ಬೆಂಗಳೂರು: ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆ ಸಾಧ್ಯವಿಲ್ಲ ಅಂತ ಪರೋಕ್ಷವಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ. ಗೌರವ ಧನ ಹೆಚ್ಚಳ ಕೇಂದ್ರ ಸರ್ಕಾರ ಮಾಡಬೇಕು ಅಂತ ಕೇಂದ್ರದ ಕಡೆ ಬೊಟ್ಟು ಮಾಡಿದರು.
ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಆಶಾ ಕಾರ್ಯಕರ್ತೆಯರು ನೇರವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುತ್ತಾರೆ. NHM ಅಡಿಯಲ್ಲಿ ಕೇಂದ್ರ ಸರ್ಕಾರ ನೇಮಕ ಮಾಡಿರೋದು. 2014 ರಲ್ಲಿ ನಾನು ಸಚಿವ ಆಗಿದ್ದಾಗ ಕೇಂದ್ರ ಸರ್ಕಾರ ಎಷ್ಟು ಜಾಸ್ತಿ ಮಾಡುತ್ತದೆಯೋ ಅಷ್ಟು ರಾಜ್ಯ ಮಾಡಬೇಕು ಅಂತ ಕಾನೂನು ಮಾಡಿದ್ವಿ. ಕೇಂದ್ರ ಎಷ್ಟು ಜಾಸ್ತಿ ಮಾಡುತ್ತೋ ನಾವು ಅಷ್ಟೇ ಮಾಡಬೇಕು. ಕಾನೂನು ಮಾಡಿದ್ರು ಕೇಂದ್ರ ಸರ್ಕಾರ ಜಾಸ್ತಿ ಅನುದಾನ ಕೊಡಲಿಲ್ಲ. ಆದರೂ ರಾಜ್ಯ ಸರ್ಕಾರ 5 ಸಾವಿರ ಕೊಡ್ತಿದೆ. ಕೇಂದ್ರ ಸರ್ಕಾರ 2 ಸಾವಿರ ಕೊಡ್ತಿದೆ. ಇನ್ಸೆಟೀವ್ 1 ಸಾವಿರ ಸಿಕ್ತಿದೆ ಅಂತ ಕೇಂದ್ರದ ವಿರುದ್ದ ಕಿಡಿಕಾರಿದರು.
ಅವರಿಗೆ ವೇತನ ಹೆಚ್ಚಳ ಮಾಡಬೇಕು. ನಾನು ಹಿಂದೆ ಸಚಿವ ಆಗಿದ್ದಾಗ ಕೇಂದ್ರದ ಸಚಿವರಿಗೆ ಜಾಸ್ತಿ ಮಾಡಲು ಒತ್ತಾಯ ಮಾಡಿದ್ದೆ. ಪ್ರೊತ್ಸಾಹ ಧನ ಜಾಸ್ತಿ ಕೊಡಬೇಕು ಅಂತ ಒತ್ತಾಯ ಮಾಡಿದ್ವಿ. ಅದಕ್ಕೆ ಕೇಂದ್ರ ಒಪ್ಪಿದೆ, ಕೇಂದ್ರದ ಜೊತೆ ನಾವು ಚರ್ಚೆ ಮಾಡ್ತೀವಿ. ರಾಜ್ಯ ಸರ್ಕಾರ, ಸಿಎಂ ಆಶಾ ಕಾರ್ಯಕರ್ತೆಯರ ಜೊತೆ ಇದ್ದಾರೆ. ಕೇಂದ್ರ ಸರ್ಕಾರದ ಜೊತೆ ಮಾತಾಡ್ತೀವಿ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಅವರಿಗೆ ಸಹಕಾರ ಕೊಡ್ತೀವಿ ಎಂದರು.
ಕೇಂದ್ರ ಸರ್ಕಾರ ಹೆಚ್ಚಳ ಮಾಡದ ಹೊರತು ರಾಜ್ಯ ಸರ್ಕಾರ ಜಾಸ್ತಿ ಮಾಡಲ್ಲವಾ ಎಂಬ ಪ್ರಶ್ನೆಗೆ ಇದರ ಬಗ್ಗೆ ಚರ್ಚೆ ಮಾಡ್ತೀವಿ. ಕಡಿಮೆ ಹಣಕ್ಕೆ ಅವರು ದುಡಿಯುತ್ತಿದ್ದಾರೆ. ಅವರಿಗೆ ಜಾಸ್ತಿ ಮಾಡಬೇಕು ಅನ್ನೋದು ನಮ್ಮ ಇಚ್ಚೆ. ನಾನು ಅವರ ಮಂತ್ರಿಯಾಗಿ ಅವರ ಪರ ನಾನು ಮಾತಾಡ್ತೀನಿ ಎಂದರು.
ಇನ್ನೂ ಸರ್ಕಾರದ ಬೊಕ್ಕಸ ಖಾಲಿ ಎಂಬ ವಿಪಕ್ಷಗಳ ಟೀಕೆ ವಿಚಾರಕ್ಕೆ ವಿಪಕ್ಷಗಳ ಬಗ್ಗೆ ನಾನು ಮಾತಾಡಲ್ಲ. ಇವರು ಅಧಿಕಾರದಲ್ಲಿ ಇದ್ದಾಗ ನಯಾ ಪೈಸೆ ಜಾಸ್ತಿ ಮಾಡಿಲ್ಲ. ಕೇಂದ್ರದಲ್ಲಿ ಇವರ ಸರ್ಕಾರ ಇದೆ. ಯಾಕೆ ಇವರು ಹೋಗಿ ಮಾತಾಡಲ್ಲ. ಇವರ ಪರವಾಗಿ. ಶುರು ಮಾಡಿದ್ದು ಕೇಂದ್ರ ಸರ್ಕಾರ. ಕೇಂದ್ರ ಶುರು ಮಾಡಿ ರಾಜ್ಯ ಸರ್ಕಾರ ಕೊಡಿ ಅಂದ್ರೆ ಇವರು ಯಾಕೆ ಅಲ್ಲಿ ಕೂತಿದ್ದಾರೆ. ರಾಜ್ಯ ಸರ್ಕಾರ ಮಾಡೋ ಬಗ್ಗೆ ಚರ್ಚೆ ಮಾಡ್ತೀವಿ ಅಂತ ತಿಳಿಸಿದರು.

