ಬಾಕ್ಸ್ ಆಫೀಸ್ನಲ್ಲಿ ‘ರಾಮಾಯಣ’ ಸಿನಿಮಾದ (Ramayana) ಅಬ್ಬರ ಮುಂದುವರಿದಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಪೌರಾಣಿಕ ಸಿನಿಮಾ ಬಿಡುಗಡೆಯಾದ 12 ದಿನಗಳಲ್ಲಿ ಎಸ್ಎಸ್ ರಾಜಮೌಳಿಯ ‘ಆರ್ಆರ್ಆರ್’ (RRR) ಚಿತ್ರದ ಭಾರತೀಯ ಕಲೆಕ್ಷನ್ ದಾಖಲೆಯನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದೆ.
ಎರಡನೇ ವಾರಾಂತ್ಯದಲ್ಲಿ ಭರ್ಜರಿ ಗಳಿಕೆ ಕಂಡಿರುವ ರಾಮಾಯಣ, ಶನಿವಾರ 72.90 ಕೋಟಿ ರೂ. ಹಾಗೂ ಭಾನುವಾರ 75 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಆದರೆ, ವಾರದ ಮೊದಲ ದಿನವಾದ ಸೋಮವಾರ (12ನೇ ದಿನ) ಸಹಜವಾಗಿಯೇ ಗಳಿಕೆಯಲ್ಲಿ ಕೊಂಚ ಇಳಿಕೆಯಾಗಿದ್ದು, ಭಾರತದಲ್ಲಿ 32 ಕೋಟಿ ರೂ. ನಿವ್ವಳ ಗಳಿಕೆ ಕಂಡಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ನಿವ್ವಳ ಕಲೆಕ್ಷನ್ 792.60 ಕೋಟಿ ರೂ.ಗೆ ತಲುಪಿದೆ.
‘ಆರ್ಆರ್ಆರ್’ ಸಿನಿಮಾ ಭಾರತದಲ್ಲಿ ಒಟ್ಟಾರೆ 782.20 ಕೋಟಿ ರೂ. ನಿವ್ವಳ ಗಳಿಸಿತ್ತು. ಈಗ ರಾಮಾಯಣ ಎರಡು ವಾರ ಕಳೆಯುವ ಮುನ್ನವೇ ಆ ದಾಖಲೆಯನ್ನು ಬ್ರೇಕ್ ಮಾಡಿದೆ. ಇನ್ನು ವಿಶ್ವದಾದ್ಯಂತ ರಾಮಾಯಣ 12 ದಿನಗಳಲ್ಲಿ ಬರೋಬ್ಬರಿ 1,437.25 ಕೋಟಿ ರೂ. ಬಾಚಿಕೊಂಡಿದೆ. ಇದರಲ್ಲಿ ಭಾರತದಿಂದ 947.25 ಕೋಟಿ ರೂ. ಹಾಗೂ ವಿದೇಶಿ ಮಾರುಕಟ್ಟೆಗಳಿಂದ 490 ಕೋಟಿ ರೂ. ಗಳಿಕೆಯಾಗಿದೆ.ಇದನ್ನೂ ಓದಿ: ದೆಹಲಿ ಅಂಗಳದಲ್ಲಿ ಜಮೀರ್ ಫುಲ್ ಆ್ಯಕ್ಟಿವ್; ಪುಸ್ತಕ ನೀಡುವ ನೆಪದಲ್ಲಿ ಹೈಕಮಾಂಡ್ ವರಿಷ್ಠರ ಭೇಟಿ
ಸದ್ಯ ಬಾಕ್ಸ್ ಆಫೀಸ್ನಲ್ಲಿ ನಾಗಾಲೋಟ ಮುಂದುವರಿಸಿರುವ ರಾಮಾಯಣ, ಈಗ ಅಲ್ಲು ಅರ್ಜುನ್ ಅವರ ‘ಪುಷ್ಪ 2’ ಚಿತ್ರದ 1,742.10 ಕೋಟಿ ರೂ. ವಿಶ್ವದಾಖಲೆಯನ್ನು ಮುರಿಯುವತ್ತ ಕಣ್ಣಿಟ್ಟಿದೆ.ಇದನ್ನೂ ಓದಿ: UP ಮತದಾರರ ಪಟ್ಟಿಯ ಕರಡು ಪರಿಷ್ಕರಣೆಯಲ್ಲಿ 19 ಲಕ್ಷ ಮತದಾರರ ಸೇರ್ಪಡೆ – ಒಟ್ಟು ವೋಟರ್ಸ್ ಸಂಖ್ಯೆ 13.58 ಕೋಟಿಗೂ ಹೆಚ್ಚು

