ಬೀದರ್: ವಿವಾದಿತ ಬಸವ ಮಂಟಪ (Basava Mantapa) ಗ್ರಂಥವನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರ ತೀರ್ಮಾನ ಮಾಡಿದ್ದು, ಬೀದರ್ನಲ್ಲಿ (Bidar) ಸರ್ಕಾರದ ಈ ನಿರ್ಧಾರವನ್ನು ಬಸವ ಭಕ್ತರು ಸ್ವಾಗತ ಮಾಡಿದ್ದಾರೆ.
ಬೀದರ್ ನಗರದ ಬಸವೇಶ್ವರ ವೃತ್ತದಲ್ಲಿ ಪರಸ್ಪರ ಸಿಹಿ ಹಂಚಿಕೊಂಡು ಬಸವ ಭಕ್ತರು ಸಂಭ್ರಮಾಚರಣೆ ಮಾಡಿದ್ದಾರೆ. ಸರ್ಕಾರ ಮತ್ತು ಬಸವಣ್ಣನ ಪರ ಬಸವ ಭಕ್ತರು ಜೈಘೋಷ ಕೂಗಿದ್ದಾರೆ. ಇದನ್ನೂ ಓದಿ: ಬಾಗಲಕೋಟೆ | ಕೌಟುಂಬಿಕ ಕಲಹಕ್ಕೆ ಬೇಸತ್ತು ಪತಿ-ಪತ್ನಿ ನೇಣಿಗೆ ಶರಣು
ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳುತ್ತಿರುವುದು ಸ್ವಾಗತ ಅರ್ಹವಾಗಿದ್ದು, ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇವೆ. ಇದನ್ನು ಖಂಡಿಸಿ, ಸರ್ಕಾರಕ್ಕೆ ಪತ್ರ ನೀಡಿದ್ದ ಸಚಿವ ಎಂ.ಬಿ ಪಾಟೀಲ್, ಈಶ್ವರ್ ಖಂಡ್ರೆ ಸೇರಿದಂತೆ ಎಲ್ಲ ಸಚಿವರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದಿದ್ದಾರೆ.
ಇದು ಇಷ್ಟಕ್ಕೆ ಸೀಮಿತವಾಗಬಾರದು ಅಮೆರಿಕಾಕ್ಕೆ ಓಡಿ ಹೋಗಿರುವ ರವಿ ಹಂಜ್ ಅವರನ್ನು ಬಂಧಿಸಬೇಕು. ಈಗಾಗಲೇ ನಾವು ದೂರು ಕೊಟ್ಟಿದ್ದು, ಎಫ್ಐಆರ್ ದಾಖಲು ಮಾಡಿ ವಿಮರ್ಶಕ ರವಿ ಹಂಜ್ ಅವರನ್ನು ಬಂಧಿಸಿ ಜೈಲಿಗೆ ಕಳಿಸಬೇಕು ಎಂದು ಬಸವ ಭಕ್ತರು ಎಚ್ಚರಿಕೆ ನೀಡಿದ್ದಾರೆ.
ಪುಸ್ತಕ ರಿಲೀಸ್ ಆದ ಬಳಿಕ ಬಸವ ಭಕ್ತರು ಬಸವಣ್ಣನವರ ಅವಹೇಳನದ ಬಗ್ಗೆ ರವಿ ಹಂಜ್ ವಿರುದ್ಧ ಸಿಡಿದೆದ್ದಿದ್ದರು. ಇದರ ಬೆನ್ನಲ್ಲೇ ಸಚಿವ ಸಂಪುಟದಲ್ಲಿ ಚರ್ಚಿಸಿ, ಬಸವ ಮಂಟಪ ಕೃತಿ ಮುಟ್ಟುಗೋಲು ಹಾಕಿಕೊಳ್ಳಲು ತೀರ್ಮಾನ ಮಾಡಲಾಗಿದೆ. ಇದನ್ನೂ ಓದಿ :ಸಮಂತಾ ಮಡಿಲಿಗೆ ʻದೇವʼರ ಆಗಮನ – ನಿಡಿಮೋರು ದಂಪತಿಗೆ ಗಂಡು ಮಗು ಜನನ
