ಯಾದಗಿರಿ: ಟ್ರೈನ್ನಿಂದ ಜಿಗಿದು ವಿಧಾನ ಪರಿಷತ್ ಸದಸ್ಯರ ಆಪ್ತ ಸಹಾಯಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಯಾದಗಿರಿ (Yadagiri) ತಾಲೂಕಿನ ಮುಷ್ಟೂರ್ ಬಳಿ ನಡೆದಿದೆ.
ವಿಧಾನ ಪರಿಷತ್ (Legislative Council) ಸದಸ್ಯ ಶಶೀಲ್ ನಮೋಶಿ ಅವರ ಆಪ್ತ ಸಾಹಯಕ ರಾಜಕುಮಾರ (54) ಮೃತರು ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ನಾವು ಕಟ್ಟಿದ ಹಣ ಕೂಡ ವಾಪಸ್ ಬಂದಿಲ್ಲ – ಬೆಳೆ ವಿಮೆ ಹಂಚಿಕೆ ತಾರತಮ್ಯದ ವಿರುದ್ಧ ಸಿಡಿದೆದ್ದ ರೈತರು
ಮೃತ ರಾಜಕುಮಾರ ಶಶೀಲ್ ನಮೋಶಿ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹೋಗಿದ್ದರು. ಕಾರ್ಯಕ್ರಮ ಮುಗಿಸಿ ಬಸವ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಗಳೂರಿನಿಂದ ಕಲಬುರಗಿಗೆ ವಾಪಸ್ ಬರುತ್ತಿದ್ದರು. ಈ ವೇಳೆ ಟ್ರೈನ್ನಿಂದ ಜಿಗಿದಿದ್ದಾರೆ ಎನ್ನಲಾಗಿದೆ.
ಸದ್ಯ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ರಾಯಚೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಯಲ್ಲಮ್ಮ ದೇವಿಗೆ ಸರ್ಪ ದೋಷ ವದಂತಿ; ಭಕ್ತರು ಆತಂಕಪಡುವ ಅಗತ್ಯವಿಲ್ಲ – ಅರ್ಚಕ ರಾಜು ಪಾಟೀಲ್ ಸ್ಪಷ್ಟನೆ
