ಬೆಂಗಳೂರು: ರಾಜ್ಯದಲ್ಲಿ ಲೇಖಕ ರವಿ ಹಂಜ್ ಅವರ ಬಸವ (Basava Mantapa) ಮಂಟಪ ಕೃತಿ ಸಂಬಂಧಿಸಿದಂತೆ ಆಕ್ರೋಶ ಭುಗಿಲೆದ್ದಿದ್ದು, ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ (High Grounds Police Station) ಲೇಖಕ ರವಿ ಹಂಜ್ ಹಾಗೂ ಪ್ರಕಾಶಕರ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ.
ಬಸವ ಸಮಿತಿ ಅಧ್ಯಕ್ಷ ಅರವಿಂದ್ ಜತ್ತಿ ಅವರು ದೂರು ನೀಡಿದ್ದು, ಬಸವಣ್ಣನರನ್ನ ಕೊಲೆಗಾರ & ಕಳ್ಳ ಎಂಬಂತೆ ಬಿಂಬಿಸಿದ್ದಾರೆ. ಲಿಂಗಾಯತ ಪದ ತಿರುಚಿ ಲಿಂಗಾಹತ ಎಂದು ಹೇಳಿದ್ದಾರೆ. ಜೊತೆಗೆ ಲಿಂಗಾಯತ & ಕೆಲ ಪೂಜ್ಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಈ ಮೂಲಕ ಶಾಂತಿ ಕದಡುವ ಕೆಲಸ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ʻಬಸವ ಮಂಟಪ’ ಕೃತಿ ಬ್ಯಾನ್ – ಲೇಖಕ ರವಿ ಹಂಜ್, ಪ್ರಕಾಶಕರ ವಿರುದ್ಧ ಕಾನೂನು ಕ್ರಮಕ್ಕೆ ನಿರ್ಧಾರ
ದೂರಿನನ್ವಯ ಲೇಖಕ ರವಿ ಹಂಜ್ (Ravi Hunj) ಹಾಗೂ ಪ್ರಕಾಶಕರ ವಿರುದ್ಧ ಸಾರ್ವಜನಿಕ ಶಾಂತಿ ಭಂಗ, ದ್ವೇಷ ಭಾಷಣ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪದ ಮೇಲೆ ಬಿಎನ್ಎಸ್ ಸೆಕ್ಷನ್ 192, 196(1), 353(2), 299ರಡಿ ಎಫ್ಐಆರ್ ದಾಖಲಾಗಿದೆ.
