ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ತೀವ್ರಗೊಂಡು ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ. ಈ ಹವಾಮಾನ ವೈಪರೀತ್ಯದ ಪರಿಣಾಮವಾಗಿ ಇಂದಿನಿಂದ ರಾಜ್ಯದ ಹವಾಮಾನದಲ್ಲಿ ಮಹತ್ವದ ಬದಲಾವಣೆಯಾಗಲಿದ್ದು, ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ 11 ಜಿಲ್ಲೆಗಳಲ್ಲಿ ಮತ್ತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡ, ಉತ್ತರ ಒಳನಾಡಿನ ಗದಗ, ಕೊಪ್ಪಳ, ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಲಿದೆ ಎಂದು ಇಲಾಖೆ ತಿಳಿಸಿದೆ.
ಬೆಂಗಳೂರಲ್ಲಿ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 28-16
ಮಂಗಳೂರು: 33-22
ಶಿವಮೊಗ್ಗ: 31-14
ಬೆಳಗಾವಿ: 28 -16
ಮೈಸೂರು: 29-16
ಮಂಡ್ಯ: 30-16
ಮಡಿಕೇರಿ: 28-16
ರಾಮನಗರ: 29-16
ಹಾಸನ: 28-14
ಚಾಮರಾಜನಗರ: 30-17
ಚಿಕ್ಕಬಳ್ಳಾಪುರ: 28-14
ಕೋಲಾರ: 28-14
ತುಮಕೂರು: 28-14
ಉಡುಪಿ: 32-21
ಕಾರವಾರ: 31-23
ಚಿಕ್ಕಮಗಳೂರು: 26-13
ದಾವಣಗೆರೆ: 31-13
ಹುಬ್ಬಳ್ಳಿ: 30-15
ಚಿತ್ರದುರ್ಗ: 29-14
ಹಾವೇರಿ: 31-14
ಬಳ್ಳಾರಿ: 31-16
ಗದಗ: 29-16
ಕೊಪ್ಪಳ: 30-16
ರಾಯಚೂರು: 32-16
ಯಾದಗಿರಿ: 31-14
ವಿಜಯಪುರ: 29-14
ಕಲಬುರಗಿ: 31-14
ಬಾಗಲಕೋಟೆ: 30-16






