ಚೆನ್ನೈ: 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕೊಳತ್ತೂರು ಕ್ಷೇತ್ರದಲ್ಲಿ ಎಂ.ಕೆ ಸ್ಟಾಲಿನ್ ಸೋಲಿಸಿದ್ದ ಟಿವಿಕೆ ಶಾಸಕ ವಿ.ಎನ್ ಬಾಬು (75) ನಿಧನರಾಗಿದ್ದಾರೆ.
V.S. Babu, Member of the Tamil Nadu Legislative Assembly for the Kolathur constituency, died while undergoing prolonged treatment for a respiratory ailment at MGM Healthcare in Chennai. https://t.co/ewbumzTaef
— ANI (@ANI) November 19, 2026
ತಮಿಳುನಾಡಿನ ಕೊಳತ್ತೂರು ಕ್ಷೇತ್ರ ಪ್ರತಿನಿಧಿಸುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಶಾಸಕ ವಿಎಸ್ ಬಾಬು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು. ಅದಕ್ಕಾಗಿ ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚೆನ್ನೈನ ಎಂಜಿಎಂ ಹೆಲ್ತ್ಕೇರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮಧ್ಯಾಹ್ನ 2.24ಕ್ಕೆ ಕೊನೆಯುಸಿರೆಳೆದಿದ್ದಾರೆ.
ಆಸ್ಪತ್ರೆ ಅಧಿಕೃತ ಹೇಳಿಕೆಯಲ್ಲಿ ಅವರ ಸಾವನ್ನು ದೃಢಪಡಿಸಿದೆ. ಬಾಬು ಅವರನ್ನು ಚೆನ್ನೈ ಮೂಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಅವರು ಉಸಿರಾಟದ ತೊಂದರೆಗೆ ಚಿಕಿತ್ಸೆ ಪಡೆಯುತ್ತಿದ್ದರು.
