ಚಿಕ್ಕಮಗಳೂರು: ಜಿಲ್ಲೆಯಲ್ಲಿ (Chikkamagaluru) ಮಾನವ ಕಾಡಾನೆ (Elephant) ಸಂಘರ್ಷ ಮುಂದುವರಿದಿದೆ. ಕಾಡಾನೆ ದಾಳಿಗೆ ಎನ್ಆರ್ಪುರದ (NR Pura) ಹೆನ್ನಂಗಿ ಮೂಲದ ಕೃಷಿಕ ಬಲಿಯಾಗಿದ್ದಾರೆ. ಇದರಿಂದ ರೈತರು ಹಾಗೂ ಸಾರ್ವಜನಿಕರು ಎನ್ಆರ್ಪುರ (NR Pura Bandh) ಬಂದ್ಗೆ ಕರೆಕೊಟ್ಟು ಪ್ರತಿಭಟನೆ ಆರಂಭಿಸಿದ್ದಾರೆ.
ಆನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಕಾಡಾನೆಗಳು ಅರಣ್ಯದಿಂದ ಬಾರದಂತೆ ತಡೆಯಲು ಕ್ರಮಕೈಗೊಳ್ಳಬೇಕು. ಆಗ ಮಾತ್ರ ರೈತರು ಹಾಗೂ ಸಾರ್ವಜನಿಕರು ತೋಟ, ಗದ್ದೆಗಳಲ್ಲಿ ಓಡಾಡಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಆನೆಗಳ ದಾಳಿಗೆ ಇದೇ ರೀತಿ ಬಲಿಯಾಗಬೇಕಾಗುತ್ತದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಬೇಲೂರಿನಲ್ಲಿ 2ನೇ ದಿನವೂ ವಿಫಲವಾದ ಕಾಡಾನೆ ಸೆರೆ ಕಾರ್ಯಾಚರಣೆ
ಹೆನ್ನಂಗಿ ಗ್ರಾಮದಲ್ಲಿ ಕೃಷಿಕ ಕೃಷ್ಣಮೂರ್ತಿಯವರು ನ.18 ರಂದು ಕಾಡಾನೆ ದಾಳಿಗೆ ಬಲಿಯಾಗಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಮೃತದೇಹ ರವಾನಿಸಲು ನಿನ್ನೆ (ನ.18) ಮುಂದಾಗಿದ್ದರು. ಮೂಡಬಾಗಿಲು ಸಮೀಪ ಅಂಬುಲೈನ್ಸ್ ತಡೆದಿದ್ದ ಗ್ರಾಮಸ್ಥರು, ಹೆನ್ನಂಗಿಗೆ ವಾಪಸ್ ಕಳುಹಿಸಿದ್ದರು.
ಕೃಷ್ಣಮೂರ್ತಿಯವರು ತೋಟದಲ್ಲಿದ್ದಾಗ ಏಕಾಏಕಿ ಎದುರಾದ ಕಾಡಾನೆ ಅವರ ಮೇಲೆ ದಾಳಿ ನಡೆಸಿತ್ತು. ಕಾಡಾನೆ ದಾಳಿಯಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಪ್ರಕರಣ ಸಂಬಂಧ ಎನ್.ಆರ್. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡಾನೆಗಳ ನಿರಂತರ ಹಾವಳಿ ಹಾಗೂ ಪ್ರಾಣ ಹಾನಿಯಿಂದಾಗಿ ಈ ಭಾಗದ ರೈತರು ತೀವ್ರ ಆತಂಕಕ್ಕೀಡಾಗಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ – ರಸ್ತೆ ತಡೆದು ಗ್ರಾಮಸ್ಥರಿಂದ ಪ್ರತಿಭಟನೆ

