ದಾವಣಗೆರೆ: ಕುರಿಗಳಿಗೆ ನೀರು ಕುಡಿಸಲು ಕೆರೆಗೆ ಇಳಿದಿದ್ದ ಇಬ್ಬರು ಸಹೋದರರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಹದಡಿ ಕೆರೆಯಲ್ಲಿ (Hadadi Lake) ನಡೆದಿದೆ.
ಬಟ್ಲಕಟ್ಟೆ ಗ್ರಾಮದ ಕುರಿಗಾಯಿಗಳಾದ ದೇವರಾಜ್ ಹಾಗೂ ಶಿವರಾಜ್ ಮೃತ ದುರ್ದೈವಿಗಳು. ಇಬ್ಬರು ಮಧ್ಯಾಹ್ನ ಕುರಿಗಳಿಗೆ ನೀರು ಕುಡಿಸಿ ಮೈ ತೊಳೆಯಲು ಕೆರೆಗೆ ಇಳಿದಿದ್ದರು. ಈ ವೇಳೆ, ಅಯತಪ್ಪಿ ಕೆರೆಯಲ್ಲಿದ್ದ ಗುಂಡಿಗಳಿಗೆ ಇಬ್ಬರು ಬಿದ್ದಿದ್ದರು. ಮೇಲೇಳಲು ಸಾಧ್ಯವಾಗದೆ ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೇ ಓದಿ: ವ್ಯಕ್ತಿ ಕಾಣೆಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ – ಬಾವಿಯಲ್ಲಿ ಶವ ಪತ್ತೆ, ವೈದ್ಯ ಸೇರಿ ನಾಲ್ವರು ಅರೆಸ್ಟ್
ಅಗ್ನಿಶಾಮಕ ಸಿಬ್ಬಂದಿ ಒಂದು ಮೃತದೇಹವನ್ನು ತೆಗೆದಿದ್ದು, ಮತ್ತೊಂದು ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸ್ಥಳಕ್ಕೆ ಹದಡಿ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಇದನ್ನೇ ಓದಿ: ಟ್ರೈನ್ನಿಂದ ಜಿಗಿದು MLC ನಮೋಶಿ ಆಪ್ತ ಸಹಾಯಕ ಅನುಮಾನಾಸ್ಪದ ಸಾವು
