ಬೀಜಿಂಗ್: ವಿಶ್ವದ ಪ್ರಭಾವಿ, ಮಹಾ ನಾಯಕರು ಎನಿಸಿಕೊಂಡಿರುವ ಅಮೆರಿಕದ (America) ಅಧ್ಯಕ್ಷ ಟ್ರಂಪ್ (Donald Trump), ರಷ್ಯಾ ಅಧ್ಯಕ್ಷ ಪುಟಿನ್ (Putin) ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ (Xi Jinping) ಇದೇ ಮೊದಲ ಬಾರಿಗೆ ಮುಖಾಮುಖಿಯಾಗಿದ್ದಾರೆ.
ಚೀನಾದ ಶೆನ್ಝೆನ್ನಲ್ಲಿ ನಡೆಯುತ್ತಿರುವ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (ಎಪಿಎಸಿ-ಅಪೆಕ್) ಶೃಂಗಸಭೆಯಲ್ಲಿ ಭಾಗಿಯಾಗಿ ಅಣ್ವಸ್ತ್ರಗಳ ನಿಯಂತ್ರಣ, ಉಕ್ರೇನ್ ಸಂಘರ್ಷ, ಇರಾನ್ ಸಂಘರ್ಷ ಸೇರಿದಂತೆ ಜಾಗತಿಕ ವಿಚಾರಗಳ ಬಗ್ಗೆ ತ್ರಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ನಿಮ್ಮ ಹಸಿವು ಎಷ್ಟಿದ್ದರೂ ತೀರದು, ತೆರಿಗೆ ವಿನಾಯಿತಿಗಳಿಂದ ಬಂದ ಲಾಭವನ್ನ ಜೇಬಿಗಿಳಿಸಿಕೊಂಡಿವೆ: ಕಾರ್ಪೊರೇಟ್ ಕಂಪನಿಗಳ ವಿರುದ್ಧ ಸಿಡಿದ ಮೋದಿ
ಸಭೆಯ ಆರಂಭದಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಟ್ರಂಪ್, ನಾವು ಇತಿಹಾಸ ನಿರ್ಮಿಸುತ್ತಿದ್ದೇವೆ ಅಂತ ಹೇಳಿದ್ರು. ಜಗತ್ತಿನಲ್ಲಿರುವ ಅಣ್ವಸ್ತçಗಳ ಸಂಖ್ಯೆ ಕಡಿಮೆ ಮಾಡುವುದು. ಅವುಗಳ ಅಪಾಯವನ್ನು ತಗ್ಗಿಸುವ ನಿಟ್ಟಿನಲ್ಲಿ ಮೂವರು ಮಾತುಕತೆ ನಡೆಸೋದಾಗಿ ಹೇಳಿದ್ದಾರೆ.
ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರು ಅಣ್ವಸ್ತ್ರಗಳ ಸಂಪೂರ್ಣ ನಿಷೇಧದ ಬಗ್ಗೆ ಪ್ರಸ್ತಾಪಿಸಿದರು. ಅಲ್ಲದೆ, ಈಗಾಗಲೇ ದೇಶಗಳು ಹೊಂದಿರುವ ಅಣ್ವಸ್ತ್ರಗಳ ನಾಶಕ್ಕೂ ಆಗ್ರಹಿಸಿದ್ದಾರೆ. ಇನ್ನೂ, ರಷ್ಯಾ ಅಧ್ಯಕ್ಷ ಪುಟಿನ್ ಮಾತಾಡಿ, ಜಗತ್ತಿನಲ್ಲಿ ಶಾಂತಿ ಕಾಪಾಡುವ ಹೊಣೆ ಮೂರು ದೇಶಗಳ ಮೇಲೂ ಇದೆ ಅಂತ ತಿಳಿಸಿದ್ದಾರೆ.ಇದನ್ನೂ ಓದಿ: ʻಬಸವ ಮಂಟಪʼ ಕೃತಿ ಬ್ಯಾನ್ – ಕಾನೂನು ಅಭಿಪ್ರಾಯ ಪಡೆದು ಕ್ರಮ ವಹಿಸಲು ಸಿಎಸ್ಗೆ ಸಿಎಂ ಸೂಚನೆ
