ನವದೆಹಲಿ: ತಂದೆ-ತಾಯಿಯ ನಡುವಿನ ಅನ್ಯೂನ್ಯತೆಯ ಬಗ್ಗೆ ಆಡಿದ್ದ ಮಾತುಗಳನ್ನು ವ್ಯಂಗ್ಯವಾಡಿದ್ದ ಬಿಜೆಪಿಗೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಶಿವ-ಪಾರ್ವತಿಯರ ಫೋಟೋವನ್ನು ಫೋಸ್ಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.
ಸೋಮವಾರ ನಡೆದ ಸೋನಿಯಾ ಗಾಂಧಿ ಅವರ ಆತ್ಮಕಥನ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, “ನಮ್ಮ ಮನೆಯಲ್ಲಿ ಪ್ರತಿದಿನ ಊಟದ ಸಮಯದಲ್ಲಿ ತಾಯಿ ಸೋನಿಯಾ ಗಾಂಧಿ ಅವರು ತಂದೆ ರಾಜೀವ್ ಗಾಂಧಿ ಅವರ ತೊಡೆಯ ಮೇಲೆ ಕುಳಿತಿರುತ್ತಿದ್ದರು. ನನ್ನ ಬಾಲ್ಯದಲ್ಲಿ ಪ್ರಪಂಚದ ಎಲ್ಲಾ ಮನೆಗಳಲ್ಲೂ ತಂದೆ-ತಾಯಿ ಹೀಗೆಯೇ ಅನ್ಯೋನ್ಯವಾಗಿ ಕುಳಿತಿರುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ, ದೊಡ್ಡವನಾದ ಮೇಲೆ ನನ್ನ ಸ್ನೇಹಿತರ ಮನೆಗಳಿಗೆ ಹೋದಾಗ ಅಲ್ಲಿನ ಪೋಷಕರು ಬೇರೆ ಬೇರೆಯಾಗಿ ಕುಳಿತಿರುವುದನ್ನು ಕಂಡು ನನಗೆ ಆಶ್ಚರ್ಯವಾಗಿತ್ತು” ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದರು. ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ರಾಹುಲ್ ಗಾಂಧಿ ವಿರುದ್ಧ ವ್ಯಂಗ್ಯವಾಡಿದ್ದರು.ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಗೂಂಡಾಗಿರಿ ಹೆಚ್ಚಾಗಿದೆ: ಆರ್.ಅಶೋಕ್
Fear, anger and hatred have woven a web in the hearts of BJP and RSS supporters that stops them from experiencing and expressing love.
As a true Hindu, it is my duty to free them from this web, so that they too can start to experience the breathtaking beauty and joy of love and belonging in their lives.
Satyam Shivam Sundaram.
— Rahul Gandhi (@RahulGandhi) November 17, 2026
ಇದೀಗ ಬಿಜೆಪಿಯ ಟೀಕೆಗಳಿಗೆ ಸೋಷಿಯಲ್ ಮೀಡಿಯಾ ಎಕ್ಸ್ ಮೂಲಕ ಉತ್ತರ ನೀಡಿರುವ ರಾಹುಲ್ ಗಾಂಧಿ, ಶಿವನ ತೊಡೆಯ ಮೇಲೆ ಪಾರ್ವತಿ ದೇವಿ ಕುಳಿತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲ “ಭಯ, ಕೋಪ ಮತ್ತು ದ್ವೇಷಗಳು ಬಿಜೆಪಿ ಹಾಗೂ ಆರ್ಎಸ್ಎಸ್ ಬೆಂಬಲಿಗರ ಹೃದಯದಲ್ಲಿ ಒಂದು ಬಲೆಯನ್ನು ಹೆಣೆದಿವೆ. ಇದು ಅವರಿಗೆ ಪ್ರೀತಿಯನ್ನು ಅನುಭವಿಸಲು ಮತ್ತು ವ್ಯಕ್ತಪಡಿಸಲು ಬಿಡುತ್ತಿಲ್ಲ. ಒಬ್ಬ ನಿಜವಾದ ಹಿಂದೂವಾಗಿ, ಅವರನ್ನು ಈ ದ್ವೇಷದ ಜಾಲದಿಂದ ಮುಕ್ತಗೊಳಿಸುವುದು ನನ್ನ ಕರ್ತವ್ಯ. ಆಗಲಾದರೂ ಅವರು ತಮ್ಮ ಜೀವನದಲ್ಲಿ ಪ್ರೀತಿ ಮತ್ತು ಒಡನಾಟದ ನಿಜವಾದ ಸೌಂದರ್ಯವನ್ನು ಅನುಭವಿಸಲು ಸಾಧ್ಯವಾಗುತ್ತದೆ” ಎಂದು ರಾಹುಲ್ ಬರೆದುಕೊಂಡಿದ್ದಾರೆ. ಜೊತೆಗೆ ಕೊನೆಯಲ್ಲಿ ‘ಸತ್ಯಂ ಶಿವಂ ಸುಂದರಂ’ ಎಂದು ಉಲ್ಲೇಖಿಸಿ ಬಿಜೆಪಿಗೆ ಟಾಂಗ್ ನೀಡಿದ್ದಾರೆ.ಇದನ್ನೂ ಓದಿ: ಶಿವಶಂಕರಪ್ಪ, ಗ್ಯಾನೇಂದ್ರ ಜೊತೆ ಹಣಕಾಸಿನ ವ್ಯವಹಾರ ಆರೋಪ – ಕೆಪಿಎಸ್ಸಿ ಸದಸ್ಯೆ ಗೀತಾ ಅರೆಸ್ಟ್
