ರಾಯಚೂರು: ಅಂಡರ್-19 ಆಟಗಾರರಿಗಾಗಿ ಭಾರತದ ರಾಷ್ಟ್ರೀಯ ನಾಲ್ಕು ದಿನಗಳ ಕ್ರಿಕೆಟ್ ಪಂದ್ಯಾವಳಿಯಾದ ಬಿಸಿಸಿಐ (BCCI) ಕೂಚ್ ಬೆಹರ್ ಟ್ರೋಫಿ (Cooch Behar Trophy) ಕ್ರಿಕೆಟ್ ಪಂದ್ಯಾವಳಿಗೆ ರಾಯಚೂರಿನ (Raichuru) ಯುವ ಪ್ರತಿಭೆ ಅನಿಕೇತ್ ರೆಡ್ಡಿ ಆಯ್ಕೆಯಾಗಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಡೆಸುವ ಈ ಪಂದ್ಯಾವಳಿಗೆ ರಾಯಚೂರು ಝೋನ್ನಿಂದ ಅನಿಕೇತ್ ರೆಡ್ಡಿ ಪ್ರತಿನಿಧಿಸಿದ್ದು, ಈಗ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಕೊಡಗಿನ ಗಿರಿಜನ ಹಾಡಿಯಲ್ಲಿ ಮೂಲಸೌಕರ್ಯಗಳ ಕೊರತೆ; 50 ಕುಟುಂಬಗಳ ಬದುಕು ಅತಂತ್ರ
ನವೆಂಬರ್ 26 ರಿಂದ 29 ರವರೆಗೆ ಪಂದ್ಯಾವಳಿ ನಡೆಯಲಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಂಡರ್ 19 ರಾಜ್ಯ ತಂಡವನ್ನು ಪ್ರಕಟಿಸಿದ್ದು, ಅನಿಕೇತ್ ರೆಡ್ಡಿ ತಂಡದಲ್ಲಿ ಸ್ಥಾನವನ್ನು ಪಡೆದಿದ್ದಾರೆ. ರಾಜ್ಯ ತಂಡಕ್ಕೆ ಆಯ್ಕೆಯಾಗುವ ಮೂಲಕ ಅನಿಕೇತ್ ರೆಡ್ಡಿ ರಾಯಚೂರು ಜಿಲ್ಲೆಯ ಕ್ರೀಡಾ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದು ಪೋಷಕರು ಹಾಗೂ ತರಬೇತುದಾರರು ಸಂತಸ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಹಲವಾರು ಪಂದ್ಯಾವಳಿಗಳಲ್ಲಿ ಅನಿಕೇತ ರೆಡ್ಡಿ ತನ್ನ ಬ್ಯಾಟಿಂಗ್ ಕೌಶಲ್ಯದಿಂದ ಗಮನ ಸೆಳೆದಿದ್ದಾರೆ. 15 ಜನರ ರಾಜ್ಯ ತಂಡವನ್ನ ಪ್ರಕಟಿಸಲಾಗಿದ್ದು, ರಾಹುಲ್ ದ್ರಾವಿಡ್ ಪುತ್ರ ಅನ್ವಯ ದ್ರಾವಿಡ್ ತಂಡದ ನಾಯಕನಾಗಿ ತಂಡವನ್ನ ಮುನ್ನಡೆಸಲಿದ್ದಾರೆ. ರಾಯಚೂರು ಜಿಲ್ಲೆಯ ಯುವ ಪ್ರತಿಭೆಯಾಗಿ ಹೊರಹೊಮ್ಮಿರುವ ಅನಿಕೇತ್ ರೆಡ್ಡಿಯ ಮುಂದಿನ ಕ್ರಿಕೆಟ್ ಪಯಣ ಯಶಸ್ವಿಯಾಗಲಿ ಎಂದು ಜಿಲ್ಲೆಯ ಕ್ರಿಕೆಟ್ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.ಇದನ್ನೂ ಓದಿ: `ಬಸವ ಮಂಟಪ’ ಕೃತಿ ವಿವಾದ – ಲೇಖಕ ರವಿ ಹಂಜ್, ಪ್ರಕಾಶಕರ ವಿರುದ್ಧ FIR
