ನವದೆಹಲಿ: ಹಿರಿಯೂರು ಉಪ ಚುನಾವಣೆ ಟಿಕೆಟ್ ಜೆಡಿಎಸ್ಗೆ (JDS) ನೀಡುವಂತೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು (Amit Shah) ಮನವರಿಗೆ ಮಾಡಿದ್ದಾರೆ.
ಬಿಜೆಪಿ-ಜೆಡಿಎಸ್ ಮಧ್ಯೆ ಚಿತ್ರದುರ್ಗದ (Chitradurga) ಹಿರಿಯೂರು ಉಪ ಚುನಾವಣೆ ಟಿಕೆಟ್ ಫೈಟ್ ಜೋರಾಗಿದೆ. ರಾಜ್ಯ ಬಿಜೆಪಿ ನಾಯಕರು ಹಿರಿಯೂರು ಟಿಕೆಟ್ ನಮ್ಮ ಪಕ್ಷಕ್ಕೇ ಬೇಕು. ಅಲ್ಲಿ ನಮ್ಮ ಪಕ್ಷಕ್ಕೆ ಬೆಂಬಲ ಇದೆ ಅಂತ ವಾದಿಸ್ತಿದ್ದಾರೆ.ಇದನ್ನೂ ಓದಿ: ರಾಜ್ಯದಲ್ಲಿ ಬಸವ ಮಂಟಪ’ ಕೃತಿ ಬ್ಯಾನ್ – ಲೇಖಕ ರವಿ ಹಂಜ್, ಪ್ರಕಾಶಕರ ವಿರುದ್ಧ ಕಾನೂನು ಕ್ರಮಕ್ಕೆ ನಿರ್ಧಾರ
📍ನವದೆಹಲಿ
ರಾಷ್ಟ್ರದ ಗೌರವಾನ್ವಿತ ಗೃಹ ಸಚಿವರಾದ ಶ್ರೀ @AmitShah ಅವರನ್ನು ವಿಶ್ವಾಸಪೂರ್ವಕವಾಗಿ ಭೇಟಿಯಾಗಿ ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸನ್ಮಾನ್ಯರು, ಹಿರಿಯೂರು ವಿಧಾನಸಭೆ ಉಪ ಚುನಾವಣೆ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡರು. ಜತೆಗೆ, ಕರ್ನಾಟಕದಲ್ಲಿ #NDA ಮೈತ್ರಿಕೂಟವನ್ನು ಮತ್ತಷ್ಟು ಬಲಪಡಿಸಿ ಮುಂಬರುವ ಚುನಾವಣೆಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವ ನಿಟ್ಟಿನಲ್ಲಿ ಮತ್ತು ಜನರ ದನಿಯಾಗಿ ಮೈತ್ರಿಕೂಟವು ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಮಾನ್ಯರು ಮಾರ್ಗದರ್ಶನ ನೀಡಿದರು.#NDAKarnataka
@BJP4India @JanataDal_S @BJP4Karnataka
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) November 19, 2026
ಈ ಹೊತ್ತಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಕುಮಾರಸ್ವಾಮಿ ನಿನ್ನೆ (ನ.18) ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿದ್ದಾರೆ. ಎಂಎಲ್ಸಿ ಚುನಾವಣೆಯಲ್ಲಿ ಒಟ್ಟಾಗಿ ಹೋಗಿದ್ದಕ್ಕೆ ನಾವು ಗೆದ್ದಿದ್ದೇವೆ. ಹಿರಿಯೂರಿನಲ್ಲೂ ಒಟ್ಟಿಗೆ ಹೋದ್ರೆ ಗೆಲ್ಲುವ ಸಾಧ್ಯ ಇದೆ ಅಂತ ನಿನ್ನೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಇಂದು (ನ.19) ಮತ್ತೊಮ್ಮೆ ಭೇಟಿಯಾಗಿದ್ದು, ಜೆಡಿಎಸ್ಗೆ ಯಾಕೆ ಟಿಕೆಟ್ ಬೇಕು ಅನ್ನೋ ವಿಚಾರ ವಿವರವಾಗಿ ಚರ್ಚಿಸಿದ್ದಾರೆ. ಕಳೆದ 15 ವರ್ಷಗಳ ಅಂಕಿ ಅಂಶಗಳ ಸಮೇತ ಅಮಿತ್ ಶಾ ಜೊತೆ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ವಿರುದ್ದ ರಾಜ್ಯದಲ್ಲಿ ಜನಾಕ್ರೋಶ ಇದೆ. ಉಪಚುನಾವಣೆಯಲ್ಲಿ ನಾವು ಗೆದ್ದರೆ 2028 ಚುನಾವಣೆಗೆ ದೊಡ್ಡ ಸಂದೇಶ ರವಾನೆಯಾಗಲಿದೆ. ಎನ್ಡಿಎ ಅಡಿ ಸ್ಪರ್ಧೆ ಮಾಡಿದ್ರೆ ದೊಡ್ಡ ಸಂದೇಶ ರವಾನೆ ಆಗಲಿದೆ ಅಂತ ಮನದಟ್ಟು ಮಾಡಿದ್ದಾರೆ. ಈ ಮಧ್ಯೆ, ಅಶೋಕ್ ಮಾತಾಡಿ, ನಮ್ಮ ರಾಷ್ಟ್ರೀಯ ನಾಯಕರು ಸ್ಥಾನ ಜೆಡಿಎಸ್ಗೆ ಬಿಟ್ಟು ಕೊಡಿ ಅಂದ್ರೆ ಬಿಡ್ತೇವೆ ಅಂದಿದ್ದಾರೆ.ಇದನ್ನೂ ಓದಿ: ವಿಶ್ವದ ಪ್ರಭಾವಿ ತ್ರಿಮೂರ್ತಿಗಳು ಮೊದಲ ಬಾರಿಗೆ ಮುಖಾಮುಖಿ – ಅಣ್ವಸ್ತ್ರ ನಿಶಸ್ತ್ರೀಕರಣದ ಬಗ್ಗೆ ಮಾತುಕತೆ
