– 1,500 ಕೋಟಿ ಕ್ಲಬ್ಗೆ ಲಗ್ಗೆ ಇಡಲು ಸಜ್ಜು
ರಾಮಾಯಣ (Ramayana) ಸಿನಿಮಾ ಭಾರತೀಯ ಚಿತ್ರರಂಗವಷ್ಟೇ ಅಲ್ಲದೆ ಹಾಲಿವುಡ್ ಅಂಗಳದಲ್ಲೂ ದಾಖಲೆ ಬರೆಯಲು ಸಜ್ಜಾಗಿದೆ. ಜಾಗತಿಕ ಮಟ್ಟದ ಅತ್ಯಂತ ಜನಪ್ರಿಯ ಸಿನಿಮಾಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿರುವ ರಾಮಾಯಣ ವರ್ಲ್ಡ್ವೈಡ್ ಹೊಸ ದಾಖಲೆಯನ್ನೇ ಸೃಷ್ಟಿಸಿದೆ.
ರಾಕಿಂಗ್ ಸ್ಟಾರ್ ಯಶ್ (yash), ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ (Sai Pallavi) ನಟನೆಯ ‘ರಾಮಾಯಣ’ ಸಿನಿಮಾ ಈಗ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು, ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಭಾರತದಲ್ಲಿ ಮಾತ್ರವಲ್ಲದೆ, ಇಡೀ ಪ್ರಪಂಚದಾದ್ಯಂತ ಈ ಸಿನಿಮಾದ ಕ್ರೇಜ್ ಜೋರಾಗಿದೆ.ಇದನ್ನೂ ಓದಿ: ಪ್ರತಿಯೊಬ್ಬ ಭಾರತೀಯನ ರಕ್ತದ ಕಣದಲ್ಲಿ ರಾಮನಿದ್ದಾನೆ – ಜಾವೇದ್ ಅಖ್ತರ್ ಹೇಳಿಕೆಗೆ ಮುಸ್ಲಿಂ ಮುಖಂಡರ ವಿರೋಧ
ಹಾಲಿವುಡ್ ಸಿನಿಮಾಗಳಿಗೆ ಟಕ್ಕರ್
ಜಾಗತಿಕ ಮಟ್ಟದ ಅತ್ಯಂತ ಜನಪ್ರಿಯ ಸಿನಿಮಾಗಳ ಪಟ್ಟಿಯಲ್ಲಿ (IMDb Global Top 10) ʻರಾಮಾಯಣʼ 3ನೇ ಸ್ಥಾನ ಪಡೆದುಕೊಂಡಿದೆ. ಅಚ್ಚರಿಯ ವಿಷಯವೇನೆಂದರೆ, ಖ್ಯಾತ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ನ ʻದಿ ಒಡಿಸ್ಸಿʼ (The Odyssey) ಸಿನಿಮಾ 4ನೇ ಸ್ಥಾನದಲ್ಲಿದ್ದು, ʻರಾಮಾಯಣʼ ಅದನ್ನು ಹಿಂದಿಕ್ಕಿ ಮುಂದೆ ಸಾಗಿದೆ. ಅಷ್ಟೇ ಅಲ್ಲ, ಈ ಗ್ಲೋಬಲ್ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ‘ರಾಮಾಯಣ’ ಪಾತ್ರವಾಗಿದೆ.
1,500 ಕೋಟಿ ಕ್ಲಬ್ಗೆ ಲಗ್ಗೆ
ರಾಮಾಯಣ ಸಿನಿಮಾ ರಿಲೀಸ್ ಆದ 13 ದಿನಗಳಲ್ಲಿ ಭಾರತದಲ್ಲಿ ಬರೋಬ್ಬರಿ 821.42 ಕೋಟಿ ರೂ. ನಿವ್ವಳ (Net) ಕಲೆಕ್ಷನ್ ಮಾಡಿದೆ. ಇನ್ನು ಪ್ರಪಂಚದಾದ್ಯಂತ ಒಟ್ಟು 1,483.50 ಕೋಟಿ ರೂಪಾಯಿ ಗಳಿಸಿದ್ದು, ಇನ್ನೇನು ಕೆಲವೇ ಗಂಟೆಗಳಲ್ಲಿ 1,500 ಕೋಟಿ ಕ್ಲಬ್ ಸೇರುವುದು ಪಕ್ಕಾ ಆಗಿದೆ. ಈ ಮೂಲಕ ‘ದಂಗಲ್’, ‘ಧುರಂಧರ್ 2’, ‘ಬಾಹುಬಲಿ 2’ ಮತ್ತು ‘ಪುಷ್ಪ 2’ ನಂತರ ಅತಿ ಹೆಚ್ಚು ಗಳಿಕೆ ಮಾಡಿದ 5ನೇ ಭಾರತೀಯ ಸಿನಿಮಾ ಎಂಬ ದಾಖಲೆ ರಾಮಾಯಣ ಬರೆದಿದೆ.
ಪಾರ್ಟ್-2 ಬಗ್ಗೆ ಬಿಗ್ ಅಪ್ಡೇಟ್
ಮೊದಲ ಭಾಗವು ಜಟಾಯು ಮತ್ತು ರಾವಣನ ಕಾಳಗದೊಂದಿಗೆ ಮುಕ್ತಾಯವಾಗುತ್ತದೆ. ಮುಂದೆ ಏನಾಗುತ್ತೆ ಅನ್ನೋ ಕುತೂಹಲಕ್ಕೆ 2028ರ ದೀಪಾವಳಿಯಲ್ಲಿ ಬರಲಿರುವ ‘ರಾಮಾಯಣ ಪಾರ್ಟ್-2’ ಉತ್ತರ ನೀಡಲಿದ್ದು, ಶ್ರೀರಾಮ ಅಯೋಧ್ಯೆಗೆ ಮರಳುವ ಕಥೆಯನ್ನು ಹೊಂದಿರಲಿದೆ.ಇದನ್ನೂ ಓದಿ: ದಯಾಳ್ ಪದ್ಮನಾಭ್ ನಿರ್ದೇಶನದಲ್ಲಿ ʻನರಿ ಕಥೆʼ ಸಿನಿಮಾ
ಸದ್ಯ ಜಾಗತಿಕವಾಗಿ ಟ್ರೆಂಡಿಂಗ್ನಲ್ಲಿರುವ ಟಾಪ್ 10 ಸಿನಿಮಾಗಳು (IMDb & ಸ್ಟ್ರೀಮಿಂಗ್):
1. ಯು ಕ್ಯಾನ್ ಸೀ ಎವರಿಥಿಂಗ್ (You Can See Everything)
2. ಅವೆಂಜರ್ / ಸ್ಪೈಡರ್-ಮ್ಯಾನ್: ಬ್ರಾಂಡ್ ನ್ಯೂ ಡೇ
3. ರಾಮಾಯಣ (Ramayana – 2026)
4. ದಿ ಒಡಿಸ್ಸಿ (The Odyssey)
5. ದಿ ಎಂಡ್ ಆಫ್ ಓಕ್ ಸ್ಟ್ರೀಟ್ (The End of Oak Street)
6. ಹಾರ್ಟ್ಲ್ಯಾಂಡ್ (Heartland)
7. ಹಾರ್ಟ್ ಆಫ್ ದಿ ಬೀಸ್ಟ್ (Heart of the Beast)
8. ವೈಲ್ಡ್ ಹಾರ್ಸ್ ನೈನ್ (Wild Horse Nine)
9. ಗಾಡ್ಜಿಲ್ಲಾ ಮೈನಸ್ ಝೀರೋ (Godzilla Minus Zero)
10. ರೆಸಿಡೆಂಟ್ ಈವಿಲ್ (Resident Evil)

