudeep) ಭರ್ಜರಿ ಮೆಚ್ಚುಗೆ ಸೂಚಿಸಿದ್ದು, ಬಂಪರ್ ಗಿಫ್ಟನ್ನೂ ಕೊಟ್ಟಿದ್ದಾರೆ.
ಶಾಸ್ತ್ರಿಗೆ ಸಿಕ್ತು ಬಂಪರ್ ಬಹುಮಾನ!
ಬಿಗ್ ಬಾಸ್ – ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/BolIoRclV6
— Colors Kannada (@ColorsKannada) November 21, 2026
ಮಹಾರಾಣಿ ಪಟ್ಟಕ್ಕಾಗಿ ಹೋರಾಡುತ್ತಿದ್ದ ಮೂವರು ಸ್ಪರ್ಧಿಗಳನ್ನ ಜೈಲಿಗೆ ಕಳುಹಿಸುವ ಮೂಲಕ ಕಿರಣ್ ಶಾಸ್ತ್ರಿ (Kiran Shastri) ಬಿಗ್ಬಾಸ್ ಮನೆಯಲ್ಲಿ ಗಮನ ಸೆಳೆದಿದ್ದರು. ಈ ನಿರ್ಧಾರದ ಹಿಂದೆ ಶಾಸ್ತ್ರಿ ತೋರಿದ ಧೈರ್ಯ ಮತ್ತು ಆಟದ ವೈಖರಿಯನ್ನ ಕಿಚ್ಚ ಸುದೀಪ್ ಕೊಂಡಾಡಿದ್ದಾರೆ. ಇದೀಗ ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಈ ಕ್ಷಣಗಳು ಬಹಿರಂಗವಾಗಿವೆ.
ಕಿಚ್ಚನ ಪಂಚಾಯ್ತಿಯಲ್ಲಿ ಮಾತನಾಡುವ ಸುದೀಪ್, ಎಲ್ಲಿಂದಲೋ ಒಂದು ಧ್ವನಿ ಎದ್ದೇಳುತ್ತೆ. ಕಿರಿಯ ವ್ಯಕ್ತಿ, ಆದ್ರೆ ತಿಳಿವಳಿಕೆಯಲ್ಲಿ ಎಲ್ಲರಿಗಿಂತ ಜೋರಿದ್ದಾರೆ. ಸಿಂಗಲ್ ಸಿಂಹವಾಗಿ ನಿಂತುಬಿಟ್ಟರು. ಅಷ್ಟೇ ಅಲ್ಲದೆ, ಬಿಗ್ಬಾಸ್ ನಿರ್ಧಾರವನ್ನೇ ಬದಲಿಸುವಂತೆ ಮಾಡಿ ತಮ್ಮ ನಿಲುವಿನಲ್ಲಿ ಗಟ್ಟಿಯಾಗಿ ನಿಂತಿದ್ದಕ್ಕೆ ಶಾಸ್ತ್ರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಬಳಿಕ ವಿಶೇಷ ಉಡುಗೊರೆಯಾಗಿ ಹೊಸ ಜಾಕೆಟ್ ನೀಡಿದ್ದು, ಅದನ್ನ ಸೌಂದರ್ಯ ಅವರಿಗೆ ಹಾಕುವಂತೆ ಹೇಳ್ತಾರೆ.
ಇದೇ ವೇಳೆ, ಶಾಸ್ತ್ರಿ ಅವರೇ, ನಿಮ್ಮ ಆಟ ನೀವು ಆಡ್ತಿರೋದಕ್ಕೆ ಈ ವಾರದ ಇನ್ನೊಂದು ಕಿಚ್ಚನ ಚಪ್ಪಾಳೆ, ಮೆಚ್ಚುಗೆ ಇರಲಿʼ ಎಂದು ಹೇಳುವ ಮೂಲಕ ಕಿರಣ್ ಶಾಸ್ತ್ರಿಗೆ ಮತ್ತೊಮ್ಮೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಮಹರಾಣಿ ಪಟ್ಟಕ್ಕಾಗಿ ಹೋರಾಡುತ್ತಿದ್ದ ಮೂವರು ಕಳಪೆಯಾಗಿ ಜೈಲುಪಾಲಾಗಿದ್ರು. ಸೌಂದರ್ಯ, ಗಾನವಿ ಮತ್ತು ಆಸಿಯಾ ಈ ವಾರದ ಆರಂಭದಲ್ಲಿ ಮಹಾರಾಣಿ ಪಟ್ಟಕ್ಕಾಗಿ ಹೋರಾಡುತ್ತಿದ್ದರು. ಆದರೆ ಇದೀಗ ಮನೆಯವರ ಆಯ್ಕೆಯಂತೆ ಮೂವರು ಜೈಲಿನ ಕಡೆ ಮುಖಮಾಡಿದ್ದರು. ಕಳಪೆ ಆಯ್ಕೆಯಲ್ಲಿ ಕಿರಣ್ ಶಾಸ್ತ್ರಿ ಅವರು ನಾನು ʻʻಆಸಿಯಾ, ಗಾನವಿ ಹಾಗೂ ಸೌಂದರ್ಯ ಶೆಟ್ಟಿ ಮೂವರನ್ನು ಜೈಲಿಗೆ ಕಳಿಸಲು ಇಚ್ಛಿಸುತ್ತೇನೆ ಎಂದು ಹೇಳುತ್ತಾರೆ. ಆಗ ಮನೆಯವರೆಲ್ಲರ ಒಪ್ಪಿಗೆಯೊಂದಿಗೆ ಸದಸ್ಯರೆಲ್ಲರು ಸೇರಿ ಮೂವರನ್ನು ಜೈಲಿಗೆ ಕಳಿಸುತ್ತಾರೆ. ಬಿಗ್ಬಾಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೂವರು ಸದಸ್ಯರು ಜೈಲಿಗೆ ಹೋಗಿದ್ರು.
ಒಟ್ಟಿನಲ್ಲಿ ಬಿಗ್ಬಾಸ್ ಮನೆಯಲ್ಲಿ ತಮ್ಮದೇ ಆಟದ ಮೂಲಕ ಗಮನ ಸೆಳೆಯುತ್ತಿರುವ ಕಿರಣ್ ಶಾಸ್ತ್ರಿಗೆ ಈ ವಾರ ಕಿಚ್ಚನಿಂದ ಚಪ್ಪಾಳೆ ಮಾತ್ರವಲ್ಲ, ಬಂಪರ್ ಗಿಫ್ಟ್ ಕೂಡ ಸಿಕ್ಕಿದೆ. ಈ ಪ್ರೋಮೋ ಇದೀಗ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

