ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (, UP Elections) ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ನೇರ ಸವಾಲು ಹಾಕಿದ್ದಾರೆ. ಧೈರ್ಯವಿದ್ದರೆ ಅಯೋಧ್ಯೆ ಕ್ಷೇತ್ರದಿಂದ ನನ್ನ ವಿರುದ್ಧ ಸ್ಪರ್ಧಿಸಿ, ಒಂದು ವೇಳೆ ನೀವು ಅಯೋಧ್ಯೆಯಿಂದ ನಾಮಪತ್ರ ಸಲ್ಲಿಸಿದರೆ, ನಾನೂ ಅದೇ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತೇನೆ ಎಂದು ಸವಾಲ್ ಹಾಕಿದ್ದಾರೆ.
#WATCH | Gorakhpur, Uttar Pradesh: Responding to Samajwadi Party (SP) chief Akhilesh Yadav’s challenge to contest elections from Ayodhya, Chief Minister Yogi Adityanath says, “If you file your nomination from there, I will also file my nomination. Let there be a direct, face-to-face contest. He lacks the courage to fight head-on because a weak person always strikes from behind. These are the people who trampled Uttar Pradesh on the strength of the mafia, sabotaged youth employment, and endangered the safety of our daughters and traders.”
— ANI (@ANI) November 19, 2026
ಗೋರಖ್ಪುರ ಜಿಲ್ಲೆಯ ಕ್ಯಾಂಪಿಯರ್ಗಂಜ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ, ಅಖಿಲೇಶ್ ಯಾದವ್ (Akhilesh Yadav) ಅವರ ಸವಾಲಿಗೆ ತಿರುಗೇಟು ನೀಡಿದ ಸಿಎಂ, ನೀವು ಅಲ್ಲಿಂದ ನಾಮಪತ್ರ ಸಲ್ಲಿಸಿದರೆ, ನಾನೂ ನನ್ನ ನಾಮಪತ್ರ ಸಲ್ಲಿಸುತ್ತೇನೆ. ಧೈರ್ಯವಿದ್ದರೆ ನೇರವಾಗಿ ಮುಖಾಮುಖಿ ಚುನಾವಣಾ ಕಣಕ್ಕೆ ಬರಲಿ ಎಂದಿದ್ದಾರೆ.
ಅಖಿಲೇಶ್ ಯಾದವ್ ಅವರಿಗೆ ನೇರ ಚುನಾವಣಾ ಸ್ಪರ್ಧೆ ಎದುರಿಸುವ ಧೈರ್ಯವಿಲ್ಲ. ದುರ್ಬಲರು ಹಿಂದಿನಿಂದ ದಾಳಿ ಮಾಡುವ ತಂತ್ರವನ್ನು ಮಾತ್ರ ಅವರು ಅನುಸರಿಸುತ್ತಾರೆ ಎಂದು ಕುಟುಕಿದ್ದಾರೆ.
ಸಮಾಜವಾದಿ ಪಕ್ಷದ ನಾಯಕರು ಮಾಫಿಯಾ ಶಕ್ತಿಗಳನ್ನ ಅವಲಂಬಿಸಿದ್ದಾರೆ. ಯುವಕರ ಉದ್ಯೋಗಾವಕಾಶಗಳನ್ನ ಕಸಿದುಕೊಳ್ಳುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಮಹಿಳೆಯರು ಮತ್ತು ವ್ಯಾಪಾರಿಗಳ ಸುರಕ್ಷತೆಯನ್ನೂ ಕಡೆಗಣಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಅಖಿಲೇಶ್ ಯಾದವ್ ರೋಡ್ಶೋ ವೇಳೆ ಬಾಲಕನ ಸಾವು: ಯೋಗಿ ಕೆಂಡ
ಇನ್ನೂ ಬುಧವಾರ ಗೋರಖ್ಪುರದಲ್ಲಿ ಅಖಿಲೇಶ್ ಯಾದವ್ ಅವರ ರೋಡ್ಶೋ ವೇಳೆ 13 ವರ್ಷದ ಬಾಲಕ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಮಾಜವಾದಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಘಟನೆಯನ್ನು ದುರಂತ ಎಂದು ಕರೆದರಲ್ಲದೇ, ಸಮಾಜವಾದಿ ಪಕ್ಷವು ಗೂಂಡಾಗಿರಿ, ಅರಾಜಕತೆ, ಗಲಭೆ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕೇವಲ 13 ವರ್ಷದ ಆ ಮುಗ್ಧ ಬಾಲಕನ ತಪ್ಪಾದರೂ ಏನು? ಪ್ರತಿಷ್ಠಿತ ಶಾಲೆಯಲ್ಲಿ ಓದುತ್ತಿದ್ದ ಬಾಲಕ ತನ್ನ ಕುಟುಂಬದೊಂದಿಗೆ ವಾಸವಾಗಿದ್ದ. ಆದರೆ ಅತ್ಯಂತ ಕ್ರೂರ ರೀತಿಯಲ್ಲಿ ಆತನ ಜೀವ ಹೋಗಿದೆ. ಇಂತಹ ಘಟನೆ ನಡೆದಿದ್ದರೂ ಮಾಫಿಯಾ ಮತ್ತು ಗೂಂಡಾಗಿರಿಯನ್ನು ಬೆಂಬಲಿಸುವವರು ಕನಿಷ್ಠ ಸಂತಾಪವನ್ನೂ ಸೂಚಿಸಿಲ್ಲ ಎಂದು ಟೀಕಿಸಿದ್ದಾರೆ.
ಈ ಚುನಾವಣೆಯಲ್ಲಿ ಬಿಜೆಪಿಗೆ ಸೋಲು: ಅಖಿಲೇಶ್
ಇನ್ನೊಂದೆಡೆ, 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರೀ ಹಿನ್ನಡೆ ಅನುಭವಿಸಲಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಬುಧವಾರ ಭವಿಷ್ಯ ನುಡಿದಿದ್ದಾರೆ. ತಕ್ಷಣವೇ ಚುನಾವಣೆ ನಡೆದರೆ ಗೋರಖ್ಪುರದಲ್ಲಿ ಬಿಜೆಪಿ ‘ಡಬಲ್ ಝೀರೋ’ ಫಲಿತಾಂಶ ಪಡೆಯಲಿದೆ. ಈ ಭಾಗದಲ್ಲಿ ಬಿಜೆಪಿಯ ಪ್ರಾಬಲ್ಯ ಕುಸಿಯುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.

